ಹೈದರಾಬಾದಿಂದ ಲೈವ್ ಬಂದ ರಶ್ಮಿಕಾ ಐ ಲವ್ ಹಿಂದಿ ಅಂದ್ರು!

First Published | Sep 16, 2021, 12:07 AM IST

ಕನ್ನಡದ ಕಿರಿಕ್ ಪಾರ್ಟಿ ಮೂಲಕ ಹೆಸರು ಸಂಪಾದನೆ ಮಾಡಿಕೊಂಡು ಟಾಲಿವುಡ್ನಲ್ಲಿಯೂ ಸದ್ದು ಮಾಡಿ ಇದೀಗ ಬಾಲಿವುಡ್ ನಲ್ಲಿಯೂ ಬ್ಯುಸಿಯಾಗಿರುವ ನಟಿ ರಶ್ಮಿಕಾ ಮಂದಣ್ಣ ಅಭಿಮಾನಿಗಳ ಜತೆ ಮುಕ್ತ ಸಂವಾದ ನಡೆಸಿದ್ದಾರೆ.

ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಲೈವ್ ಬಂದ ರಶ್ಮಿಕಾ ಅಭಿಮಾನಿಗಳ ಪ್ರಶ್ನೆಗೆ ಉತ್ತರಸಿದ್ದಾರೆ. ಎಂದಿನ ತಮ್ಮ ನಯವಾದ ಮ್ಯಾನರಿಸಂನಲ್ಲಿಯೇ ಕಾಣಿಸಿಕೊಂಡರು.

ಲೈವ್ ಲೇಟಾಗಿ ಆರಂಭಿಸಿದ್ದಕ್ಕೆ ರಶ್ಮಿಕಾ ಕ್ಷಮೆ  ಕೋರಿದರು. ಬೆಳಿಗ್ಗೆಯೇ ತಮ್ಮ ಇನ್​ಸ್ಟಾ ಸ್ಟೋರೀಸ್​ನಲ್ಲಿ ಲೈವ್ ಬರುತ್ತೇನೆ ಎಂದು  ವಿಷಯ ಹಂಚಿಕೊಂಡಿದ್ದರು.

Tap to resize

ಮಧ್ಯಾಹ್ನ ಲಂಚ್ ಬ್ರೇಕ್​ನಲ್ಲಿ ಅಂದರೆ 1.30ಕ್ಕೆ ಲೈವ್ ಬರುವುದಾಗಿ ಹೇಳಿದ್ದರು. ಆದರೆ 2.20 ಆದರೂ ಅವರ ಲೈವ್​ ಆರಂಭವಾಗಲೇ ಇಲ್ಲ. ಈ ಕಾರಣಕ್ಕೆ ಮೊದಲಿಗೆ ಕ್ಷಮೆ ಕೇಳಿಕೊಂಡೇ ಮಾತುಕತೆ ಶುರುಮಾಡಿದರು.

ಅಭಿಮಾನಿಗಳ ಪ್ರಶ್ನೆಗೆ  ಒಂದಾದ ಮೇಲೆ ಒಂದು ಉತ್ತರ ನೀಡುತ್ತ ಸಾಗಿದರು.  ನಾನೀಗ ಶೂಟಿಂಗ್ ನಲ್ಲಿ ಬ್ಯುಸಿ ಇದ್ದೇನೆ ಊಟ ಮಾಡುವುದನ್ನು ಬಿಟ್ಟು ನಿಮ್ಮೊಂದಿಗೆ ಮಾತು ಆರಂಭಿಸುತ್ತಿದ್ದೇನೆ ಎಂದು ತಿಳಿಸಿದರು.

ಮೊಬೈಲ್ ನೆಟ್ ವರ್ಕ್  ಇಲ್ಲದ ಕಡೆ ಚಿತ್ರೀಕರಣ ನಡೆಯುತ್ತಿದ್ದ ಕಾರಣದಿಂದಾಗಿ ಯಾವ ಪೋಸ್ಟ್​ ಸಹ ಮಾಡಲಾಗಲಿಲ್ಲ. ಅಭಿಮಾನಿಗಳು ಮನ್ನಿಸಬೇಕು ಎಂದು ಕೇಳಿಕೊಂಡರು.

ಸದ್ಯ ಹೈದರಾಬಾದಿನಲ್ಲಿ ತೆಲುಗು ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಈ ನಟಿ, ಇನ್ನು 10 ದಿನಗಳ ಕಾಲ ಇಲ್ಲಿಯೇ ಕೆಲಸವಿದೆ. ನಾನು ಊರು ಕೊಡಗಿಗೆ ಹೋಗದೆ ವರ್ಷಗಳೆ ಆಯಿತು ಎಂದರು.

ಅಭಿಮಾನಿಗಳ ಜತೆ ಇಂಗ್ಲಿಷ್ ನಲ್ಲಿಯೇ ಉತ್ತರ ನೀಡಿದ ರಶ್ಮಿಕಾ ಬೆಂಗಾಲಿ ಸಿನಿಮಾದಲ್ಲಿಯೂ ನಟಿಸಬೇಕು ಎಂಬ ಆಸೆಯಿದೆ ಎಂದು ತಿಳಿಸಿದರು.

ಅಲ್ಲು ಅರ್ಜುನ್, ವಿಜಯ್ ಬಗ್ಗೆ ಏನು ಹೇಳುತ್ತೀರಿ ಎಂದಾಗ ಅಲ್ಲು ಅರ್ಜುನ್ ಆಸಮ್ ಎಂದರು. ಕೇರಳವನ್ನು ಪ್ರೀತಿಸುತ್ತೇನೆ ಮಲೆಯಾಳಂ ಬರುವುದಿಲ್ಲ ಎಂದು ಒಪ್ಪಿಕೊಂಡರು.

ಇಡೀ ಪ್ರಪಂಚವನ್ನು ತಿರುಗುವ ಆಸೆ ಇದೆ.  ಕನ್ನಡದಲ್ಲಿಯೂ ಸಿನಿಮಾ ದೊರೆತರೆ ಮಾಡುತ್ತೇನೆ. ಬಾಲಿವುಡ್ ನಲ್ಲಿಯೂ ಎರಡು ಸಿನಿಮಾಗಳು  ನಡೆಯುತ್ತಿವೆ ಎಂದರು.

ಹಿಂದಿ ಭಾಷೆಯ ಮೇಲೆ ವಿಶೇಷ ಗೌರವವಿದೆ. ನಾನು ಹಿಂದಿ ಪ್ರೀತಿಸುತ್ತೇನೆ. ಯೆಸ್ .. ಹಿಂದಿ ಇಷ್ಟಪಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಲೈವ್ ಮಧ್ಯೆ ಹಿಂದಿನಿಂದ ಬಂದ ವ್ಯಕ್ತಿಗೆ ತೆಲುಗಿನಲ್ಲಿಯೇ ರಶ್ಮಿಕಾ ಮಾತನಾಡಿದರು. ಈಗ ಈ ಕೆಲಸ ಮಾಡಬೇಡ.. ಲೈವ್ ಮಾಡುತ್ತಿದ್ದೇನೆ ಡಿಸ್ಟರ್ಬ್ ಆಗುತ್ತಿದೆ ಎಂದು ತಿಳಿಸಿದರು. 

ಕನ್ನಡದ ಕಿರಿಕ್ ಪಾರ್ಟಿ ಮೂಲಕ ಹೆಸರು ಸಂಪಾದನೆ ಮಾಡಿಕೊಂಡು ಟಾಲಿವುಡ್ನಲ್ಲಿಯೂ ಸದ್ದು ಮಾಡಿ ಇದೀಗ ಬಾಲಿವುಡ್ ನಲ್ಲಿಯೂ ಬ್ಯುಸಿಯಾಗಿರುವ ನಟಿ ರಶ್ಮಿಕಾ ಮಂದಣ್ಣ ಅಭಿಮಾನಿಗಳ ಜತೆ ಮುಕ್ತ ಸಂವಾದ ನಡೆಸಿದ್ದಾರೆ.

ಕನ್ನಡದ ಕಿರಿಕ್ ಪಾರ್ಟಿ ಮೂಲಕ ಹೆಸರು ಸಂಪಾದನೆ ಮಾಡಿಕೊಂಡು ಟಾಲಿವುಡ್ನಲ್ಲಿಯೂ ಸದ್ದು ಮಾಡಿ ಇದೀಗ ಬಾಲಿವುಡ್ ನಲ್ಲಿಯೂ ಬ್ಯುಸಿಯಾಗಿರುವ ನಟಿ ರಶ್ಮಿಕಾ ಮಂದಣ್ಣ ಅಭಿಮಾನಿಗಳ ಜತೆ ಮುಕ್ತ ಸಂವಾದ ನಡೆಸಿದ್ದಾರೆ.

Latest Videos

click me!