ಪರಮ್-ಧನಂಜಯ್ 'ಕೋಟಿ'ಯಲ್ಲಿ ದಿನೂ ಸಾವ್ಕಾರ್; ತೆರೆ ಮೇಲೆ ರಮೇಶ್ ಇಂದಿರಾ ಘರ್ಜನೆ!

Published : May 06, 2024, 06:39 PM ISTUpdated : May 06, 2024, 06:44 PM IST
ಪರಮ್-ಧನಂಜಯ್ 'ಕೋಟಿ'ಯಲ್ಲಿ ದಿನೂ ಸಾವ್ಕಾರ್; ತೆರೆ ಮೇಲೆ ರಮೇಶ್ ಇಂದಿರಾ ಘರ್ಜನೆ!

ಸಾರಾಂಶ

ಕತೆಯನ್ನು ಮುಂದೆ ತೆಗೆದುಕೊಂಡು ಹೋಗುವವನು, ನಾಯಕನ ಮೌಲ್ಯಗಳನ್ನು ಪ್ರಶ್ನಿಸುವವನು, ಕತೆಗೊಂದು ಎನರ್ಜಿ ಕೊಡುವವನು ಖಳನಾಯಕ!  

ಸ್ಯಾಂಡಲ್‌ವುಡ್ ಅಂಗಳದಲ್ಲಿ ನಟ ಧನಂಜಯ್ ಹಾಗೂ ನಿರ್ದೇಶಕ ಪರಮ್ ಜೋಡಿಯ 'ಕೋಟಿ' ಚಿತ್ರದ ಬಗ್ಗೆ ನಿರೀಕ್ಷೆ ದಿನದಿನಕ್ಕೂ ಹೆಚ್ಚಾಗುತ್ತಿದೆ. ಸದ್ಯ ಈ ಚಿತ್ರದಲ್ಲಿ ಮುಖ್ಯ ವಿಲನ್‌ ಆಗಿ ನಟಿಸಿರುವ 'ರಮೇಶ್ ಇಂದಿರಾ' ಫೋಟೋ ರೀವೀಲ್ ಆಗಿದ್ದು ಭಾರಿ ಕುತೂಹಲ ಕೆರಳಿಸುತ್ತಿದೆ. ಕೋಟಿ ಚಿತ್ರದಲ್ಲಿ ರಮೇಶ್ ಂದಿರಾ ಅವರದು 'ದಿನೂ ಸಾವ್ಕಾರ್' ಹೆಸರಿನ ವಿಲನ್ ರೋಲ್. ಈ ಪಾತ್ರ, ಅದರ ವ್ಯಾಪ್ತಿ-ವಿಶೇಷತೆಗಳ ಬಗ್ಗೆ ಪರಮ್ ಮಾಹಿತಿ ಬಿಚ್ಚಿಟ್ಟಿದ್ದಾರೆ. ಹಾಗಿದ್ದರೆ, ಕೋಟಿ ನಿರ್ದೇಶಕರು ತಮ್ಮ ಸಿನಿಮಾದ ಮುಖ್ಯ ಪಾತ್ರದ ಬಗ್ಗೆ ಹೇಳಿದ್ದೇನು? 

ಕತೆಯಲ್ಲಿ ವಿಲನ್ನುಗಳು ಹೇಗೆ ತಮ್ಮನ್ನು ಆಕರ್ಷಿಸುತ್ತಾರೆ ಎನ್ನುವುದರ ಬಗ್ಗೆ ಕೋಟಿ ಸಿನಿಮಾದ ಬರಹಗಾರ ಮತ್ತು ನಿರ್ದೇಶಕ ಪರಮ್‌ ತಮ್ಮ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ವಿವರವಾಗಿ ಬರೆದುಕೊಂಡಿದ್ದಾರೆ. 

'ಸುಯೋಧನ ಇಲ್ಲದ ಮಹಾಭಾರತ ಇಲ್ಲ. ರಾವಣನಿಲ್ಲದ ರಾಮಾಯಣವಿಲ್ಲ. ಮನಸ್ಸಿನ ಆಳದಲ್ಲಿ ಹುದುಗಿರುವ ಆಸೆಗಳನ್ನು ಈ ಪಾತ್ರಗಳು ನಮಗೆ ಭೇಟಿ ಮಾಡಿಸುತ್ತವೆ. ಇಷ್ಟ ಇಲ್ಲ ಎಂದು ಎಷ್ಟೇ ಹೇಳಿದರೂ ಖಳನಾಯಕರ ಪಾತ್ರಕ್ಕೆ ಅದೇನೋ ಸೆಳೆತ ಇದೆ. ಇಲ್ಲದಿದ್ದರೆ ರಾವಣನ ಲಂಕೆ ಸುಭಿಕ್ಷವಾಗಿತ್ತು ಎಂದು ಓದಿದಾಗ ಯಾಕೆ ಖುಷಿಯಾಗಬೇಕು? ಸುಯೋಧನ ಮತ್ತು ಕರ್ಣನ ನಡುವಿನ ಗೆಳೆತವನ್ನು ನೋಡಿ ಯಾಕೆ ನಾವು ಭಾವುಕರಾಗಬೇಕು?
ಕತೆಯನ್ನು ಮುಂದೆ ತೆಗೆದುಕೊಂಡು ಹೋಗುವವನು, ನಾಯಕನ ಮೌಲ್ಯಗಳನ್ನು ಪ್ರಶ್ನಿಸುವವನು, ಕತೆಗೊಂದು ಎನರ್ಜಿ ಕೊಡುವವನು ಖಳನಾಯಕ!ʼ ಎಂದು ಬರೆದುಕೊಂಡಿದ್ದಾರೆ ಪರಮ್.

ನಿನ್ನೆಯ ಹೊರತು ನಾಳೆಯ ಮರೆತು, ಇಂದಷ್ಟೇ ನೋಡಿಕೊಂಡು ಹೋಗೋನು; ನಟ ರಾಮಕೃಷ್ಣ

ಸುಯೋಧನ ಇಲ್ಲದ ಮಹಾಭಾರತ ಇಲ್ಲ. ರಾವಣನಿಲ್ಲದ ರಾಮಾಯಣವಿಲ್ಲ. ಮನಸ್ಸಿನ ಆಳದಲ್ಲಿ ಹುದುಗಿರುವ ಆಸೆಗಳನ್ನು ಈ ಪಾತ್ರಗಳು ನಮಗೆ ಭೇಟಿ ಮಾಡಿಸುತ್ತವೆ. ಇಷ್ಟ ಇಲ್ಲ ಎಂದು ಎಷ್ಟೇ ಹೇಳಿದರೂ ಖಳನಾಯಕರ ಪಾತ್ರಕ್ಕೆ ಅದೇನೋ ಸೆಳೆತ ಇದೆ. ಇಲ್ಲದಿದ್ದರೆ ರಾವಣನ ಲಂಕೆ ಸುಭಿಕ್ಷವಾಗಿತ್ತು ಎಂದು ಓದಿದಾಗ ಯಾಕೆ ಖುಷಿಯಾಗಬೇಕು? ಸುಯೋಧನ ಮತ್ತು ಕರ್ಣನ ನಡುವಿನ ಗೆಳೆತವನ್ನು ನೋಡಿ ಯಾಕೆ ನಾವು ಭಾವುಕರಾಗಬೇಕು?

ಮೊಬೈಲ್‌ ಬಳಸುತ್ತಿರುವುದು ನಾವು, ಅದೇ ನಮ್ಮನ್ನು ಬಳಸುತ್ತಿಲ್ಲವಲ್ಲ; ಸಮಂತಾ ಲಾಜಿಕ್‌ಗೆ ಏನಂತೀರಾ?

ಕತೆಯನ್ನು ಮುಂದೆ ತೆಗೆದುಕೊಂಡು ಹೋಗುವವನು, ನಾಯಕನ ಮೌಲ್ಯಗಳನ್ನು ಪ್ರಶ್ನಿಸುವವನು, ಕತೆಗೊಂದು ಎನರ್ಜಿ ಕೊಡುವವನು ಖಳನಾಯಕ!

ಕೋಟಿಯ ಖಳನಾಯಕನ ಹೆಸರು ದಿನೂ ಸಾವ್ಕಾರ್.‌ ರಣತಂತ್ರದಲ್ಲಿ ಎತ್ತಿದ ಕೈ. ಬುದ್ಧಿವಂತ. ಸ್ವಲ್ಪ ಅನ್‌ ಸ್ಟೇಬಲ್.‌ ತಾನು ಹೇಳಿದ್ದನ್ನು ಎಲ್ಲರೂ ಕೇಳಬೇಕು ಎಂದುಕೊಂಡಿರುವ ವ್ಯಕ್ತಿ. ಮಾತು ಕೇಳದವರನ್ನು ಕೇಳಿಸುತ್ತೇನೆ ಎನ್ನುವುದನ್ನು ನಂಬಿದವನು. ಸಿಕ್ಕಾಪಟ್ಟೆ ಮಜಾ ಕೊಡುವ ಪಾತ್ರ ದಿನೂ ಸಾವ್ಕಾರ್ರದು. ರಮೇಶ್‌ ಇಂದಿರಾ ಈ ಪಾತ್ರವನ್ನು ನಿಭಾಯಿಸಿದ ರೀತಿ ನೋಡಿ ನಾನು ಆಲ್ಮೋಸ್ಟ್‌ ಗಾಬರಿಯಾಗಿದ್ದೇನೆ.' ಎಂದು ಬರೆದುಕೊಂಡಿದ್ದಾರೆ ಕೋಟಿ ನಿರ್ದೇಶಕ ಪರಮ್. 

ಕೆಜಿಎಫ್‌ಗೂ ಮೊದಲೇ ಕನ್ನಡ ಸಿನಿಮಾ ಪ್ರೀತಿ ಮೆರೆದಿದ್ದ ಯಶ್, ಪರಭಾಷಿಕರ ಅವಹೇಳನಕ್ಕೆ ಕೌಂಟರ್ ಹೇಗಿತ್ತು ನೋಡಿ!

ಕೋಟಿ ಸಿನಿಮಾದ ಟೀಸರ್‌ ಬಿಡುಗಡೆ ಆದಾಗಿಂದ ಖಳನಾಯಕ ದಿನೂ ಸಾವ್ಕಾರ್‌ ಪಾತ್ರದ ಬಗ್ಗೆ ಕುತೂಹಲ ಹೆಚ್ಚಾಗುತ್ತಲೇ ಹೋಗಿದೆ. ಸಾವ್ಕಾರ್‌ ಮತ್ತು ಕೋಟಿಯ ಟಕ್ಕರ್‌ ನೋಡುವುದಕ್ಕೆ ಇದು ಅತೀವ ಆಸಕ್ತಿಯನ್ನು ಹುಟ್ಟುಹಾಕಿರುವುದಂತೂ ಸತ್ಯ. ಅದಕ್ಕೆ ಕಾರಣ ಸಾವ್ಕಾರ್‌ ಪಾತ್ರದಲ್ಲಿ ರಮೇಶ್‌ ಇಂದಿರಾ ಕಾಣಿಸಿಕೊಂಡಿರುವ ರೀತಿ. ಜೋರಾಗಿ ಮಳೆ ಸುರಿಯುತ್ತಿರುವಾಗ, ಹುಡುಗರೆಲ್ಲಾ ಕೊಡೆ ಹಿಡಿದಿರುವಾಗ ಕಾರಿಂದ ಇಳಿಯುತ್ತಿರುವ ಸಾವ್ಕಾರ್‌ ಚಿತ್ರ ಮತ್ತು ಹಿನ್ನೆಲೆ ಸಂಗೀತದ ಬಗ್ಗೆ ಈಗಾಗಲೇ ಚಿತ್ರ ಜಗತ್ತಿನಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗಿರುವುದಂತೂ ನಿಜ. 

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ನಯನತಾರಾ, ಬಹುಮುಖ ಪ್ರತಿಭೆ ಎನಿಸಿಕೊಂಡ ಲೇಡಿ ಸೂಪರ್‌ ಸ್ಟಾರ್!

ಕೋಟಿ ಚಿತ್ರದ ಖಳನಾಯಕನ ಪಾತ್ರವನ್ನು ಮಾಡಿರುವ ರಮೇಶ್ ಇಂದಿರಾ ಫೋಟೋ ಭಾರೀ ವಿಭಿನ್ನವಾಗಿದೆ. ಬೆಳ್ಳಗೆ ನೆರೆತ ಕೂದಲು, ಗಡ್ಡ, ಮೀಸೆ, ಕುತ್ತಿಗೆಗೊಂದು ಚೈನು, ಬಾಯಲ್ಲೊಂದು ಸಿಗರೇಟು, ಕಣ್ಣಲ್ಲಿ ಯಾರದೋ ಜೀವನವನ್ನು ಬುಡಮೇಲು ಮಾಡುವ ಸಂಚು. ದಿನೂ ಸಾವ್ಕಾರ್‌ ಪಾತ್ರಕ್ಕೆ ನಟ ರಮೇಶ್‌ ಇಂದಿರಾ ಹೊಸದೊಂದು ಎನರ್ಜಿ ತಂದಂತೆ ಕಾಣಿಸುತ್ತಿದೆ ಎಂದರೆ ಅದರಲ್ಲಿ ಅತಿಶಯೋಕ್ತಿ ಇಲ್ಲ. ಇದೇ ಜೂನ್‌ ೧೪ರಂದು ಕೋಟಿ ಸಿನಿಮಾ ಬಿಡುಗಡೆ ಆಗಲಿದೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Actress Amulya: ಮುದ್ದು ಮಕ್ಕಳು, ಗಂಡನ ಜೊತೆ ಪೋಸ್ ಕೊಟ್ಟ ಗೋಲ್ಡನ್ ಗರ್ಲ್
Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?