
ಲಖನೌ(ಏ.30): ಹ್ಯಾಟ್ರಿಕ್ ಸೋಲಿನ ಬಳಿಕ ಗೆಲುವಿನ ಲಯಕ್ಕೆ ಮರಳಿದರೂ ಮತ್ತೆ ಸೋಲಿನ ಸುಳಿಯಲ್ಲಿ ಸಿಲುಕಿರುವ 5 ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ಗೆ ಮಂಗಳವಾರ ಲಖನೌ ಸೂಪರ್ ಜೈಂಟ್ಸ್ ಸವಾಲು ಎದುರಾಗಲಿದೆ. ಅತ್ತ ಲಖನೌ ಸೂಪರ್ ಜೈಂಟ್ಸ್ ಕೂಡಾ ಅಸ್ಥಿರ ಆಟ ಪ್ರದರ್ಶಿಸುತ್ತಿದ್ದು, ಗೆಲುವಿಗೆ ಕಾತರಿಸುತ್ತಿದೆ.
ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಆಡಿರುವ 9 ಪಂದ್ಯಗಳಲ್ಲಿ 3ರಲ್ಲಿ ಗೆದ್ದಿದೆ. ಇನ್ನುಳಿದ ಎಲ್ಲಾ ಪಂದ್ಯದಲ್ಲಿ ಗೆದ್ದರಷ್ಟೇ ತಂಡ ಪ್ಲೇ-ಆಫ್ ರೇಸ್‌ನಲ್ಲಿ ಉಳಿಯಲಿದ್ದು, ಸೋತರೆ ರೇಸ್‌ನಿಂದ ಹೊರಬೀಳುವುದು ಖಚಿತ. ಹೀಗಾಗಿ ಸುಧಾರಿತ ಪ್ರದರ್ಶನ ನೀಡಿ ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ.
PV ಸಿಂಧು, ಲಕ್ಷ್ಯ ಸೇನ್, ಕನ್ನಡತಿ ಅಶ್ವಿನಿ ಸೇರಿ 7 ಶಟ್ಲರ್‌ಗಳು ಒಲಿಂಪಿಕ್ಸ್‌ಗೆ
ಬ್ಯಾಟಿಂಗ್ ವಿಭಾಗ ಅಬ್ಬರಿಸುತ್ತಿದ್ದರೂ, ಬುಮ್ರಾ ಹೊರತುಪಡಿಸಿ ಇತರ ಬೌಲರ್‌ಗಳು ನಿರೀಕ್ಷಿತ ಪ್ರದರ್ಶನ ನೀಡದಿರುವುದು ತಂಡದ ತಲೆನೋವಿಗೆ ಕಾರಣವಾಗಿದೆ.
ಮತ್ತೊಂದೆಡೆ ಲಖನೌ ಆಡಿರುವ 9ರಲ್ಲಿ 5 ಪಂದ್ಯ ಗೆದ್ದಿದೆ. ಈ ಪಂದ್ಯದಲ್ಲಿ ಗೆದ್ದರೆ ತಂಡದ ಪ್ಲೇ-ಆಫ್ ಹಾದಿ ಸುಲಭವಾಗಲಿದ್ದು, ಸೋತರೆ ಮುಂದಿನ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಾದ ಒತ್ತಡಕ್ಕೆ ಸಿಲುಕಲಿದೆ. ಪ್ರಮುಖವಾಗಿ ಟಿ20 ವಿಶ್ವಕಪ್ ಆಯ್ಕೆ ರೇಸ್‌ನಲ್ಲಿರುವ ಕೆ.ಎಲ್.ರಾಹುಲ್ ಆಯ್ಕೆ ಸಮಿತಿಯ ಗಮನ ಸೆಳೆಯುವ ರೀತಿ ಪ್ರದರ್ಶನ ನೀಡಬೇಕಿದೆ.
ಟಿ20 ವಿಶ್ವಕಪ್‌ಗೆ ಇಂದು ಭಾರತ ತಂಡ ಪ್ರಕಟ ನಿರೀಕ್ಷೆ: ಮೇ 01 ಡೆಡ್‌ಲೈನ್
ಒಟ್ಟು ಮುಖಾಮುಖಿ: 04
ಮುಂಬೈ: 01
ಲಖನೌ: 03
ಸಂಭವನೀಯ ಆಟಗಾರರ ಪಟ್ಟಿ
ಮುಂಬೈ: ರೋಹಿತ್ ಶರ್ಮಾ, ಇಶಾನ್ ಕಿಶನ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ(ನಾಯಕ), ಟಿಮ್ ಡೇವಿಡ್, ಮೊಹಮ್ಮದ್ ನಬಿ, ಪೀಯೂಸ್ ಚಾವ್ಲಾ, ಲ್ಯೂಕ್ ವುಡ್, ಜಸ್ಪ್ರೀತ್ ಬುಮ್ರಾ, ನುವಾನ್ ತುಷಾರ.
ಲಖನೌ: ಕ್ವಿಂಟನ್ ಡಿ ಕಾಕ್, ಕೆ ಎಲ್ ರಾಹುಲ್(ನಾಯಕ), ಮಾರ್ಕಸ್ ಸ್ಟೋಯ್ನಿಸ್, ದೀಪಕ್ ಹೂಡಾ, ನಿಕೋಲಸ್ ಪೂರನ್, ಆಯುಷ್ ಬದೋನಿ, ಕೃನಾಲ್ ಪಾಂಡ್ಯ, ಮ್ಯಾಟ್ ಹೆನ್ರಿ, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್, ಯಶ್ ಠಾಕೂರ್.
ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.