May 6, 2024, 5:54 PM IST
ರಾಜ್ಯದಲ್ಲಿ ಕೊನೆಯ ಮತ್ತು ಎರಡನೇ ಹಂತದ ಮತದಾನಕ್ಕೆ ಉಳದಿರೋದು ಇನ್ನೊಂದೇ ದಿನ ಬಾಕಿ. ರಾಜ್ಯದಲ್ಲಿ ಒಂದನೇ ಹಂತದ ಮತದಾನ ಮುಗಿದ 11 ದಿನಗಳ ನಂತರ ಎರಡನೇ ಹಂತದ ಮತದಾನ ನಡೆಯಲಿದೆ. ಲೋಕಸಭಾ ಚುಣಾವಣಾ(Lok Sabha elections 2024) ಪ್ರಚಾರ ಸಂದರ್ಭದಲ್ಲಿ ಹತ್ತಾರು ವಿಷಯಗಳು ಚರ್ಚೆಯಾಗಿವೆ. ಕಳೆದ ಏಪ್ರಿಲ್ 26 ರಂದು ದಕ್ಷಿಣ ಕರ್ನಾಟಕ(South Karnataka) ಭಾಗದ ಒಟ್ಟು 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ(Voting) ನಡೆಯಿತು. ಇದು ರಾಜ್ಯದಲ್ಲಿ ನಡೆದ ಮೊದಲ ಹಂತದ ಮತದಾನವಾಗಿತ್ತು. ಇದಾಗಿ 11 ದಿನಗಳ ನಂತರ ಉತ್ತರದಲ್ಲಿ ಉಳಿದ 14 ಕ್ಷೇತ್ರಗಳ ಮತದಾನದ ಸಮಯ ಈಗ ಬಂದಿದೆ. ಮೇ 7 ರಂದು ಉತ್ತರ ಕರ್ನಾಟಕ ಭಾಗದ 14 ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನ ನಡೆಯಲಿದೆ. ಲೋಕಸಭಾ ಚುಣಾವಣಾ ಪ್ರಚಾರ ಸಂದರ್ಭದಲ್ಲಿ, ರಾಜ್ಯದಲ್ಲಿ ಹತ್ತಾರು ವಿಷಯಗಳು ಚರ್ಚೆಗೆ ಬಂದಿವೆ. ಅದರಲ್ಲಿ ಕೆಲವು ಚರ್ಚೆಗಳು ದೊಡ್ಡ ಕ್ರಾಂತಿಯನ್ನೇ ಎಬ್ಬಿಸಿವೆ. ಇನ್ನು ಕೆಲವು ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆಯಾಗಿವೆ.
ಇದನ್ನೂ ವೀಕ್ಷಿಸಿ: Lok Sabha Elections 2024: 2ನೇ ಹಂತದ ಮತಜಾತ್ರೆಗೆ ಕರ್ನಾಟಕ ಸಜ್ಜು! 'ಉತ್ತರ' ಕಾಂಗ್ರೆಸ್ಸಿಗಾ..? ಬಿಜೆಪಿಗಾ..?