ಟಿವಿಎಸ್ ರೋನಿನ್‍ನ ಬಹುಮುಖ ವೈಶಿಷ್ಟ್ಯಗಳು, ವಿಶಿಷ್ಟ ವಿನ್ಯಾಸ ಮತ್ತು ಆಧುನಿಕ ತಂತ್ರಜ್ಞಾನದೊಂದಿಗೆ ಸಂಯೋಜಿಸಲ್ಪಟ್ಟಿದ್ದು, ಭೂಪ್ರದೇಶಗಳಾದ್ಯಂತ ಒತ್ತಡ ಮುಕ್ತ ಸವಾರಿ ಅನುಭವಗಳನ್ನು ಖಚಿತಪಡಿಸುತ್ತದೆ. ಡ್ಯುಯಲ್- ಚಾನೆಲ್ ಎಬಿಎಸ್, ಧ್ವನಿ ನೆರವು ಮತ್ತು ವರ್ಧಿತ ಸಂಪರ್ಕದಂತಹ ಪ್ರಭಾವಶಾಲಿ ತಂತ್ರಜ್ಞಾನ ಮತ್ತು ಅನುಕೂಲತೆಯ ವೈಶಿಷ್ಟ್ಯಗಳೊಂದಿಗೆ ಮೋಟಾರ್‍ಸೈಕಲ್ ಪ್ರಪ್ರಥಮ ಎನಿಸಿದೆ. ಇನ್ನೊಂದು ಪ್ರಥಮ ವೈಶಿಷ್ಟ್ಯವೆಂದರೆ, ಟಿವಿಎಸ್ ರೋನಿನ್ ಬ್ರ್ಯಾಂಡೆಡ್ ವಿಶ್ವ ದರ್ಜೆಯ ಸರಕುಗಳು ಮತ್ತು ವಿಶೇಷ ಅಗತ್ಯತೆಗೆ ಅನುಗುಣವಾಗಿ ರೂಪಿಸಿದ ಬಿಡಿಭಾಗಗಳು, ಕಾನ್ಫಿಗರೇಟರ್ ಮತ್ತು ಮೀಸಲಾದ ಅನುಭವ ಕಾರ್ಯಕ್ರಮದ ವಿಶೇಷ ಶ್ರೇಣಿ.