ಆಪ್ತಮಿತ್ರ ನಟಿ ಸೌಂದರ್ಯ ಕೋಟಿಗಟ್ಟಲೆ ಬೆಲೆ ಬಾಳೋ ಆಸ್ತಿ ಟಾಲಿವುಡ್ ನಟನ ಕೈ ಸೇರಿದ್ದೇಗೆ?

By Santosh Naik  |  First Published Oct 2, 2024, 4:35 PM IST

ಚಿತ್ರನಟಿ ಸೌಂದರ್ಯ ಸಾವು ಕಂಡು ಹಲವು ವರ್ಷಗಳೇ ಕಳೆದಿವೆ. ಆದರೆ, ಅವರ ಸಾವಿನೊಂದಿಗೆ ಅವರ ಹೆಸರಲ್ಲಿದ್ದ ಅಪಾರ ಆಸ್ತಿಯ ಬಗ್ಗೆ ಇಂದಿಗೂ ಕುತೂಹಲ ಉಳಿದುಕೊಂಡಿದೆ.


ಟಿ ಸೌಂದರ್ಯ ಅವರು ಸಿನಿಮಾರಂಗದಲ್ಲಿ ತಮ್ಮ ಪ್ರೈಮ್‌ನಲ್ಲಿದ್ದಾಗಲೇ ಹೆಲಿಕಾಪ್ಟರ್‌ ಅಪಘಾತದಲ್ಲಿ ಅಸುನೀಗಿದರು. ಅವರ ಅಕಾಲಿಕ ಸಾವಿನ ಬೆನ್ನಲ್ಲಿಯೇ ಅವರ ಹೆಸರಲ್ಲಿದ್ದ ಕೋಟಿಗಟ್ಟಲೆ ಆಸ್ತಿ ಯಾರ ಹೆಸರಿಗೆ ಹೋಯಿತು ಅನ್ನೋದರ ಬಗ್ಗೆ ನಿರಂತರ ಪ್ರಶ್ನೆಗಳು ಎದುರಾಗಿದ್ದವು. ಸಾವಿತ್ರಿ ನಂತರ ತೆಲುಗು ಚಿತ್ರರಂಗಕ್ಕೆ ದೊರೆತ ನಟಿ ಸೌಂದರ್ಯ. ನಾಯಕಿಯಾಗಿ ಹೆಸರು ಗಳಿಸಿದ ಇವರು ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿ ಮೆಚ್ಚುಗೆಗೆ ಪಾತ್ರರಾಗಿದ್ದರು. ಬಹುತೇಕ ಎಲ್ಲಾ ದೊಡ್ಡ ನಟರ ಜೊತೆ ಅವರು ನಟಿಸಿದ್ದಾರೆ.  ತೆಲುಗಿನಲ್ಲಿ ಅವರನ್ನು ನಟಿ ಸಾವಿತ್ರಿಯಂತೆಯೇ ಗೌರವಿಸುತ್ತಿದ್ದರು. ಅತಿಯಾಗಿ ಮಾಡರ್ನ್‌ ಡ್ರೆಸ್‌ಗಳನ್ನು ಅತಿಯಾಗಿ ಧರಿಸದೇ, ಸಾಂಪ್ರದಾಯಿಕ ಮಾತ್ರಗಳಲ್ಲಿ ಮಿಂಚಿ ಸ್ಟಾರ್‌ ನಟಿಯಾಗಿದ್ದ ಏಕೈಕ ನಟಿ ಸೌಂದರ್ಯ. ನಾಲ್ಕು ಭಾಷೆಗಳಲ್ಲಿ ಹಲವಾರು ಚಿತ್ರಗಳನ್ನು ಮಾಡಿದ ಅವರು ಕೋಟಿಗಟ್ಟಲೆ ಆಸ್ತಿಯನ್ನು ಸಂಪಾದನೆ ಮಾಡಿದ್ದರು.

ಚುನಾವಣಾ ಪ್ರಚಾರದ ಸಮಯದಲ್ಲಿ ಸೌಂದರ್ಯ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟರು. ಆದರೆ, ಸಾವಿನ ವೇಳೆಗಾಗಲೇ ಅವರ ಹೆಸರಲ್ಲಿ ಕೋಟಿಗಟ್ಟಲೆ ಆಸ್ತಿ ಇತ್ತು.  ಸೌಂದರ್ಯ ಆಸ್ತಿಯನ್ನು ಅವರ ಪತಿ ತೆಗೆದುಕೊಂಡು ಎರಡನೇ ಮದುವೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪಗಳಿದ್ದವು. ಅಷ್ಟೇ ಅಲ್ಲ, ಮೊಕದ್ದಮೆ ಹೂಡಿ ಸೌಂದರ್ಯ ತಂದೆ-ತಾಯಿ ಆಸ್ತಿಯನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನುವ ಮಾತುಗಳಿವೆ.

ಸೌಂದರ್ಯ ಅವರ ಆಸ್ತಿಯ ಭಾಗವಾಗಿ, ಹೈದರಾಬಾದ್‌ನ ಶಂಷಾಬಾದ್ ಪ್ರದೇಶದಲ್ಲಿ 6 ಎಕರೆ ಜಮೀನನ್ನು ಹೊಂದಿದ್ದರು. ಅದನ್ನು ಅವರು ತಮ್ಮ ತಂದೆ-ತಾಯಿಯ ಹೆಸರಿನಲ್ಲಿ ಬರೆದಿದ್ದರು. ಈಗ ಆ ಆಸ್ತಿ ಕೋಟಿಗಟ್ಟಲೆ ಬೆಲೆ ಬಾಳುತ್ತದೆ. ಆದರೆ ಆಶ್ಚರ್ಯಕರ ಸಂಗತಿ ಎಂದರೆ ಆ ಆಸ್ತಿ ಈಗ ಟಾಲಿವುಡ್‌ನ ಹಿರಿಯ ನಟ ಮೋಹನ್ ಬಾಬು ಅವರ ಕೈ ಸೇರಿದೆ.. ಇದು ಹೇಗೆ ಸಾಧ್ಯ ಎಂಬ ಅನುಮಾನ ಬರುವುದು ಸಹಜ. 
ಸೌಂದರ್ಯ ನಿಧನದ ನಂತರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಅವರ ತಂದೆ-ತಾಯಿ ಇಲ್ಲಿನ ಜಮೀನನ್ನು ಮಾರಿದ್ದರು. ಆ ಜಮೀನನ್ನು ಮೋಹನ್ ಬಾಬು ಖರೀದಿ ಮಾಡಿದ್ದರು. ಆ ಜಾಗದಲ್ಲಿ ಅವರು ದೊಡ್ಡ ಮನೆ ಕಟ್ಟಿಸಿದ್ದಾರೆ. ಮಂಚು ಟೌನ್‌ಶಿಪ್ ಹೆಸರಿನಲ್ಲಿ ನಿರ್ಮಿಸಲಾದ ಆ ಮನೆಯಲ್ಲಿಯೇ ಅವರು ವಾಸ ಮಾಡುತ್ತಿದ್ದಾರೆ. ಆದರೆ ಈ ಜಾಗವನ್ನು ನಿಜವಾಗಿಯೂ ಸೌಂದರ್ಯ ಕುಟುಂಬದಿಂದ ಖರೀದಿಸಿದ್ದಾರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಚಿತ್ರರಂಗದಲ್ಲಿ ಈ ಮಾತು ಕೇಳಿಬರುತ್ತಿದೆ. 

ನಟಿ ಸೌಂದರ್ಯ ಸಾಯುತ್ತಾರೆ ಎಂಬ ವಿಷಯ ಈ ಒಬ್ಬ ವ್ಯಕ್ತಿಗೆ ಮಾತ್ರ ತಿಳಿದಿತ್ತು: ಯಾರವರು, ಇದರಲ್ಲಿ ಸತ್ಯವೆಷ್ಟು?

ಕನ್ನಡದ ಹುಡುಗಿಯಾಗಿದ್ದರೂ, ಸೌಂದರ್ಯ ತೆಲುಗು ಹುಡುಗಿಯಂತೆ ಕಾಣುತ್ತಿದ್ದರು. ಅವರು ಹೆಚ್ಚಿನ ಚಿತ್ರಗಳನ್ನು ಮಾಡಿದ್ದು ತೆಲುಗಿನಲ್ಲಿಯೇ. ನಾಯಕಿಯಾಗಿ ಅವಕಾಶಗಳು ಕಡಿಮೆಯಾಗುತ್ತಿದ್ದ ಸಮಯದಲ್ಲಿ ಅವರು ರಾಜಕೀಯಕ್ಕೆ ಪ್ರವೇಶಿಸಿ, ಬಿಜೆಪಿ ಪಕ್ಷ ಸೇರಿದರು. ಬಳಿಕ ಪಕ್ಷದ ಪ್ರಚಾರಕ್ಕಾಗಿ ಬೆಂಗಳೂರಿನಿಂದ ಹೆಲಿಕಾಪ್ಟರ್‌ನಲ್ಲಿ ಬಳ್ಳಾರಿಗೆ ತೆರಳುವ ವೇಳೆ ಸಂಭವಿಸಿದ ಅಪಘಾತದಲ್ಲಿ ಅವರು ಮೃತಪಟ್ಟಿದ್ದರು.

Tap to resize

Latest Videos

ಸ್ಟಾರ್ ನಟಿಯಾಗಿದ್ದ ಸೌಂದರ್ಯ ಚುನಾವಣೆ ಪ್ರಚಾರಕ್ಕೆ ಹೊರಟು ಸಾವು ಕಂಡಿದ್ದು ಯಾಕೆ?

ಸೌಂದರ್ಯ ಹೆಲಿಕಾಪ್ಟರ್ ಹತ್ತಿದ ತಕ್ಷಣ, ಅದು ಮೇಲಕ್ಕೆ ಹಾರುತ್ತಿದ್ದಂತೆ ಸ್ಫೋಟಗೊಂಡು ಪತನಗೊಂಡಿತು. ಇದರಿಂದಾಗಿ ಅದರಲ್ಲಿದ್ದ ಸೌಂದರ್ಯ ಮತ್ತು ಅವರ ಸಹೋದರ ಸಜೀವ ದಹನವಾದರು. 2004 ರಲ್ಲಿ ನಡೆದ ಈ ಘಟನೆಯನ್ನು 20 ವರ್ಷಗಳು ಕಳೆದರೂ ಅವರ ಅಭಿಮಾನಿಗಳು ಇನ್ನೂ ಮರೆಯಲು ಸಾಧ್ಯವಾಗುತ್ತಿಲ್ಲ.  ಸೌಂದರ್ಯ ನಿಧನರಾದಾಗ ಅವರು 3 ತಿಂಗಳ ಗರ್ಭಿಣಿ. ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಸ್ಟಾರ್ ನಟಿಯಾಗಿ ಮೆರೆದ ಅವರು ಕೇವಲ 27 ನೇ ವಯಸ್ಸಿನಲ್ಲಿಯೇ ನಿಧನರಾದರು. ಟಾಲಿವುಡ್‌ನಿಂದ ಸೌಂದರ್ಯ ನಿಧನವನ್ನು ತಾಳಿಕೊಳ್ಳಲಾಗದೆ ನಟ ವೆಂಕಟೇಶ್, ಮೋಹನ್ ಬಾಬು ಮುಂತಾದ ನಟರು ಕಣ್ಣೀರು ಹಾಕಿದರು. 

ದಕ್ಷಿಣ ಭಾರತದ ಖ್ಯಾತ ನಟಿ: ಸುಂದರ ನಗುವಿನೊಂದಿಗೆ ಅಭಿಮಾನಿಗಳನ್ನು ಆಕರ್ಷಿಸಿದ ನಟಿ ಸೌಂದರ್ಯ. ಬೆಂಗಳೂರಿನವರಾದ ಅವರು ಕನ್ನಡ ಕುಟುಂಬದಲ್ಲಿ ಜನಿಸಿ ಬೆಳೆದರು. 1972 ರಲ್ಲಿ ಜನಿಸಿದ ಸೌಂದರ್ಯ ಕನ್ನಡ ಚಿತ್ರಗಳಲ್ಲಿ ನಟಿಸುತ್ತಾ, ಟಾಲಿವುಡ್‌ನಲ್ಲಿ ಅವಕಾಶಗಳನ್ನು ಪಡೆದರು. ತೆಲುಗಿನಲ್ಲಿ ಶ್ರೇಷ್ಠ ನಟಿಯಾಗಿ ಹೊರಹೊಮ್ಮಿದರು. ದಕ್ಷಿಣ ಭಾರತದ ಚಿತ್ರರಂಗವನ್ನು ಆಳಿದ ನಟಿ ಸೌಂದರ್ಯ. 

ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಸ್ಟಾರ್ ನಟಿಯಾಗಿ ಬೆಳೆದ ಅವರು ದಕ್ಷಿಣ ಭಾರತದ ಭಾಷೆಗಳಲ್ಲಿ ಖ್ಯಾತಿ ಗಳಿಸಿದರು. 90 ರ ದಶಕದಲ್ಲಿ ದಕ್ಷಿಣ ಭಾರತದ ಚಿತ್ರರಂಗದ ಸ್ಟಾರ್ ನಟರಾದ ಚಿರಂಜೀವಿ, ರಜನೀಕಾಂತ್, ಕಮಲ್ ಹಾಸನ್, ಮೋಹನ್ ಲಾಲ್, ವೆಂಕಟೇಶ್, ನಾಗಾರ್ಜುನ, ಶ್ರೀಕಾಂತ್, ಜಗಪತಿ ಬಾಬು ಮುಂತಾದವರೊಂದಿಗೆ ಕೌಟುಂಬಿಕ ಚಿತ್ರಗಳಲ್ಲಿ ನಟಿಸಿ ಮೆಚ್ಚುಗೆ ಗಳಿಸಿದ್ದಾರೆ. 

ಅದೇ ರೀತಿ ಸೌಂದರ್ಯ ಅವರು ತಮ್ಮ 20 ವರ್ಷಗಳ ಸಿನಿಮಾ ಜೀವನದಲ್ಲಿ ದಕ್ಷಿಣ ಭಾರತದ ಸ್ಟಾರ್ ನಟಿಯಾಗಿ ಬೆಳೆದರು. ದಕ್ಷಿಣ ಭಾರತದಲ್ಲಿ ಮಾತ್ರವಲ್ಲ, ಬಾಲಿವುಡ್‌ನಲ್ಲಿ ಅಮಿತಾಬ್ ಬಚ್ಚನ್ ಅವರೊಂದಿಗೆ ಸೂರ್ಯವಂಶಂ ಚಿತ್ರದಲ್ಲಿ ದೇವಯಾನಿ ಪಾತ್ರವನ್ನು ನಿರ್ವಹಿಸಿದ್ದಾರೆ. ಅಮಿತಾಬ್ ಬಚ್ಚನ್ ಅವರೊಂದಿಗೆ ನಟಿಸಿ ಎಲ್ಲರ ಗಮನ ಸೆಳೆದರು. ತೆಲುಗಿನಲ್ಲಿ ಆ ಚಿತ್ರ ದೊಡ್ಡ ಹಿಟ್ ಆದ್ದರಿಂದ ಹಿಂದಿ ಚಿತ್ರಗಳಲ್ಲಿ ನಟಿಸುವ ಅವಕಾಶಗಳು ಬಂದವು. 

click me!