ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಳ್ಳುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಅಚ್ಚರಿ ಮೂಡಿಸಿದರು. ಅವರ ನಿರ್ಧಾರ ತಪ್ಪಾಗಿತ್ತು ಎಂಬುದು ಸಾಬೀತಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಕೆಕೆಆರ್‌ನ ಮೊನಚು ದಾಳಿ ಮುಂದೆ ತತ್ತರಿಸಿದ ಡೆಲ್ಲಿ 9 ವಿಕೆಟ್‌ಗೆ 153 ರನ್ ಕಲೆಹಾಕಿತು. ಈ ಮೊತ್ತ ಕೆಕೆಆರ್‌ಗೆ ಯಾವುದಕ್ಕೂ ಸಾಲಲಿಲ್ಲ.
ಕೋಲ್ಕತಾ(ಏ.30): ಬೌಲರ್‌ಗಳ ಮೊನಚು ದಾಳಿ, ಬ್ಯಾಟರ್‌ಗಳ ಸ್ಫೋಟಕ ಆಟದ ನೆರವಿನಿಂದ 2 ಬಾರಿ ಚಾಂಪಿಯನ್ ಕೋಲ್ಕತಾ 17ನೇ ಆವೃತ್ತಿ ಐಪಿಎಲ್‌ನಲ್ಲಿ 6ನೇ ಗೆಲುವು ದಾಖಲಿಸಿದೆ. ಸೋಮವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಈಡನ್ ಗಾರ್ಡನ್‌ನಲ್ಲಿ ಕೆಕೆಆರ್ 7 ವಿಕೆಟ್‌ಗಳಿಂದ ಭರ್ಜರಿ ಜಯಭೇರಿ ಮೊಳಗಿಸಿತು. ಡೆಲ್ಲಿ ಆಡಿರುವ 11 ಪಂದ್ಯಗಳಲ್ಲಿ 6ನೇ ಸೋಲನುಭವಿಸಿದ್ದು, ಪ್ಲೇ-ಆಫ್ ಹಾದಿಯನ್ನು ಕಠಿಣಗೊಳಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಳ್ಳುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಅಚ್ಚರಿ ಮೂಡಿಸಿದರು. ಅವರ ನಿರ್ಧಾರ ತಪ್ಪಾಗಿತ್ತು ಎಂಬುದು ಸಾಬೀತಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಕೆಕೆಆರ್‌ನ ಮೊನಚು ದಾಳಿ ಮುಂದೆ ತತ್ತರಿಸಿದ ಡೆಲ್ಲಿ 9 ವಿಕೆಟ್‌ಗೆ 153 ರನ್ ಕಲೆಹಾಕಿತು. ಈ ಮೊತ್ತ ಕೆಕೆಆರ್‌ಗೆ ಯಾವುದಕ್ಕೂ ಸಾಲಲಿಲ್ಲ.
Varun Chakaravarthy's sparkling spell helps him bag the Player of the Match Award ✨🏆
Scorecard ▶️ https://t.co/eTZRkma6UM | | pic.twitter.com/h9wd8qO589
ಮೊದಲ ಓವರಲ್ಲೇ 23 ರನ್ ಚಚ್ಚಿದ ತಂಡ ಅದಾಗಲೇ ಬೃಹತ್ ಗೆಲುವಿನ ವಿಶ್ವಾಸದಲ್ಲಿತ್ತು. ಈ ನಡುವೆ ನರೈನ್(15), ರಿಂಕು ಸಿಂಗ್(11) ನಿರ್ಗಮಿಸಿದರೂ, ಡೆಲ್ಲಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಫಿಲ್ ಸಾಲ್ಟ್ 33 ಎಸೆತಗಳಲ್ಲಿ 7 ಬೌಂಡರಿ, 5 ಸಿಕ್ಸರ್‌ನೊಂದಿಗೆ 68 ರನ್ ಸಿಡಿಸಿ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು. ಶ್ರೇಯಸ್ ಅಯ್ಯರ್(ಔಟಾಗದೆ 33), ವೆಂಕಟೇಶ್ ಅಯ್ಯರ್(ಔಟಾಗದೆ 26) ತಂಡವನ್ನು 16.3 ಓವರಲ್ಲಿ ಗೆಲ್ಲಿಸಿದರು.
'ಕೂತು ಮಾತಾಡೋದು ಸುಲಭ..': ನಗುನಗುತ್ತಲೇ ಟೀಕಾಕಾರರ ಬಾಯಿ ಮುಚ್ಚಿಸಿದ ವಿರಾಟ್ ಕೊಹ್ಲಿ
ಕುಲ್ದೀಪ್ ಹೋರಾಟ: ಡೆಲ್ಲಿಯ ಬ್ಯಾಟಿಂಗ್ ವೈಫಲ್ಯ ಎಷ್ಟರ ಮಟ್ಟಿಗೆ ಇತ್ತೆಂದರೆ ತಂಡದ ಪರ ಗರಿಷ್ಠ ವೈಯಕ್ತಿಕ ಮೊತ್ತ ದಾಖಲಿಸಿದ್ದು 9ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಕುಲ್ದೀಪ್ ಯಾದವ್. ಪೃಥ್ವಿ ಶಾ(13), ಜೇಕ್ ಫ್ರೇಸರ್(12), ಅಭಿಷೇಕ್ ಪೊರೆಲ್(18), ಶಾಯ್ ಹೋಪ್(06) ಹಾಗೂ ರಿಷಭ್ ಪಂತ್(27) ಪೆವಿಲಿಯನ್ ಪರೇಡ್ ನಡೆಸಿದರು.
111ಕ್ಕೆ 8 ವಿಕೆಟ್ ಕಳೆದುಕೊಂಡಿದ್ದ ತಂಡ 120 ದಾಟುವುದೂ ಅನುಮಾನವಿತ್ತು. ಆದರೆ ಕೊನೆವರೆಗೂ ಕ್ರೀಸ್‌ನಲ್ಲಿ ನೆಲೆಯೂರಿದ ಕುಲ್ದೀಪ್, 26 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್‌ನೊಂದಿಗೆ 35 ರನ್ ಸಿಡಿಸಿ ತಂಡವನ್ನು 150ರ ಗಡಿ ದಾಟಿಸಿದರು. ವರುಣ್ ಚಕ್ರವರ್ತಿ 3 ವಿಕೆಟ್ ಕಿತ್ತರು.
05ನೇ ಬಾರಿ: ಸಾಲ್ಟ್-ನರೈನ್ ಈ ಬಾರಿ ಐಪಿಎಲ್‌ನಲ್ಲಿ ಮೊದಲ ವಿಕೆಟ್‌ಗೆ 5ನೇ ಬಾರಿ 50+ ಜೊತೆಯಾಟವಾಡಿದರು. ಇದು ಈ ಬಾರಿ ಟೂರ್ನಿಯಲ್ಲಿ ಯಾವುದೇ ಜೋಡಿ ಪೈಕಿ ಗರಿಷ್ಠ.
69 ವಿಕೆಟ್: ನರೈನ್ ವಾಂಖೇಡೆ ಕ್ರೀಡಾಂಗಣದಲ್ಲಿ 69 ವಿಕೆಟ್ ಪಡೆದರು. ಇದು ಕ್ರೀಡಾಂಗಣವೊಂದರಲ್ಲಿ ಬೌಲರ್‌ನ ಶ್ರೇಷ್ಠ ಸಾಧನೆ. ಮಾಲಿಂಗಾ ವಾಂಖೇಡೆಯಲ್ಲಿ 68 ವಿಕೆಟ್ ಪಡೆದಿದ್ದಾರೆ.
ಸ್ಕೋರ್: ಡೆಲ್ಲಿ 20 ಓವರಲ್ಲಿ 153/9 (ಕುಲ್ದೀಪ್ 35*, ರಿಷಭ್ 27, ವರುಣ್ 3-16)
ಕೋಲ್ಕತಾ 16.3 ಓವರಲ್ಲಿ 157/3 (ಸಾಲ್ಟ್ 68, ಶ್ರೇಯಸ್ 33, ಅಕ್ಷರ್ 2-25)