T20 World Cup; ಸೆಮೀಸ್‌ಗೆ ಏರದ ಭಾರತ,  ಟಾಪ್‌ ಎತ್ತಿ 'ಎಲ್ಲ' ತೋರಿಸಿದ ಪಾಕ್ ಅಭಿಮಾನಿ!

First Published Nov 10, 2021, 9:03 PM IST

ನವದೆಹಲಿ(ನ. 10)  ವಿಶ್ವಕಪ್ ನಂತಹ (T20 World Cup) ದೊಡ್ಡ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿರುವಾಗ ಇನ್ನೊಂದು ಕಡೆ ಬೋಲ್ಡ್ (Bold) ಅವತಾರದವರು ಸುದ್ದಿ ಮಾಡುತ್ತಾರೆ.  ನಮ್ಮ ದೇಶ ಗೆದ್ದರೆ ಬಟ್ಟೆ ಬಿಚ್ಚೇನೆ ಎಂದು ಬೋಲ್ಡ್ ಹೇಳಿಕೆ ಕೊಟ್ಟು ಮರೆಯಾದ ಮಾಡೆಲ್ ಗಳು ಇದ್ದರು. ಈ ಹಿಂದೆ ಭಾರತ  ವಿಶ್ವಕಪ್ ಗೆದ್ದರೆ ಬೆತ್ತಲಾಗುತ್ತೇನೆ ಎಂದ ಪೂನಂ ಪಾಂಡೆ (Poonam Pandey) ದೊಡ್ಡ ಸುದ್ದಿ ಮಾಡಿದ್ದರು. ಇದು ಅಂಥದ್ದೆ ಸುದ್ದಿ. ಈಕೆ ಪಾಕಿಸ್ತಾನದ ಸುಂದರಿ. ಈಕೆಯ ಹೆಸರು (Ayesha Tahir) ಆಯೇಷಾ ತಾಹೀರ್!

 ಟಿ ಟ್ವೆಂಟಿ ವಿಶ್ವ ಕಪ್ ನಲ್ಲಿ ಅಫ್ಘಾನಿಸ್ತಾನದ ವಿರುದ್ಧ ನ್ಯೂಜಿಲೆಂಡ್ ಸೋತಿದ್ದರೆ ಭಾರತಕ್ಕೆ ಸೆಮೀಸ್ ಗೆ ಏರಲು ಒಂದು ಅವಕಾಶ ಇತ್ತು.  ಆದರೆ ನ್ಯೂಜಿಲೆಂಡ್ ಗೆದ್ದಿತ್ತು. ಇದಕ್ಕೆ ದಿಲ್ ಖುಷ್ ಆದ ಆಯೇಷಾ  ಮೊದಲೇ ಹೇಳಿದಂತೆ ಟಾಪ್ ಲೆಸ್ ಪೋಟೋ ಶೇರ್ ಮಾಡಿಕೊಂಡರು.

ಕೊನೆಗೂ ನ್ಯೂಜಿಲೆಂಡ್ ಗೆದ್ದಿದೆ. ನಾನು ಮೊದಲೆ ಹೇಳಿದಂತೆ ನನ್ನ ಪಿಂಕ್ ಟಾಪ್ ತೆಗೆದು.. ...   ಟ್ವಿಟರ್ ನಲ್ಲಿ ಹೀಗೆ ಬರೆದುಕೊಂಡು ಟಾಪ್ ಲೆಸ್ ಪೋಸ್ ಕೊಟ್ಟಿದ್ದಾರೆ.

ಇದಾದ ಮೇಲೆ ಭಾರತ ನಮೀಬಿಯಾದ ವಿರುದ್ಧ ಒಂದೇ ವಿಕೆಟ್ ಕಳೆದುಕೊಂಡು ಗೆದ್ದಿದ್ದಕ್ಕೂ ನ್ಯೂಡ್ ಪೋಟೋ ಒಂದನ್ನು ಅಪ್ ಲೋಡ್ ಮಾಡಿದ್ದಾರೆ. ಭಾರತ ಎಷ್ಟು ವಿಕೆಟ್ ಕಳೆದುಕೊಳ್ಳುತ್ತದೆ ಅಷ್ಟು ಬೆತ್ತಲೆ ಫೋಟೋ ಹಂಚಿಕೊಳ್ಳುತ್ತೇನೆ ಎಂದಿದ್ದಳು.

ಕಿರುತೆರೆ ನಟಿಯ ಟಾಪ್ ಲೆಸ್ ಯೋಗ ವೈರಲ್

ಇಷ್ಟೆ ಅಲ್ಲದೆ ಇನ್ನೊಂದು 'ಕೊಡುಗೆ' ಸಹ  ಘೋಷಣೆ ಮಾಡಿದ್ದಾಳೆ. ಒಂದು ವೇಳೆ ಸೆಮಿ ಫೈನಲ್ ನಲ್ಲಿ ಪಾಕಿಸ್ತಾನ ಆಸ್ಟ್ರೇಲಿಯಾ ವಿರುದ್ಧ ಗೆದ್ದರೆ  ಇನ್ನು ಮುಚ್ಚಿಟ್ಟಿರುವ ಎಲ್ಲವನ್ನು ತೋರಿಸುತ್ತೇನೆ ಎಂದು ಘೋಷಣೆ ಮಾಡಿದ್ದಾಳೆ.

ಭಾರತದ ಫ್ಯಾನ್ಸ್ ಗಳನ್ನು ಟ್ರೋಲ್ ಮಾಡುವ ಆಯೇಷಾ  ಹಾಕಿರುವ ಪೋಸ್ಟ್ ಗೆ ಕಮೆಂಟ್ ಗಳ ಸುರಿಮಳೆಯೂ ಹರಿದು ಬಂದಿದೆ. ಇನ್ನೇನು ಉಳಿದಿದೆ? ಎಂದು ಪ್ರಶ್ನೆ ಮಾಡಿದವರು ಇದ್ದಾರೆ. 

ವಿಶ್ವಕಪ್ ನಲ್ಲಿ ಮೊದಲ ಪಂದ್ಯವನ್ನಾಡಿದ್ದ ಭಾರತ ಪಾಕಿಸ್ತಾನದ ವಿರುದ್ಧ ಹತ್ತು ವಿಕೆಟ್ ಗಳ ಸೋಲು ಕಂಡಿತ್ತು. ಇದಾದ ಮೇಲೆ ನ್ಯೂಜಿಲೆಂಡ್ ವಿರುದ್ಧವೂ ಸೋಲು ಅನುಭವಿಸಿತ್ತು.

ಪಾಕಿಸ್ತಾನ ಅಜೇಯನಾಗಿ ಸೆಮಿಫೈನಲ್ ಪ್ರವೇಶ ಮಾಡಿದೆ. ಆಸ್ಟ್ರೇಲಿಯಾವನ್ನು ಎದುರಿಸಲಿದ್ದು ಆ ಪಂದ್ಯದಲ್ಲಿ ಪಾಕ್ ಗೆದ್ದರೆ ಇನ್ನಷ್ಟು  ನ್ಯೂಡ್ ಅಪ್ ಲೋಡ್ ಮಾಡುತ್ತೇನೆ ಎಂದಿದ್ದಾಳೆ ಈ ಗಟ್ಟಿಗಿತ್ತಿ. 

click me!