IPL 2024 ಕೆಕೆಆರ್ ವಿರುದ್ಧ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್, ಹೆಚ್ಚಾಯ್ತು ಪ್ಲೇ ಆಫ್ ಕುತೂಹಲ!

By Suvarna NewsFirst Published Apr 29, 2024, 7:02 PM IST
Highlights

ಪ್ಲೇ ಆಫ್ ಸ್ಥಾನದ ಪೈಪೋಟಿ ತೀವ್ರಗೊಳ್ಳುತ್ತಿದೆ. ಕೆಕೆಆರ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿ ಈ ನಿಟ್ಟಿನಲ್ಲ ಮಹತ್ವ ಪಡೆದುಕೊಂಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡದ ಬದಲಾವಣೆ ಏನು? 

ಕೋಲ್ಕತಾ(ಏ.29) ಕೆಕೆಆರ್ ಹಾಗೂ ಡಿಸಿ ಹೋರಾಟ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಕಾರಣ ಕೆಕೆಆರ್ 10 ಅಂಕದೊಂದಿಗೆ 2ನೇ ಸ್ಥಾನದಲ್ಲಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ 10 ಅಂಕದೊಂದಿಗೆ 6ನೇ ಸ್ಥಾನದಲ್ಲಿದೆ. ಎರಡೂ ತಂಡಕ್ಕೆ ಪ್ಲೇ ಆಫ್ ಅವಕಾಶವಿದೆ. ಆದರೆ ಡೆಲ್ಲಿ ಹಾದಿ ಕೊಂಚ ಕಠಿಣವಾಗಿದೆ. ಇದೀಗ ಈ ಮುಖಾಮುಖಿಯಲ್ಲಿ ಟಾಸ್ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಡೆಲ್ಲಿ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ 11
ಪೃಥ್ವಿ ಶಾ, ಜೇಕ್ ಫ್ರೇಸರ್-ಮೆಕ್‌ಗರ್ಕ್, ಅಭಿಷೇಕ್ ಪೊರೆಲ್ , ಶೈ ಹೋಪ್, ರಿಷಭ್ ಪಂತ್(ನಾಯಕ), ತ್ರಿಸ್ಟನ್ ಸ್ಟಬ್ಸ್, ಎಕ್ಸರ್ ಪಟೇಲ್, ಕುಲ್ದೀಪ್ ಯಾದವ್, ರಶಿಖ್ ಧಾರ್ ಸಲಾಮ್, ಲಿಜಾಡ್ ವಿಲಿಯಮ್ಸ್, ಖಲೀಲ್ ಅಹಮ್ಮದ್ 

'ಕೂತು ಮಾತಾಡೋದು ಸುಲಭ..': ನಗುನಗುತ್ತಲೇ ಟೀಕಾಕಾರರ ಬಾಯಿ ಮುಚ್ಚಿಸಿದ ವಿರಾಟ್ ಕೊಹ್ಲಿ

ಕೆಕೆಆರ್ ಪ್ಲೇಯಿಂಗ್ 11
ಫಲಿಪ್ ಸಾಲ್ಟ್, ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್(ನಾಯಕ), ಆ್ಯಂಡ್ರೆ ರಸೆಲ್, ರಿಂಕು ಸಿಂಗ್, ರಮನದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವೈಭವ್ ಆರೋರ, ಹರ್ಷಿತ್ ರಾನಾ, ವರುಣ್ ಚಕ್ರವರ್ತಿ

ಅಂಕಪಟ್ಟಿ;
ಅಂಕಪಟ್ಟಿಯಲ್ಲಿ ರಾಜಸ್ಥಾನ ರಾಯಲ್ಸ್ ಮೊದಲ ಸ್ಥಾನದಲ್ಲಿದೆ. ಇಷ್ಟೇ ಅಲ್ಲ ಪ್ಲೇ ಆಫ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ರಾಜಸ್ಥಾನ 9 ಪಂದ್ಯದಲ್ಲಿ 8 ಗೆಲುವು ಸಾಧಿಸಿ 16 ಅಂಕಗಳಿಸಿದೆ. ಕೆಕೆಆರ್ 8ರಲ್ಲಿ 5 ಗೆಲುವಿನ ಮೂಲಕ 10 ಅಂಕ ಪಡೆದುಕೊಂಡು 2ನೇ ಸ್ಥಾನದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ 9ಪಂದ್ಯದಲ್ಲಿ 5 ಗೆದ್ದು 3ನೇ ಸ್ಥಾನದಲ್ಲಿದೆ. ಇನ್ನು ಸನ್‌ರೈಸರ್ಸ್ ಹೈದರಾಬಾದ್ 9 ಪಂದ್ಯದಲ್ಲಿ 5 ಗೆಲುವು ದಾಖಲಿಸಿ 10 ಅಂಕ ಪಡೆದಿದೆ. ಈ ಮೂಲಕ 4ನೇ ಸ್ಥಾನದಲ್ಲಿದೆ. ಲಖನೌ ಸೂಪರ್ ಜೈಂಟ್ಸ್ 9ರಲ್ಲಿ 5 ಪಂದ್ಯ ಗೆದ್ದು 5ನೇ ಸ್ಥಾನದಲ್ಲಿದೆ.  6ನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ 10 ರಲ್ಲಿ 5 ಪಂದ್ಯ ಗೆದ್ದುಕೊಂಡಿದೆ.

' ಚಿಕು' ವಿರಾಟ್‌ ಕೊಹ್ಲಿಗೆ ಈ ಅಡ್ಡ ಹೆಸರು ಬಂದಿದ್ದೇಕೆ?

ಆರಂಭದಲ್ಲಿ ಮುಗ್ಗರಿಸಿ ಅಂತಿಮ ಹಂತದಲ್ಲಿ ರೊಚ್ಚಿಗೆದ್ದಿರುವ ಆರ್‌ಸಿಬಿ ಸತತ 2 ಗೆಲುವು ದಾಖಲಿಸಿದೆ. ಅಬ್ಬರದ ಬ್ಯಾಟಿಂಗ್, ಹಳೇ ಖದರ್ ಮತ್ತೆ ಬಂದಿದೆ. ಆದರೆ ಸಮಯ ಬಹುತೇಕ ಮುಗಿದು ಹೋಗಿದೆ. ಸದ್ಯ ಆರ್‌ಸಿಬಿ ಅಂಕಪಟ್ಟಿಯಲ್ಲಿ ಕೊನೆಯ ಹಾಗೂ 10ನೇ ಸ್ಥಾನದಲ್ಲಿದೆ. 10 ಪಂದ್ಯದಿಂದ ಕೇವಲ 3 ಪಂದ್ಯದಲ್ಲಿ ಗೆಲುವು ಸಾಧಿಸಿದೆ.
 

click me!