ಕಾಂತಾರದ ವಿಸ್ಮಯಗಳ ಪ್ರಪಂಚಕ್ಕೆ ದಂತಕಥೆಯ ಸೇರ್ಪಡೆ! ಸುದ್ದಿ ನಿಜವಾಗ್ಲಿ ಎಂದ ಫ್ಯಾನ್ಸ್

Published : Oct 02, 2024, 01:45 PM IST
ಕಾಂತಾರದ ವಿಸ್ಮಯಗಳ ಪ್ರಪಂಚಕ್ಕೆ ದಂತಕಥೆಯ ಸೇರ್ಪಡೆ! ಸುದ್ದಿ ನಿಜವಾಗ್ಲಿ ಎಂದ ಫ್ಯಾನ್ಸ್

ಸಾರಾಂಶ

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ಕಾಂತಾರ-2 ತಂಡವನ್ನು  ಹಿರಿಯ ನಟರೊಬ್ಬರು ಸೇರಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಫೋಟೋ ಸಹ ವೈರಲ್ ಆಗುತ್ತಿದೆ.

ಬೆಂಗಳೂರು: ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ 2’ ಅಂಗಳದಿಂದ ಹೊಸ ಸುದ್ದಿಯೊಂದು ಕೇಳಿ ಬಂದಿದೆ. ಭಾರತದ ಇಡೀ ಚಿತ್ರರಂಗದತ್ತ ಚಂದನವನದತ್ತ ನೋಡುವಂತೆ ಮಾಡಿದ ಚಿತ್ರ ಕಾಂತಾರ. ಇದೀಗ ಕಾಂತಾರ-2ರ ಹಲವು ನಿರೀಕ್ಷೆಗಳನ್ನು ಹುಟ್ಟಿಸಿದ್ದು, ಚಿತ್ರದ ಅಪ್‌ಡೇಟ್ ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಮಲಯಾಳಂ ಸಿನಿಮಾರಂಗದ ದಂತಕತೆ ಮೋಹನ್‌ಲಾಲ್ ನಟಿಸುತ್ತಿದ್ದಾರೆ ಎನ್ನಲಾಗಿದೆ. ಈ ಸಿನಿಮಾದಲ್ಲಿ ರಿಷಬ್‌ ತಂದೆಯ ಪಾತ್ರದಲ್ಲಿ ಮೋಹನ್‌ಲಾಲ್‌ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. 

ಪ್ರಸ್ತುತ ಮೋಹನ್‌ಲಾಲ್ ಹಾಗೂ ರಿಷಬ್‌ ಶೆಟ್ಟಿ ಜೊತೆಗಿರುವ ಹಳೆಯ ಫೋಟೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್‌ ಆಗಿದೆ. ಆದರೆ ಈ ಕುರಿತು ಚಿತ್ರತಂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸದ್ಯ ಕುಂದಾಪುರದಲ್ಲಿ ‘ಕಾಂತಾರ 2’ ಚಿತ್ರದ ಇನ್ನೊಂದು ಹಂತದ ಚಿತ್ರೀಕರಣಕ್ಕೆ ಸಿದ್ಧತೆ ನಡೆಯುತ್ತಿದೆ ಎನ್ನಲಾಗಿದೆ. 

ಈ ಹಳೆಯ ಫೋಟೋಗೆ ಕಮೆಂಟ್ ಮಾಡಿರುವ ನೆಟ್ಟಿಗರು, ಕಾಂತಾರ 2ದಲ್ಲಿ ನೀವು ನಟಿಸುತ್ತಿದ್ದೀರಾ? ರಿಷಬ್ ಮತ್ತು ಮೋಹನ್ ಲಾಲ್ ನೋಡಲು ಸೋದರರಂತೆ ಕಾಣಿಸುತ್ತೀರಿ. ರಿಷಬ್‌ ತಂದೆಯ ಪಾತ್ರದಲ್ಲಿ ಮೋಹನ್‌ಲಾಲ್‌ ನಟಿಸುತ್ತಿದ್ದಾರೆ ಎಂಬ ಸುದ್ದಿ ನಿಜವಾಗಲಿ ಎಂದು ಕೆಲವರು ಕಮೆಂಟ್ ಮಾಡುತ್ತಿದ್ದಾರೆ. ತೆರೆ ಮೇಲೆ ರಿಷಬ್ ಮತ್ತು ಮೋಹನ್ ಲಾಲ್ ಅವರನ್ನು ಜೊತೆಯಾಗಿ ನೋಡಲು ಅಭಿಮಾನಿಗಳು ಇಷ್ಟಪಡುತ್ತಿದ್ದಾರೆ.

ಕಾಂತಾರ 2 ಯಾರಾದರೂ ಲೀಕ್ ಮಾಡಿದರೆ ಅನ್ನುವ ಆತಂಕವಿದೆ: ರಿಷಬ್ ಶೆಟ್ಟಿ

ಕೇಂದ್ರ ಸರ್ಕಾರ ನೀಡುವ ಪ್ರತಿಷ್ಠಿತ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳಲ್ಲಿ ಕನ್ನಡದ ಬ್ಲಾಕ್‌ಬಸ್ಟರ್‌ ಚಿತ್ರ ‘ಕಾಂತಾರ’ದಲ್ಲಿನ ಅಭಿನಯಕ್ಕಾಗಿ ಖ್ಯಾತ ನಟ ರಿಷಬ್‌ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ‘ಕಾಂತಾರ’ ಚಿತ್ರವು ಪ್ರಾದೇಶಿಕ ವಿಭಾಗದಲ್ಲಿ ‘ಅತ್ಯುತ್ತಮ ಮನರಂಜನಾ ಚಿತ್ರ’ ಪ್ರಶಸ್ತಿಯನ್ನೂ ಪಡೆದುಕೊಂಡಿದೆ.

ಕಾಂತಾರ-2 ಚಿತ್ರೀಕರಣಕ್ಕೂ ಮುನ್ನ ನಟ ರಿಷಬ್‌ ಶೆಟ್ಟಿ, ಕುಟುಂಬ ಸಮೇತರಾಗಿ ಉಡುಪಿಯ ಬೈಲೂರಿನ ನೀಲಕಂಠ ಬಬ್ಬುಸ್ವಾಮಿ ದೈವಸ್ಥಾನಕ್ಕೆ ಭೇಟಿ ನೀಡಿ ಕೊರಗಜ್ಜನಿಗೆ ಮದ್ಯ, ಚಕ್ಕುಲಿ, ಬೀಡ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಕಾಂತಾರ ಚಿತ್ರೀಕರಣಕ್ಕೆ ಮೊದಲು ರಿಷಬ್‌ ಶೆಟ್ಟಿ ಇಲ್ಲಿಗೆ ಬಂದು ಪೂಜೆ ಸಲ್ಲಿಸಿದ್ದರು. ಸಿನಿಮಾ ಯಶಸ್ಸಿನ ಬಳಿಕವೂ  ಪತ್ನಿ, ಮಕ್ಕಳ ಜೊತೆ ಆಗಮಿಸಿ ಕೊರಗಜ್ಜ, ಬಬ್ಬುಸ್ವಾಮಿಗೆ ವಿಶೇಷ ಪ್ರಾರ್ಥನೆ, ಪೂಜೆ ಸಲ್ಲಿಸಿದ್ದರು. 

Kantara ಪ್ರೀಕ್ವೆಲ್ ಶೂಟಿಂಗ್ ಬಗ್ಗೆ ರಿಷಬ್‌ಗೆ ಟೆನ್ಷನ್: ಮಂಗಳೂರಿನಲ್ಲಿ ಮಾಡೋಕಾಗ್ತಿಲ್ಲಂತೆ 'ಕಾಂತಾರ 2' ಚಿತ್ರೀಕರಣ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ