ಇಷ್ಟು ಕೆಟ್ಟದಾಗಿ ಕನ್ನಡ ಮಾತಾಡ್ತಿದ್ರ ರಶ್ಮಿಕಾ ಮಂದಣ್ಣ! ಕಿರಿಕ್ ಬೆಡಗಿಯ ಖರಾಬು ಕನ್ನಡ ವೀಡಿಯೋ ವೈರಲ್

Published : Oct 02, 2024, 01:01 PM ISTUpdated : Oct 02, 2024, 01:14 PM IST
 ಇಷ್ಟು ಕೆಟ್ಟದಾಗಿ ಕನ್ನಡ ಮಾತಾಡ್ತಿದ್ರ ರಶ್ಮಿಕಾ ಮಂದಣ್ಣ! ಕಿರಿಕ್ ಬೆಡಗಿಯ ಖರಾಬು ಕನ್ನಡ ವೀಡಿಯೋ ವೈರಲ್

ಸಾರಾಂಶ

 ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಕನ್ನಡ ಮಾತಾಡಲು ಪರದಾಡುವ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ನೋಡಿ ಜನ ರಶ್ಮಿಕಾಗೆ ಹಿಗ್ಗಾಮಗ್ಗ ಝಾಡಿಸುತ್ತಿದ್ದಾರೆ.

ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಸದ್ಯ ಪ್ಯಾನ್ ಇಂಡಿಯಾ ಲೆವೆಲ್‌ನ ಟಾಪ್ ನಟಿ. ಪುಷ್ಪ, ಅನಿಮಲ್‌ನಂಥಾ ಸಿನಿಮಾಗಳು ಈಕೆಗೆ ತಂದುಕೊಟ್ಟ ಪಾಪ್ಯುಲಾರಿಟಿ ಸಣ್ಣದಲ್ಲ. ಸದ್ಯಕ್ಕೀಗ ಬಾಲಿವುಡ್‌ನ ಎವರ್ ಯಂಗ್ ಮ್ಯಾನ್ ಸಲ್ಮಾನ್‌ ಖಾನ್ ಜೊತೆಗೂ ಸ್ಕ್ರೀನ್ ಹಂಚಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ. ಇಂಥಾ ಫೇಮಸ್ ನಟಿಯ ವೀಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ಓಡಾಡ್ತಿದೆ. ಇದರಲ್ಲಿ ರಶ್ಮಿಕಾ ಕೆಟ್ಟ ಕನ್ನಡ ನೋಡಿ ಪ್ರಜ್ಞಾವಂತ ಕನ್ನಡಿಗರು ಮೂಗು ಮುರಿದಿದ್ದಾರೆ. ಎಷ್ಟೋ ಮಂದಿ ಈಕೆ ಕನ್ನಡ ಚಿತ್ರರಂಗದಿಂದ ಆಚೆ ಹೋದದ್ದೇ ಒಳ್ಳೆಯದಾಯ್ತು ಅನ್ನೋ ಟೋನ್‌ನಲ್ಲಿ ಮಾತನಾಡಿದ್ದಾರೆ. ಈ ಹಿಂದೆ ರಶ್ಮಿಕಾ ಸಂದರ್ಶನವೊಂದರಲ್ಲಿ ಹೇಳಿದಂತೆ ರಕ್ಷಿತ್ ಶೆಟ್ಟಿ ನಟಿಸಿದ 'ಕಿರಿಕ್ ಪಾರ್ಟಿ' ಸಿನಿಮಾಗೆ ಆಡಿಷನ್ ಕೊಡುವುದಕ್ಕೂ ಮುನ್ನ ಸಾಕಷ್ಟು ಸಿನಿಮಾಗಳಿಗೆ ಆಡಿಷನ್ ಕೊಟ್ಟಿದ್ದರು.

ಈಗ ಕಿರಿಕ್ ಪಾರ್ಟಿಗೂ ಮುನ್ನ ರಶ್ಮಿಕಾ ಆಡಿಷನ್ ಕೊಟ್ಟಿದ್ದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ಆ ಸಿನಿಮಾ ಯಾವುದು ಎಂಬ ಪ್ರಶ್ನೆಗೆ ಉತ್ತರ ಇದೇ ವಾರ ರಿಲೀಸ್ ಆಗ್ತಿರೋ ಒಂದು ಸಿನಿಮಾ. ಆ ಸಿನಿಮಾಕ್ಕೆ ಬಹಳ ಹಿಂದೆಯೇ ಆಡಿಶನ್ ಆಗಿತ್ತು. ಅದರಲ್ಲಿ ರಶ್ಮಿಕಾ ಭಾಗಿಯಾಗಿದ್ದರು.

Bigg Boss Kannada - 11 ಧನರಾಜ್ ವಿನಯ್ ಆಗಿ ಬದಲಾಗ್ತಾ ಇದ್ದಾರ? ಹಾಗಿದ್ರೆ ಈ ಬಾರಿ ಎಲಿಮಿನೇಶನ್ ಆಗ್ತಿರೋರು ಇವ್ರೇನಾ?

ಅಂದಹಾಗೆ ರಶ್ಮಿಕಾ ಮಂದಣ್ಣ ತಮ್ಮ 19 ನೇ ವಯಸ್ಸಿಗೆ ಈ ಆಡಿಷನ್ ಕೊಟ್ಟಿದ್ದಾರೆ. ಹೆಸರು ರಶ್ಮಿಕಾ ಅಂತಲೇ ಹೇಳಿದ್ದಾರೆ. 5.5 ಅಡಿ ಎತ್ತರ ಅಂತಲೂ ಹೇಳಿಕೊಂಡಿದ್ದಾರೆ. ಆದರೆ ಡೈಲಾಗ್ ಕೊಟ್ಟು ಹೇಳು ಅಂದರೆ ಕನ್ನಡ ಪದವನ್ನು ಉಚ್ಚರಿಸಲಾಗದೇ ಸುಸ್ತು ಹೊಡೆದಿದ್ದಾರೆ. ಈ ವೀಡಿಯೋವನ್ನು ಬಹಳಷ್ಟು ಮಂದಿ ಕಾಮಿಡಿ ವೀಡಿಯೋ ಥರ ನೋಡಿ ಎನ್‌ಜಾಯ್ ಮಾಡ್ತಿದ್ದಾರೆ. ಆದರೆ ನಟಿಯೊಬ್ಬಳ ಹಳೆಯ ಆಡಿಶನ್ ವೀಡಿಯೋವನ್ನು ಹೀಗೆ ಪಬ್ಲಿಕ್‌ ಆಗಿ ಪೋಸ್ಟ್ ಮಾಡಬಹುದಾ? ಆಕೆಯ ಅನುಮತಿ ಪಡೆಯದೇ ಈ ರೀತಿ ಮಾಡೋದು ತಪ್ಪಲ್ವಾ ಅನ್ನೋ ಪ್ರಶ್ನೆಯೂ ಇದೆ. ಆದರೆ ಇದನ್ನು ಚಿತ್ರತಂಡವೊಂದು ತನ್ನ ಸಿನಿಮಾ ಪ್ರಚಾರಕ್ಕಾಗಿ ಬಳಸ್ತಿದೆ ಅನ್ನೋ ಮಾತೂ ಕೇಳಿ ಬರ್ತಿದೆ.

ಅಂದಹಾಗೆ ಈಗ ವೈರಲ್ ಆಗಿರೋದು 'ಗೋಪಿಲೋಲ' ಸಿನಿಮಾ ತಂಡ ರಿಲೀಸ್ ಮಾಡಿರೋ ರಶ್ಮಿಕಾ ಮಂದಣ್ಣ ವೀಡಿಯೋ. ಇದೇ ಶುಕ್ರವಾರ ಅಂದರೆ ಅಕ್ಟೋಬರ್ 4ಕ್ಕೆ ಈ ಸಿನಿಮಾ ರಿಲೀಸ್ ಆಗುತ್ತಿದೆ. ಆದರೆ, ಈ ಸಿನಿಮಾ 2016ರಲ್ಲಿ ನಿರ್ದೇಶಕ ಆ ರವೀಂದ್ರ ಶುರು ಮಾಡಿದ್ದರು. ಆ ವೇಳೆ ಹೊಸ ನಾಯಕಿಯರ ಹುಡುಕಾಟದಲ್ಲಿ ಇದ್ದರು. ಆಗ ರಶ್ಮಿಕಾ ಬಂದು ಆಡಿಷನ್ ಕೊಟ್ಟದ್ದರು. 'ಗೋಪಿಲೋಲ ಅಂತ ಸಿನಿಮಾ ಅನೌನ್ಸ್ ಮಾಡಿ, ಹೊಸ ಕಲಾವಿದರನ್ನು ಹುಡುಕುತ್ತಿದ್ವಿ. ಅದಕ್ಕೆ ನಾವು ಎಲ್ಲಾ ಕಡೆನೂ ಪಬ್ಲಿಸಿಟಿ ಮಾಡಿದ್ವಿ. ಆ ಟೈಮ್‌ನಲ್ಲಿ ಒಂದಿಷ್ಟು ಕಲಾವಿದೆಯರು ಬಂದರು. ಅದರಲ್ಲಿ ರಶ್ಮಿಕಾ ಮಂದಣ್ಣ ಕೂಡ ಒಬ್ಬರು. ಆಗ ಅವರಿಗೆ ಕನ್ನಡ ಸ್ಪಷ್ಟವಾಗಿ ಮಾತಾಡುವುದಕ್ಕೆ ಬರುತ್ತಿರಲಿಲ್ಲ. ಆಗ ನಾವು ನೀವು ಡ್ಯಾನ್ಸ್ ಚೆನ್ನಾಗಿ ಮಾಡುತ್ತೀರ. ಗುಡ್ ಲುಕ್ಕಿಂಗ್ ಇದೆ. ನಿಮ್ಮ ಕಡೆಯಿಂದ ಪರ್ಫಾಮೆನ್ಸ್ ಮಾಡಿಸಬಹುದು. ನೀವು ಕನ್ನಡ ಸ್ವಲ್ಪ ಕಲೀರಿ ಅಂತ ಹೇಳಿ ಸ್ವಲ್ಪ ಟೈಮ್ ಕೊಟ್ಟಿದ್ವಿ' ಎಂದು ಗೋಪಿಲೋಲ ನಿರ್ದೇಶಕ ರವೀಂದ್ರ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಡಿವೋರ್ಸ್ ಬಳಿಕ ಸಖತ್ ಹಾಟ್ ಆಗಿದ್ದಾರೆ ನಟಿ ಸಮಂತಾ ರುತ್ ಪ್ರಭು

ಸದ್ಯ ಪ್ಯಾನ್‌ ಇಂಡಿಯಾ ನಟಿಯಾಗಿ ಮೆರೆಯುತ್ತಿರುವ ರಶ್ಮಿಕಾ ಕಂಡರೆ ಕನ್ನಡಿಗರಿಗೆ ಅಷ್ಟಕ್ಕಷ್ಟೇ. ಸದ್ಯ ಈ ವೀಡಿಯೋ ಅವರ ಸಿಟ್ಟನ್ನು ಇನ್ನಷ್ಟು ಹೆಚ್ಚು ಮಾಡುವಂತಿದೆ ಅನ್ನೋದರಲ್ಲಿ ಎರಡು ಮಾತಿಲ್ಲ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Charu Asopa: 'ಆಕೆಯನ್ನ ಬಿಟ್ಟು ಇರಲು ಆಗಲ್ಲ'..: ಬಿಗ್ ಬಾಸ್ ಆಫರ್ ತಿರಸ್ಕರಿಸಿದ ನಟಿ ಚಾರು!
K Bhagyaraj Kannada remakes list: ಕೆ. ಭಾಗ್ಯರಾಜ್ ಸಿನಿಮಾಗಳನ್ನು ರೀಮೇಕ್ ಮಾಡಿ ಗೆದ್ದಿರುವ ಕನ್ನಡದ ಹೀರೋಗಳು ಇವರೇ ನೋಡಿ; ಇದು ಆ ಚಿತ್ರಗಳ ಲಿಸ್ಟ್!‌