IPL 2024 ಸನ್‌ರೈಸರ್ಸ್ ಹೈದರಾಬಾದ್ ಎದುರು ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ

By Naveen KodaseFirst Published May 6, 2024, 7:05 PM IST
Highlights

ಪ್ಯಾಟ್ ಕಮಿನ್ಸ್ ನೇತೃತ್ವದ ಸನ್‌ರೈಸರ್ಸ್‌ ಹೈದರಾಬಾದ್ ತಂಡವು ಆಡಿರುವ 10 ಪಂದ್ಯಗಳಲ್ಲಿ 6ರಲ್ಲಿ ಜಯಭೇರಿ ಬಾರಿಸಿದ್ದು, ಮತ್ತೊಂದು ಗೆಲುವು ತಂಡವನ್ನು ಪ್ಲೇ-ಆಫ್‌ನ ಸನಿಹಕ್ಕೆ ತಂದು ನಿಲ್ಲಿಸಲಿದೆ. ಇನ್ನೊಂದೆಡೆ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ 11ರಲ್ಲಿ 8 ಪಂದ್ಯ ಸೋತಿರುವ ಮುಂಬೈ ಇಂಡಿಯನ್ಸ್ ತಂಡದ ಪ್ಲೇ-ಆಫ್‌ ಬಾಗಿಲು ಬಂದ್‌ ಆಗಿದ್ದು, ಅಧಿಕೃತಗೊಳ್ಳುವುದು ಮಾತ್ರ ಬಾಕಿಯಿದೆ.

ಮುಂಬೈ(ಮೇ.06): 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 55ನೇ ಪಂದ್ಯದಲ್ಲಿಂದು ಮುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಆತಿಥೇಯ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ.

ಮುಂಬೈ ಹಾಗೂ ಹೈದರಾಬಾದ್ ನಡುವಿನ ಪಂದ್ಯಕ್ಕೆ ಇಲ್ಲಿನ ಐತಿಹಾಸಿಕ ವಾಂಖೇಡೆ ಮೈದಾನ ಆತಿಥ್ಯ ವಹಿಸಿದೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, 23 ವರ್ಷದ ಯುವ ಆಲ್ರೌಂಡರ್ ಅನ್ಸೂಲ್ ಕಂಬೋಜ್ ತಂಡ ಕೂಡಿಕೊಂಡಿದ್ದಾರೆ. ಇನ್ನೊಂದೆಡೆ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಕೂಡಾ ಒಂದು ಬದಲಾವಣೆ ಮಾಡಲಾಗಿದ್ದು, ಮಯಾಂಕ್ ಅಗರ್‌ವಾಲ್ ತಂಡ ಕೂಡಿಕೊಂಡಿದ್ದಾರೆ

🚨 Toss 🚨 win the toss and will bowl first against

Follow the Match ▶️ https://t.co/iZHeIP3ZRx | pic.twitter.com/6wwk8e5nmU

— IndianPremierLeague (@IPL)

ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ರೋಹಿತ್ ಶರ್ಮಾ ಪಡೆಗೆ ಗುಡ್ ನ್ಯೂಸ್..!

ಪ್ಯಾಟ್ ಕಮಿನ್ಸ್ ನೇತೃತ್ವದ ಸನ್‌ರೈಸರ್ಸ್‌ ಹೈದರಾಬಾದ್ ತಂಡವು ಆಡಿರುವ 10 ಪಂದ್ಯಗಳಲ್ಲಿ 6ರಲ್ಲಿ ಜಯಭೇರಿ ಬಾರಿಸಿದ್ದು, ಮತ್ತೊಂದು ಗೆಲುವು ತಂಡವನ್ನು ಪ್ಲೇ-ಆಫ್‌ನ ಸನಿಹಕ್ಕೆ ತಂದು ನಿಲ್ಲಿಸಲಿದೆ. ಇನ್ನೊಂದೆಡೆ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ 11ರಲ್ಲಿ 8 ಪಂದ್ಯ ಸೋತಿರುವ ಮುಂಬೈ ಇಂಡಿಯನ್ಸ್ ತಂಡದ ಪ್ಲೇ-ಆಫ್‌ ಬಾಗಿಲು ಬಂದ್‌ ಆಗಿದ್ದು, ಅಧಿಕೃತಗೊಳ್ಳುವುದು ಮಾತ್ರ ಬಾಕಿಯಿದೆ. ಹೀಗಾಗಿ ತಂಡ ಪ್ರತಿಷ್ಠೆಗಾಗಿ ಆಡಬೇಕಿದೆ.

ಸನ್‌ರೈಸರ್ಸ್ ಹೈದರಾಬಾದ್ ತಂಡವು ಕಳೆದ 3 ಪಂದ್ಯಗಳಲ್ಲಿ 2ರಲ್ಲಿ ಸೋತರೂ ತಂಡ ಬಲಿಷ್ಠವಾಗಿಯೇ ತೋರುತ್ತಿದ್ದು, ಮುಂಬೈ ವಿರುದ್ಧ ಈ ಬಾರಿ ಸತತ 2ನೇ ಜಯದ ಕಾತರದಲ್ಲಿದೆ.

ಉಭಯ ತಂಡಗಳ ಆಟಗಾರರ ಪಟ್ಟಿ

ಸನ್‌ರೈಸರ್ಸ್ ಹೈದ್ರಾಬಾದ್‌: ಅಭಿಷೇಕ್‌ ಶರ್ಮಾ, ಟ್ರ್ಯಾವಿಸ್ ಹೆಡ್‌, ಮಯಾಂಕ್ ಅಗರ್‌ವಾಲ್‌, ಹೆನ್ರಿಚ್ ಕ್ಲಾಸೆನ್‌, ನಿತೀಶ್‌ ರೆಡ್ಡಿ, ಅಬ್ದುಲ್ ಸಮದ್‌, ಶಾಬಾಜ್‌ ಅಹಮದ್, ಮಾರ್ಕೊ ಯಾನ್ಸೆನ್‌, ಪ್ಯಾಟ್ ಕಮಿನ್ಸ್‌(ನಾಯಕ), ಭುವನೇಶ್ವರ್‌ ಕುಮಾರ್, ಟಿ ನಟರಾಜನ್‌.

ಮುಂಬೈ ಇಂಡಿಯನ್ಸ್: ಇಶಾನ್‌ ಕಿಶನ್, ರೋಹಿತ್‌ ಶರ್ಮಾ, ಸೂರ್ಯಕುಮಾರ್‌ ಯಾದವ್, ತಿಲಕ್‌ ವರ್ಮಾ, ನೇಹಲ್‌ ವದೇರಾ, ಹಾರ್ದಿಕ್‌ ಪಾಂಡ್ಯ(ನಾಯಕ), ಟಿಮ್ ಡೇವಿಡ್‌, ಅನ್ಸೂಲ್ ಕಂಬೋಜ್, ಪೀಯೂಸ್ ಚಾವ್ಲಾ, ಜಸ್ಪ್ರೀತ್ ಬುಮ್ರಾ, ನುವಾನ್ ತುಷಾರ.

ಪಂದ್ಯ: ಸಂಜೆ 7.30ಕ್ಕೆ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ
 

click me!