ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ: ಯತ್ನಾಳ್ ಸಾಹೇಬ್ರು ಏನೂ ಹೇಳಿದ್ದಾರೆ ನನಗೆ ಗೊತ್ತಿಲ್ಲ, ವಿ. ಸೋಮಣ್ಣ

By Girish GoudarFirst Published Oct 2, 2024, 7:41 PM IST
Highlights

ಯತ್ನಾಳ್ ಸಾಹೇಬ್ರು ಏನೂ ಹೇಳಿದ್ದಾರೆ ನನಗೆ ಗೊತ್ತಿಲ್ಲ. ವಿಜಯೇಂದ್ರ ಯುವಕ ಇದ್ದಾನೆ ಎಲ್ಲರನ್ನ ಸರಿ ದೂಗಿಸಿಕೊಂಡು ಹೋಗಲು ಅವರ ತಂದೆ ಆಶೀರ್ವಾದ ಇದೆ. ಎಲ್ಲವನ್ನ ಸರಿದೂಗಿಸಿಕೊಂಡು ಹೋಗೋದು ಅವನ ಕರ್ತವ್ಯ.ಹೈಮಾಂಡ್ ನಂತೆ ಮಹಾರಾಷ್ಟ್ರ ಚುನಾವಣೆ ಬಳಿಕ ಎಲ್ಲಾ ಸುಖಾಂತ್ಯ ಆಗಲಿದೆ: ಕೇಂದ್ರ ಸಚಿವ ವಿ ಸೋಮಣ್ಣ 

ದಾವಣಗೆರೆ(ಅ.02):  ಸಿದ್ದರಾಮಯ್ಯ ಅವರು ತನಿಖೆ ಎದುರಿಸಿ ಏನೂ ಇಲ್ಲಾ ಅಂತಾ ಬಂದ್ರೆ, ಅವರ ಪಕ್ಷದವರು ಮನಸ್ಸು ಮಾಡಿದ್ರೆ ಮತ್ತೆ ಮುಖ್ಯಮಂತ್ರಿ ಆಗಲಿ. ಇಷ್ಟೆಲ್ಲ ಆದ ಮೇಲೆ ಕಾನೂನು ತನ್ನ ಕೆಲಸ ಮಾಡುತ್ತದೆ. ನಾನು ಅವರಿವರಂಗೇ ಮಾತನಾಡಲು ಹೋಗಲ್ಲ ಅವರ ಬಗ್ಗೆ ಗೌರವ ಇದೆ. ನಾವೆಲ್ಲ ಒಟ್ಟಿಗೆ ಬೆಳೆದವರು. ನನಗಿಂತ ಹಿರಿಯರು ಎರಡು ಬಾರಿ ಮುಖ್ಯಮಂತ್ರಿ ಆದವರು, 15 ಬಾರಿ ಬಜೆಟ್ ಮಂಡಿಸಿದವರು. ಬುದ್ದಿವಂತರು ಎಡವುತ್ತಾರೆ ಅನ್ನೋಕೆ ಉದಾ ಇದು ಎಂದು ಕೇಂದ್ರ ಸಚಿವ ವಿ ಸೋಮಣ್ಣ ಹೇಳಿದ್ದಾರೆ. 

ಇಂದು(ಬುಧವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ವಿ ಸೋಮಣ್ಣ ಅವರು, ಸಿದ್ದರಾಮಯ್ಯ ಅವರಿಗೆ ಹೇಳಿದೆ ತಮ್ಮ ಕಾಲ ಮೇಲೆ  ಕಲ್ಲು ಹಾಕಿಕೊಂಡು ಗಾಯ ಮಾಡಿಕೊಂಡಿದ್ದೀರಿ ಸರಿ ಪಡಿಸಿಕೊಳ್ಳಿ ಅಂತಾ. ಅವರು ಅದನ್ನು ಬಿಟ್ಟು ಎಲ್ಲಾ ಮಾಡಿದ್ರು. ಇದೊಂದು ದೊಡ್ಡ ತಪ್ಪೇನಲ್ಲ ಅವರು ಅವಶ್ಯಕತೆ ಇಲ್ಲದ್ದನ್ನು ಮಾಡಿ ತಗಲಾಕಿಕೊಂಡಿದ್ದಾರೆ. ತಪ್ಪಾಗಿದೆ ಅವರು ಆ ತಪ್ಪಿನಿಂದ ಈಚೆ ಬರಬೇಕು ಅಂದ್ರೆ ಅವರು ಮೂರ್ನಾಲ್ಕು ತಿಂಗಳು ಆಚೆ ಬಂದು ರಾಜೀನಾಮೆ ಕೊಟ್ಟು ಇರಲಿ. ಅದಾದ ಮೇಲೆ ನಿಮ್ಮ ಪಕ್ಷದವರು ನಿಮ್ಮ ಅವಶ್ಯಕತೆ ಇದ್ರೆ. ನಿಮ್ಮ ಮಾಸ್ ಲೀಡರ್ ಶಿಪ್ ಪಾಪ್ಯುಲಾರಿಟಿ ಉಪಯೋಗಿಸಿಕೊಳ್ಳಬೇಕಂದ್ರೆ ಮತ್ತೆ ಮುಖ್ಯಮಂತ್ರಿ ಸ್ಥಾನ ಕೊಡಲಿ. ಅದು ಅವರಿಗೆ ಅನುಕೂಲ ನಿಮಗೇನು ಉಪಯೋಗವಿಲ್ಲ. ಸಿದ್ರಾಮಯ್ಯ ಸಾಹೇಬರು ತಮ್ಮ ನೈತಿಕತೆ ಉಳಿಸಿಕೊಳ್ಳಲು ರಾಜೀನಾಮೆ ನೀಡಬೇಕು ಎಂದು ಸಲಹೆ ನೀಡಿದ್ದಾರೆ. 

Latest Videos

ಸಿಎಂ ಆಗಲು 1000 ಕೋಟಿ ರು. ಹೇಳಿಕೆ: ಯತ್ನಾಳ್‌ ವಿರುದ್ಧ ಕಾಂಗ್ರೆಸ್‌ ದೂರು

ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರವಾಗಿ ಪಕ್ಷದಲ್ಲಿ ಭಿನ್ನಮತ ವಿಚಾರದ ಬಗ್ಗೆ ಮಾತನಾಡಿದ ಸೋಮಣ್ಣ ಅವರು, ಯತ್ನಾಳ್ ಸಾಹೇಬ್ರು ಏನೂ ಹೇಳಿದ್ದಾರೆ ನನಗೆ ಗೊತ್ತಿಲ್ಲ. ವಿಜಯೇಂದ್ರ ಯುವಕ ಇದ್ದಾನೆ ಎಲ್ಲರನ್ನ ಸರಿ ದೂಗಿಸಿಕೊಂಡು ಹೋಗಲು ಅವರ ತಂದೆ ಆಶೀರ್ವಾದ ಇದೆ. ಎಲ್ಲವನ್ನ ಸರಿದೂಗಿಸಿಕೊಂಡು ಹೋಗೋದು ಅವನ ಕರ್ತವ್ಯ.ಹೈಮಾಂಡ್ ನಂತೆ ಮಹಾರಾಷ್ಟ್ರ ಚುನಾವಣೆ ಬಳಿಕ ಎಲ್ಲಾ ಸುಖಾಂತ್ಯ ಆಗಲಿದೆ. ರಾಜಕೀಯದಲ್ಲಿ ಎಲ್ಲರ ಮೇಲೆ ದೂರು ಬರುತ್ತವೆ. ಸಿದ್ದರಾಮಯ್ಯ ಅವರ ಮೇಲಿನ ದೂರಿಗೂ ಬೇರೆಯವರ ಮೇಲಿನ ದೂರಿಗೂ ಹೋಲಿಕೆ ಮಾಡಬೇಡಿ ಎಂದ ಹೇಳಿದ್ದಾರೆ. 

click me!