ಬಿಕಿನಿಯಲ್ಲಿ ಮಿಂಚಿದ ಕಣ್ಸನ್ನೆ ಸುಂದರಿ ಪ್ರಿಯಾ ವಾರಿಯರ್; ಸಿಕ್ಕಾಪಟ್ಟೆ ಹಾಟ್ ಎಂದ ಫ್ಯಾನ್ಸ್

First Published | May 11, 2023, 4:05 PM IST

ಕಣ್ಸನ್ನೆ ಸುಂದರಿ ಪ್ರಿಯಾ ಪ್ರಕಾಶ್ ಮಾಲ್ಡೀವ್ಸ್ ಪ್ರವಾಸದಲ್ಲಿದ್ದಾರೆ. ಮಸ್ತ್ ಮಜಾ ಮಾಡುತ್ತಿರುವ ಪ್ರಿಯಾ ಬಿಕಿನಿ ಪೋಟೋ ಶೇರ್ ಮಾಡಿದ್ದಾರೆ. 

ಪ್ರಿಯಾ ಪ್ರಕಾಶ್ ವಾರಿಯನ್ ಎನ್ನುವುದಕ್ಕಿಂತ ಕಣ್ಸನ್ನೆ ಸುಂದರಿ ಎಂದರೆ ಎಲ್ಲರಿಗೂ ಗೊತ್ತಾಗುತ್ತದೆ. 'ಒರು ಆಡಾರ್ ಲವ್’ ಸಿನಿಮಾ ಮೂಲಕ ಸಂಚಲನ ಸೃಷ್ಟಿಸಿದ್ದ ಪ್ರಿಯಾ ಪ್ರಕಾಶ್ ವಾರಿಯರ್ ಸದ್ಯ ಸಿನಿಮಾಗಿಂತ ಹೆಚ್ಚಾಗಿ ಫೋಟೋಶೂಟ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಈ ಸಿನಿಮಾ ಬಳಿಕ ಪ್ರಿಯಾ ನಟಿಸಿದ ಚಿತ್ರಗಳು ಹಿಟ್ ಆಗದಿದ್ದರೂ ಪ್ರಿಯಾ ಸದಾ ಸುದ್ದಿಯಲ್ಲಿರುತ್ತಾರೆ. 
 

ಪ್ರಿಯಾ ಸದ್ಯ ಮಲಯಾಳಂ ಜೊತೆಗೆ ಬೇರೆ ಬೇರೆ ಭಾಷೆಯಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಜೊತಗೆ ಪ್ರಿಯಾ ಪ್ರವಾಸವನ್ನು ಎಂಜಾಯ್ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಅಕ್ಟೀವ್ ಆಗಿರುವ ನಟಿ ಪ್ರಿಯಾ ಪ್ರಕಾಶ್ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.  

Tap to resize

ಸದ್ಯ ಪ್ರಿಯಾ ಪ್ರಕಾಶ್ ವಿದೇಶದಲ್ಲಿದ್ದಾರೆ. ಸೆಲೆಬ್ರಿಟಿಗಳ ಸ್ವರ್ಗ ಎಂದೇ ಖ್ಯಾತಿಗಳಿಸಿರುವ ಮಾಲ್ಡೀವ್ಸ್‌ನಲ್ಲಿದ್ದಾರೆ ಪ್ರಿಯಾ. ಮಾಲ್ಡೀವ್ಸ್‌ನಿಂದ ಪ್ರಿಯಾ ಒಂದಿಷ್ಟು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. 

ಮಾಲ್ಡೀವ್ಸ್ ಅಂದ್ಮೇಲೆ ನಟಿಮಣಿಯರು ಬಿಕಿನಿಯಲ್ಲಿ ಮಿಂಚದೇ ಇರಲು ಸಾಧ್ಯನೆ ಇಲ್ಲ. ಪ್ರಿಯಾ ಕೂಡ ಬಿಕಿನಿ ಧರಿಸಿ ಬಿಸಿ ಏರಿಸಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿರುವ ಪ್ರಿಯಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಪ್ರಿಯಾ ಪ್ರಕಾಶ್ ಬಿಕಿನಿ ಧರಿಸಿ ಮಸ್ತ್ ಮಜಾ ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಪ್ರಿಯಾ ಹಂಚಿಕೊಂಡಿರುವ ವಿಡಿಯೋಗೆ ಅಭಿಮಾನಿಗಳಿಂದ ಮೆಚ್ಚುಗೆ ಹರಿದು ಬರುತ್ತಿದೆ.  ಅಭಿಮಾನಿಗಳು ಹಾರ್ಟ್ ಇಮೋಜಿ ಇರಿಸಿ ಸಿಕ್ಕಾಪಟ್ಟೆ ಹಾಟ್ ಎಂದು ಹೇಳುತ್ತಿದ್ದಾರೆ. 

ತಮ್ಮ ಕಣ್ಸನ್ನೆ ವೀಡಿಯೋ ಮೂಲಕ ರಾತ್ರೋ ರಾತ್ರಿ ಸ್ಟಾರ್ ಆದ ನಟಿ ಪ್ರಿಯಾ ನಂತರ ನಟಿಸಿದ ಸಿನಿಮಾಗಳು ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಸದ್ಯ ಪ್ರಿಯಾ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದು ದೊಡ್ಡ ಬ್ರೇಕ್‌ಗಾಗಿ ಕಾಯ್ತಿದ್ದಾರೆ.
 

Latest Videos

click me!