ಬೇಸಿಗೆ ಬಿಸಿಲಿಗೆ ಬಳಲಿದ ಜನತೆಗೆ ಟ್ರಾಫಿಕ್ ಪೊಲೀಸರಿಂದ ರಿಲೀಫ್; ಮಧ್ಯಾಹ್ನ ಟ್ರಾಫಿಕ್ ಸಿಗ್ನಲ್‌ಗಳು ಸ್ವಿಚ್ ಆಫ್

By Sathish Kumar KH  |  First Published Apr 8, 2024, 5:07 PM IST

ರಾಜ್ಯದಲ್ಲಿ ಬೇಸಿಗೆ ಬಿಸಿಲಿನ ತಾಪ ಹೆಚ್ಚಾಗಿದ್ದು, ಈ ಬೃಹತ್ ನಗರದಲ್ಲಿ ಮಧ್ಯಾಹ್ನ 12 ಗಂಟೆಯಿಂದ ಸಂಜೆ 5 ಗಂಟೆವರೆಗೆ ಟ್ರಾಫಿಕ್‌ ಸಿಗ್ನಲ್‌ಗಳನ್ನು ಸ್ವಿಚ್ ಆಫ್ ಮಾಡಲು ಪೊಲೀಸರು ತೀರ್ಮಾನಿಸಿದ್ದಾರೆ.


ಕಲಬುರಗಿ (ಏ.08): ಕಲಬುರಗಿ ನಗರದಲ್ಲಿ 44 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಜನರಿಗೆ ಬೇಸಿಗೆ ತಾಪದಿಂದ ರಿಲೀಫ್‌ ಕೊಡಲು ಟ್ರಾಫಿಕ್‌ ಪೊಲೀಸರು ಮುಂದಾಗಿದ್ದಾರೆ. ಕಲಬುರಗಿ ನಗರದಾದ್ಯಂತ 4 ಸಿಗ್ನಲ್‌ಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸಿಗ್ನಲ್‌ಗಳನ್ನು ಮಧ್ಯಾಹ್ನದ ವೇಳೆ ಸ್ವಿಚ್‌ ಆಫ್ ಮಾಡಲು ತೀರ್ಮಾನಿಸಲಾಗಿದೆ.

ರಾಜ್ಯದಲ್ಲಿ ಉತ್ತರ ಕರ್ನಾಟಕ ಭಾಗದ ಬಳ್ಳಾರಿ, ರಾಯಚೂರು, ಕಲಬುರಗಿ ಸೇತರಿದಂತೆ ಈಗ ಎಲ್ಲೆಡೆ ಭಾರಿ ಬೇಸಿಗೆ ಬಿಸಲು ಶುರುವಾಗಿದೆ. ಮೊದಲೇ ಮಳೆಯಿಲ್ಲದೇ ಬರದಿಂದ ಕಂಗೆಟ್ಟಿರುವ ರಾಜ್ಯದ ಜನತೆಗೆ ಬಿರು ಬಿಸಿಲಿನ ತಾಪವನ್ನೂ ತಡೆದುಕೊಳ್ಳಲಾಗುತ್ತಿಲ್ಲ. ಇನ್ನು, ಕಲಬುರಗಿಯಲ್ಲಿ ಕಳೆದ ಎರಡು ದಿನಗಳಿಂದ 44 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿತ್ತು. ಅತ್ಯಧಿಕ ಉಷ್ಣಾಂಶ ದಾಖಲಾದ ಬೆನ್ನಲ್ಲಿಯೇ ಟ್ರಾಫಿಕ್ ಪೊಲೀಸರು ಸ್ಥಳೀಯ ಜನರಿಗೆ ನೆರವಾಗಲು ಮುಂದಾಗಿದ್ದಾರೆ.

Tap to resize

Latest Videos

undefined

ಕಲಬುರಗಿಯಲ್ಲಿ ಬಿಸಿಲು ಹೆಚ್ಚಾಗಿರುವ ಮಧ್ಯಾಹ್ನದ ಅವಧಿಯಲ್ಲಿ ಸಂಚಾರ ದಟ್ಟಣೆ ಕಡಿಮೆ ಇರುವ ಕಡೆಗಳಲ್ಲಿ ಟ್ರಾಫಿಕ್‌ ಸಿಗ್ನಲ್‌ಗಳನ್ನು ಸ್ವಿಚ್ ಆಫ್ ಮಾಡಲು ತೀರ್ಮಾನ ಮಾಡಲಾಲಾಗಿದೆ. ಇನ್ನು ಕಲಬರುಗಿ ನಗರದಲ್ಲಿ ಒಟ್ಟು 15 ಸಿಗ್ನಲ್‌ಗಳಿದ್ದು, ಇವುಗಳ ಪೈಕಿ 3-4 ಸಿಗ್ನಲ್‌ಗಳನ್ನು ಹೊರತು ಪಡಿಸಿ ಉಳಿದೆಡೆಯ ಸಿಗ್ನಲ್ ಮಧ್ಯಾಹ್ನ ಬಂದ್ ಮಾಡಲು ಮುಂದಾಗಿದೆ. ಆದರೆ, ಎಲ್ಲೆಲ್ಲಿ ಟ್ರಾಫಿಕ್ ಮೂಮೆಂಟ್ ಕಡಿಮೆ ಇರುತ್ತದೋ ಅಂತಹ ಸಿಗ್ನಲ್ ಗಳಲ್ಲಿ ಮಾತ್ರ ಮಧ್ಯಾಹ್ನ 12 ರಿಂದ ಸಂಜೆ 5 ಗಂಟೆಯವರೆಗೆ ಸಿಗ್ನಲ್ ಆಫ್ ಮಾಡಲು ಕಲಬುರಗಿ ನಗರ ಪೊಲೀಸ್ ಕಮಿಷನರ್ ಸೂಚನೆ ನೀಡಿದ್ದಾರೆ.

ಛತ್ತೀಸ್‌ಘಡದಿಂದ ರಾಜ್ಯಕ್ಕೆ ಬೀಸಿದ ಉಷ್ಣ ಅಲೆಗಳು; 18 ಮುಂಜಾಗ್ರತೆ ಕ್ರಮಗಳ ಪಟ್ಟಿ ಬಿಡುಗಡೆ ಮಾಡಿದ ಹವಾಮಾನ ಇಲಾಖೆ

ಕಲಬುರಗಿ ನಗರ ಪೊಲೀಸ್ ಕಮಿಷನರ್ ಆರ್. ಚೇತನ್ ಅವರಿಗೆ ಸಾರ್ವಜನಿಕರಿಂದ ಮಧ್ಯಾಹ್ನದ ವೇಳೆ ಟ್ರಾಫಿಕ್ ಸಿಗ್ನಲ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಿಸಬೇಡಿ. ವಾಹನ ಸಂಚಾರ ವಿರಳವಾಗಿದ್ದರೂ ಸಿಗ್ನಲ್ ಹಾಕುವ ಮೂಲಕ ದ್ವಿಚಕ್ರ ವಾಹನ ಸವಾರರು, ಆಟೋಗಳು ಹಾಗೂ ಇತರೆ ವಾಹನ ಸವಾರರಿಗೆ ತುಂಬಾ ಸಮಸ್ಯೆ ಆಗುತ್ತದೆ. ಈ ಸಿಗ್ನಲ್ ಅವಧಿ ತಗ್ಗಿಸುವುದು ಅಥವಾ ಮಧ್ಯಾಹ್ನ ಸಿಗ್ನಲ್ ಆಫ್ ಮಾಡುವಂತೆ ಮನವಿ ಮಾಡಲಾಗಿತ್ತು. ಈ ಬಗ್ಗೆ ಸಂಚಾರಿ ಪೊಲೀಸ್‌ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ  ಕಲಬುರಗಿ ಸಿಟಿ ಪೊಲೀಸ್ ಕಮೀಷನರ್ ಚೇತನ್ ಅವರು, ಕಡಿಮೆ ಟ್ರಾಫಿಕ್ ಇರುವ ಪ್ರದೇಶಗಳಲ್ಲಿ ಸಿಗ್ನಲ್‌ಗಳಿಂದ ವಿನಾಯಿತಿ ನೀಡುವಂತೆ ಸೂಚನೆ ನೀಡಿದ್ದಾರೆ.

ಇನ್ನು ಕಲಬುರಗಿ ನಗರದಲ್ಲಿ ಹೆವಿ ಟ್ರಾಫಿಕ್ ಇರುವ ಸಿಗ್ನಲ್‌ಗಳಲ್ಲಿ ಈ ವಿನಾಯತಿ ಇಲ್ಲ. ಸಾರ್ವಜನಿಕರಿಗೆ ಬಿಸಿಲಿಂದ ತೊಂದರೆ ಆಗುವುದನ್ನು ತಪ್ಪಿಸಲು ಈ ಕ್ರಮ ಕೂಗೊಳ್ಳಲಾಗಿದೆ. ಇದನ್ನು ಯಾರೊಬ್ಬರೂ ದುರುಪಯೋಗ ಮಾಡಿಕೊಂಡು ಅಡ್ಡಾದಿಡ್ಡಿಯಾಗಿ ವಾಹನ ಸವಾರಿ ಮಾಡಬಾರದು. ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಬಾರದು ಎಂದು ಪೊಲೀಸ್ ಆಯುಕ್ತ ಚೇತನ್ ತಿಳಿಸಿದ್ದಾರೆ.

ಬಿರು ಬಿಸಿಲಿಗೆ ತತ್ತರಿಸಿದ ಕೊಡಗು ಜಿಲ್ಲೆ, ಗರಿಷ್ಟ 34 ಉಷ್ಣಾಂಶ ದಾಖಲು!

ಮಂಕಾದ ಲೋಕ ಚುನಾವಣಾ ಪ್ರಚಾರದ ವೈಖರಿ: ಕಲಬುರಗಿ ಖಡಕ್ ಬಿಸಿಲಿಗೆ ಚುನಾವಣಾ ಪ್ರಚಾರ ವೈಖರಿಯೂ ಮಂಕಾಗಿದೆ. ಕಲಬುರಗಿಯಲ್ಲಿ ನಿತ್ಯ 43 ರಿಂದ 44.5 ಡಿಗ್ರಿ ಸೆಲ್ಸಿಯಸ್ ಉಷ್ಟಾಂಶ ದಾಖಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಳಗ್ಗೆ 7 ರಿಂದ 11 ಗಂಟೆಯವರೆಗೆ ಮತ್ತು ಸಂಜೆ 5 ಗಂಟೆಯಿಂದ ರಾತ್ರಿ 10 ಟೆಯವರೆಗೆ ಮಾತ್ರ ರಾಜಕಾರಣಿಗಳು ಪ್ರಚಾರ ನಡೆಸುತ್ತಿದ್ದಾರೆ. ಸ್ವತಃ ಮಲ್ಲಿಕಾರ್ಜುನ ಖರ್ಗೆ ಅಳಿಯನೇ ಕಣದಲ್ಲಿದ್ರೂ, ಮತ್ತೊಮ್ಮೆ ಗೆಲ್ಲಲು ಬಿಜೆಪಿ ಪಣ ತೊಟ್ಟಿದೆ. ಆದರೆ, ರಣ ಬಿಸಿಲಿನ ಮುಂದೆ ರಾಜಕಾರಣಿಗಳ ಆಟ ನಡೆಯುತ್ತಿಲ್ಲ. ರಣಬಿಸಿಲಿಗೆ ಬೆದರಿ ಪ್ರಚಾರ ವೈಖರಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಬೆಳಿಗ್ಗೆ ಮತ್ತು ಸಂಜೆ ಮಾತ್ರ ಡೋರ್ ಟು ಡೋರ್ ಕ್ಯಾಂಪೇನ್ ಹಾಗೂ ಮಧ್ಯಾಹ್ನದಲ್ಲಿ ಅಲ್ಲೊಂದು ಇಲ್ಲೊಂದು ಸಮಾವೇಶ ಮಾಡಲಾಗುತ್ತಿದೆ.

click me!