ಐಸ್‌ ನೀರಿನಲ್ಲಿ ಮುಖ ಕ್ಲೀನ್‌ ಮಾಡಿದ ರಶ್ಮಿಕಾ ಮಂದಣ್ಣ, ಹಲ್‌ ನೋಡ್ಕೊಳ್ಳಿ ಎಂದ ಫ್ಯಾನ್ಸ್‌

By Roopa Hegde  |  First Published Oct 2, 2024, 5:37 PM IST

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಏನ್ ಮಾಡಿದ್ರೂ ಸುದ್ದಿಯಾಗ್ತಾರೆ. ಸ್ಯಾಂಡಲ್ವುಡ್ ನಿಂದ ಬಾಲಿವುಡ್ ವರೆಗೆ ದೊಡ್ಡ ಫ್ಯಾನ್ಸ್ ಫಾಲೋವರ್ಸ್ ಹೊಂದಿದ್ದಾರೆ ರಶ್ಮಿಕಾ. ಅವರ ಮೊದಲ ಆಡಿಷನ್ ವಿಡಿಯೋ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈಗ ಅವರ ಬ್ಯೂಟಿ ಸಿಕ್ರೇಟ್ ವಿಡಿಯೋ ವೈರಲ್ ಆಗಿದೆ. 
 


ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ (National crush actress Rashmika Mandanna), ತೆಳ್ಳಗೆ, ಬೆಳ್ಳಗಿದ್ದಾರೆ. ಕೊಡಗಿನ ಬೆಡಗಿ ಈಗ  ಬಾಲಿವುಡ್ (Bollywood) ಆಳ್ತಿದ್ದಾರೆ. ಅವರ ಬ್ಯೂಟಿಗೆ ಬೋಲ್ಡ್ ಆಗದ ಹುಡುಗ್ರಿಲ್ಲ. ಮಾಡರ್ನ್ ಹಾಗೂ ಟ್ರಡಿಷನ್ ಎರಡೂ ಡ್ರೆಸ್ ನಲ್ಲಿ ಸುಂದರವಾಗಿ ಕಾಣುವ ನಟಿ, ಸೋಶಿಯಲ್ ಮೀಡಿಯಾ (Social Media) ದಲ್ಲಿ ಕ್ಯೂಟ್ ಎಕ್ಸ್ ಪ್ರೆಶನ್ ಮೂಲಕ ಎಲ್ಲರನ್ನು ಹಿಡಿದಿಟ್ಟುಕೊಂಡಿದ್ದಾರೆ. ಈಗ ರಶ್ಮಿಕಾ ಮಂದಣ್ಣ, ಐಸ್ ನೀರಿನಲ್ಲಿ ಮುಖ ಕ್ಲೀನ್ ಮಾಡುವ ವಿಡಿಯೋ ಒಂದು ವೈರಲ್ ಆಗಿದೆ. ವಿಡಿಯೋ ನೋಡಿದ್ರೆ, ರಶ್ಮಿಕಾಗೆ ಐಸ್ ನೀರಿ (ice water) ನಲ್ಲಿ ಮುಖ ಅದ್ದುವ ಟಾಸ್ಕ್ ನೀಡಿದಂತೆ ಕಾಣ್ತಿದೆ. 

rashmika_rush ಫ್ಯಾನ್ ಪೇಜ್ ನಲ್ಲಿ ಅವರ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಒಂದು ಬೌಲ್ ನಲ್ಲಿ ಐಸ್ ನೀರನ್ನು ಹಾಕಲಾಗಿದೆ. ಅದನ್ನು ಕೈನಲ್ಲಿ ಹಿಡಿದಿರುವ ನಟಿ, ಮುಖವನ್ನು ನೀರಿನಲ್ಲಿ ಅದ್ದಿ ತೆಗೆಯುತ್ತಾರೆ. ಮತ್ತೆ ಮಾಡುವಂತೆ ಅಲ್ಲಿರುವವರು ಹೇಳ್ತಿದ್ದಂತೆ ವೇಟ್, ಒನ್ ಸೆಕೆಂಡ್ ಎನ್ನುವ ರಶ್ಮಿಕಾ, ಉಸಿರು ಎಳೆದ್ಕೊಂಡು ಮತ್ತೆ ಮುಖವನ್ನು ನೀರಿನೊಳಗೆ ಹಾಕ್ತಾರೆ. 

Tap to resize

Latest Videos

ಅಪ್ಸರೆ ಐಶ್ ಸೂರ್ಯದೇವ ರಂಜಿತ್ ಪ್ರೀತಿ ನೋಡಿ, ಆನೆ ಅದ್ಕೊಂಡಿದ್ವಿ ಮಗು ಹಿಂದೆ ಬಿದ್ದಿದ್ದಾನೆ ಎಂದ ಫ್ಯಾನ್ಸ್‌

ಈ ವಿಡಿಯೋಕ್ಕೆ ವೇಟ್ ಅ ಸೆಕೆಂಡ್ ಅಂತಾನೆ ಶೀರ್ಷಿಕೆ ಹಾಕಲಾಗಿದೆ. ಈ ವಿಡಿಯೋ ವೈರಲ್ ಆಗ್ತಿದ್ದಂತೆ ಜನರ ಕಮೆಂಟ್ ಶುರುವಾಗಿದೆ. ರಶ್ಮಿಕಾ ಬಣ್ಣವಿಲ್ಲದ ಮುಖವನ್ನು ನೋಡಿದ ಫ್ಯಾನ್ಸ್, ನಾಚ್ಯುರಲ್ ಬ್ಯೂಟಿ ಅಂದ್ರೆ ಮತ್ತೆ ಕೆಲವರು, ಮುಖಕ್ಕೆ ಏನಾಗಿದೆ ಅಂತ ಪ್ರಶ್ನೆ ಮಾಡಿದ್ದಾರೆ. ಕೆಲ ಬಳಕೆದಾರರು ರಶ್ಮಿಕಾ ಮಂದಣ್ಣ ಹಲ್ಲಿನ ಮೇಲೆ ಕಣ್ಣಿಟ್ಟಿದ್ದಾರೆ. ರಶ್ಮಿಕಾ ಹಲ್ಲು ಅವರಿಗೆ ಇಷ್ಟವಾಗಿಲ್ಲ. ಹಳದಿ ಹಲ್ಲನ್ನು ಮೊದಲು ಕ್ಲೀನ್ ಮಾಡಿ, ನಿಮ್ಮ ಹಲ್ಲಿನ ಬಣ್ಣ ಯಾಕೆ ಹೀಗಿದೆ, ಮುಖ ಮಾತ್ರವಲ್ಲ ಬ್ರೆಷ್ ತೆಗೆದುಕೊಂಡು ನಿಮ್ಮ ಹಲ್ಲನ್ನು ಕೂಡ ಉಜ್ಜಿಕೊಳ್ಳಿ ಅಂತ ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ. 

ಮೇಕಪ್ ಇಲ್ದೆ ನೀವು ತುಂಬಾ ಚೆನ್ನಾಗಿ ಕಾಣ್ತೀರಾ ಅಂತ ಕೆಲವರು ಹೇಳಿದ್ರೆ ಮತ್ತೆ ಕೆಲವರು ಮೇಕಪ್ ಇದ್ರೆ ಮಾತ್ರ ರಶ್ಮಿಕಾ ಮುಖ ನೋಡ್ಬಹುದು ಎಂದಿದ್ದಾರೆ. ಕನ್ನಡ ಬಿಟ್ಟು ಬೇರೆ ಭಾಷೆಯಲ್ಲೇ ರಶ್ಮಿಕಾ ಹೆಚ್ಚು ಸಿನಿಮಾ ಮಾಡ್ತಿರುವ ಕಾರಣ, ಕನ್ನಡ ಇಂಡಸ್ಟ್ರಿ ಇವರನ್ನು ಹೊರಗೆ ಹಾಕಿದೆ ಎನ್ನುವ ಕಮೆಂಟ್ ಕೂಡ ಇಲ್ಲಿದೆ. ಕೆಲ ಫ್ಯಾನ್ಸ್ ಗೆ ರಶ್ಮಿಕಾ ಏನ್ ಮಾಡ್ತಿದ್ದಾರೆ ಎಂಬುದು ತಿಳಿದಿಲ್ಲ.

ಆಪ್ತಮಿತ್ರ ನಟಿ ಸೌಂದರ್ಯ ಕೋಟಿಗಟ್ಟಲೆ ಬೆಲೆ ಬಾಳೋ ಆಸ್ತಿ ಟಾಲಿವುಡ್ ನಟನ ಕೈ ಸೇರಿದ್ದೇಗೆ?

ಇದು ಐಸ್ ಥೆರಪಿ. ಇತ್ತೀಚಿನ ದಿನಗಳಲ್ಲಿ ಇದು ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಐಸ್ ನೀರಿನಲ್ಲಿ ಮುಖವನ್ನು ಅದ್ದಿ ತೆಗೆಯಲಾಗುತ್ತದೆ. ಇದು ಮೊಡವೆ ಪೀಡಿತ  ಸ್ಕಿನ್ ಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಮುಖ ಊದಿದ್ದರೆ ಇಲ್ಲವೆ ಕೆಂಪಾಗಿದ್ದರೆ, ಉರಿಯನ್ನು ಕಡಿಮೆ ಮಾಡಲು ಇದು ಅಹಕಾರಿ. ಚರ್ಮವನ್ನು ಬಿಗಿಗೊಳಿಸುವುದರ ಮೂಲಕ ಚರ್ಮ ಸುಕ್ಕುಗಟ್ಟುವುದನ್ನು ತಡೆಯುತ್ತದೆ. ಮೇಕಪ್ ಮುನ್ನ ಈ ಥೆರಪಿ ಮಾಡಿದ್ರೆ ಸ್ಕಿಮ್ ಮೃದುವಾಗುವುದಲ್ಲದೆ ಮೇಕಪ್ ಮುಖದ ಮೇಲೆ ಬಹುಕಾಲ ಉಳಿಯುತ್ತದೆ. 

ಇನ್ನು ರಶ್ಮಿಕಾ ಮಂದಣ್ಣ ಸಿನಿಮಾ ವಿಷ್ಯಕ್ಕೆ ಬರೋದಾದ್ರೆ ಬಾಲಿವುಡ್, ತೆಲುಗು ಚಿತ್ರಗಳಲ್ಲಿ ಅತೀ ಬೇಡಿಕೆಯ ಹಾಗೂ ಬ್ಯೂಸಿ ನಟಿ ರಶ್ಮಿಕಾ. ಈವರೆಗೆ ರಶ್ಮಿಕಾ 16ಕ್ಕಿಂತಲೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಸಿಕಂದರ್,ಕುಬೇರ, ಛಾವಾ, ರೈನ್ ಬೋ, ಪುಷ್ಪಾ 2, ದಿ ಗರ್ಲ್ ಫ್ರೆಂಡ್ ಸೇರಿದಂತೆ ಹಲವು ಚಿತ್ರಗಳು ತೆರೆಗೆ ಬರಲು ಸಿದ್ಧವಾಗಿದ್ದು, ಕೆಲ ಸಿನಿಮಾ ಶೂಟಿಂಗ್ ಈಗಷ್ಟೆ ಶುರುವಾಗಿದೆ. ವ್ಯಾಂಪೈರ್ಸ್ ಆಫ್‌ ವಿಜಯನಗರ ಸಿನಿಮಾ ಶೂಟಿಂಗ್ ಗೆ ರಶ್ಮಿಕಾ ಹಂಪಿಗೆ ಬರ್ತಿದ್ದಾರೆ ಎನ್ನುವ ಸುದ್ದಿ ಕೂಡ ಇದೆ. 

click me!