ಮೋಜಿಗಾಗಿ ವೈದ್ಯಕೀಯ ವಿದ್ಯಾರ್ಥಿಯನ್ನು ಕೆರೆ ತಳ್ಳಿದ ಗೆಳೆಯ, ನಿಷ್ಕ್ರೀಯಗೊಂಡಿತು ಮೆದಳು!

Published : May 06, 2024, 06:45 PM IST
ಮೋಜಿಗಾಗಿ ವೈದ್ಯಕೀಯ ವಿದ್ಯಾರ್ಥಿಯನ್ನು ಕೆರೆ ತಳ್ಳಿದ ಗೆಳೆಯ, ನಿಷ್ಕ್ರೀಯಗೊಂಡಿತು ಮೆದಳು!

ಸಾರಾಂಶ

26 ವರ್ಷದ ವೈದ್ಯಕೀಯ ವಿದ್ಯಾರ್ಥಿಯ ಮೆದುಳು ನಿಷ್ಕ್ರೀಯಗೊಂಡಿದೆ. ಒಂದೊಂದೆ ಅಂಗಾಗಳು ವೈಫಲ್ಯಗೊಳ್ಳುತ್ತಿದೆ. ಇದು ಗೆಳೆಯರ ಮೋಜಿಗೆ ಪ್ರತಿಭಾನ್ವಿತ ವೈದ್ಯ ವಿದ್ಯಾರ್ಥಿ ತೆತ್ತ ಬೆಲೆ.   

ಲೌಸಿಯಾನ(ಮೇ.06) ಮೋಜಿಗಾಗಿ ಗೆಳೆಯರು ವೈದ್ಯಕೀಯ ವಿದ್ಯಾರ್ಥಿಯನ್ನು ಕೆರೆಗೆ ತಳ್ಳಿದ್ದಾರೆ. ನೀರಿನಲ್ಲಿ ಮುಳುಗುತ್ತಿರುವಂತೆ ನಾಟಕ ಮಾಡುತ್ತಿದ್ದಾನೆ ಎಂದು ಕೇಕೆ ಹಾಕಿದ್ದಾರೆ. ಈಜು ಬಾರದ ವೈದ್ಯ ವಿದ್ಯಾರ್ಥಿ ಅತ್ತ ಸಹಾಯಕ್ಕೆ ಕೂಗಲು ಸಾಧ್ಯವಾಗದೆ ಇತ್ತ ದಡ ಸೇರಲು ಸಾಧ್ಯವಾಗದೆ ಜೀವನ್ಮರಣ ಹೋರಾಟ ನಡೆಸುತ್ತಿದ್ದರೆ, ಗೆಳೆಯರು ಬದುಕಿಸುವ ಯಾವುದೇ ಪ್ರಯತ್ನ ಮಾಡಲಿಲ್ಲ. ಆದರೆ ಹತ್ತಿರದ ರೆಸ್ಟೋರೆಂಟ್ ಸಿಬ್ಬಂದಿಗಳು ಗಮನಿಸಿ ತಕ್ಷಣವೇ ಕೆರೆ ಹಾಕಿ ವಿದ್ಯಾರ್ಥಿಯನ್ನು ಹೊರತೆಗೆದು ಪ್ರಥಮ ಚಿಕತ್ಸೆ ನೀಡಿ ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ಸಾವಿನ ದವಡೆಯಿಂದ ಕೊನೆಯ ಕ್ಷಣದಲ್ಲಿ ಬದುಕಿಸಿದರೂ ಪ್ರಯೋಜನವಾಗಲಿಲ್ಲ. ಕಾರಣ ವಿದ್ಯಾರ್ಥಿಯ ಮೆದುಳು ನಿಷ್ಕ್ರೀಯಗೊಂಡಿದೆ. ಇದೀಗ ಒಂದೊಂದೆ ಅಂಗಾಗ ವೈಫಲ್ಯಗೊಳ್ಳುತ್ತಿದೆ. ಈ ಘಟನೆ ನಡೆದಿರುವುದು ಅಮೆರಿಕದ ಲೌಸಿಯಾನಾ ಕರೆ ಬಳಿ ನಡೆದಿದೆ.

26 ವರ್ಷದ ವೈದ್ಯ ವಿದ್ಯಾರ್ತಿ ಕ್ರಿಸ್ಟೋಫರ್ ಗಿಲ್ಬರ್ಟ್ ಅತ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ. ವೈದ್ಯನಾಗಬೇಕೆಂದು ವಿದ್ಯಾಭ್ಯಾಸದಲ್ಲಿ ಅತೀವ ಶ್ರದ್ಧೆ ಹೊಂದಿದೆ. ತರಗತಿಯಲ್ಲಿ ಉತ್ತಮ ಅಂಕದೊಂದಿಗೆ ರ್ಯಾಂಕ್ ಕೂಡ ಪಡೆದುಕೊಂಡಿದ್ದ. ಗೆಳೆಯರ ಜೊತೆ ಸಣ್ಣ ಪ್ರವಾಸಕ್ಕೆ ತೆರಳಿದ್ದ. ಈ ವೇಳೆ ಮನೆಯಲ್ಲಿ ತಾನು ಗೆಳೆಯರ ಜೊತೆ ಪ್ರವಾಸಕ್ಕೆ ಹೋಗುತ್ತಿರುವುದಾಗಿ ಹೇಳಿದ್ದ. ಉತ್ತಮ ಅಂಕ, ವೈದ್ಯಕೀಯ ಕಾಲೇಜಿನ ಅತ್ಯುತ್ತಮ ವಿದ್ಯಾರ್ಥಿ ಅನ್ನೋ ಹೆಗ್ಗಳಿಕೆಗೆ ಪಡೆದುಕೊಂಡಿರುವ ಗಿಲ್ಬರ್ಟ್‌ಗೆ ತಾಯಿ ಸಂಪೂರ್ಣ ಅನುಮತಿ ನೀಡಿದ್ದಳು.

ಬೆಂಗಳೂರಿನ ಐವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಾವು, ಕನಕಪುರ ಸಂಗಮದಲ್ಲಿ ಈಜಲು ತೆರಳಿದಾಗ ದುರ್ಘಟನೆ

ಗೆಳೆಯರ ಜೊತೆ ಪ್ರವಾಸದಲ್ಲಿ ಲೌಸಿಯಾನಾ ಕೆರೆ ಪಕ್ಕದಲ್ಲಿ ನಿಂತು ಪ್ರಕೃತಿ ಸೌಂದರ್ಯ ವೀಕ್ಷಿಸುತ್ತಿದ್ದ. ಇತ್ತ ಗೆಳೆಯರು ಕೂಡ ಸಾಥ್ ನೀಡಿದ್ದರು. ತಮಾಷೆ, ಹಾಡು ಎಲ್ಲವೂ ಸಹಜವಾಗಿತ್ತು. ಒಬ್ಬರಿಗೊಬ್ಬರು ಕಾಲೆಳೆದುಕೊಳ್ಳುತ್ತಾ ಎಂಜಾಯ್ ಮಾಡುತ್ತಿದ್ದರು. ಕ್ರಿಸ್ಟೋಫರ್ ಕೂಡ ಅಷ್ಟೇ ಎಂಜಾಯ್ ಮಾಡಿದ್ದ. ಇದರ ನಡುವೆ ಗೆಳೆಯರು ಮೆಲ್ಲನೆ ಕ್ರಿಸ್ಟೋಫರ್‌ನ ಕೆರೆ ತಳ್ಳಿದ್ದಾರೆ. ಮೋಜಿಗಾಗಿ ಕೆರೆ ತಳ್ಳಿ ತಮಾಷೆ ನೋಡಿದ್ದಾರೆ.

ಆದರೆ ಕ್ರಿಸ್ಟೋಫರ್‌ಗೆ ನಿಜಕ್ಕೂ ಈಜಲು ಬರುತ್ತಿರಲಿಲ್ಲ. ನೀರಿಗೆ ಬೀಳುತ್ತಿದ್ದಂತೆ ರಕ್ಷಿಸಲು ಕೂಗಿಕೊಂಡಿದ್ದ. ಆದರೆ ಈತನ ಗೆಳೆಯರು ಮಸ್ತಿ, ನಾಟಕ ಎಂದು ತಮಾಷೆ ಮಾಡಿದ್ದಾರೆ. ಇಷ್ಟೇ ಅಲ್ಲ ಕ್ರಿಸ್ಟೋಫರನ್‌ ಬದುಕಿಸುವ ಪ್ರಯತ್ನ ಮಾಡದೆ ರೆಸ್ಟೋರೆಂಟ್‌ಗೆ ಮರಳಿದ್ದಾರೆ. ಇತ್ತ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಕ್ರಿಸ್ಟೋಫರ್‌ನನ್ನು ರೆಸ್ಟೋರೆಂಟ್ ಸಿಬ್ಬಂದಿಗಳು ಗಮನಿಸಿ ಕೆರೆ ಹಾರಿ ರಕ್ಷಿಸಿದ್ದಾರೆ.

ತಕ್ಷಣವೇ ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ಕ್ರಿಸ್ಟೋಫರ್ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಕಾರಣ ಶ್ವಾಸಕೋಶ ಸೇರಿದಂತೆ ದೇಹದ ಬಹುತೇಕ ಅಂಗಾಗಳಲ್ಲಿ ನೀರು ತುಂಬಿಕೊಂಡಿತ್ತು. ಮೆದಳಿನಲ್ಲೂ ನೀರು  ಶೇಖರಣೆಗೊಂಡಿತ್ತು. ಸತತ 72 ಗಂಟೆಯಿಂದ ವೆಂಟಿಲೇಟರ್‌ನಲ್ಲಿರುವ ಕ್ರಿಸ್ಟೋಫರ್ ಮೆದುಳು ನಿಷ್ಕ್ರೀಯಗೊಂಡಿದೆ. ಒಂದೊಂದೆ ಅಂಗಾಗ ವೈಫಲ್ಯಗೊಳ್ಳುತ್ತಿದೆ. ಬದಕಿದರೂ ಸತ್ತಂತೆ ಇರುವ ಕ್ರಿಸ್ಟೋಫರ್ ನೋಡಿ ತಾಯಿ ಯೊಲಂಡ ಜಾರ್ಜ್ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ.

Breaking: ದಾಂಡೇಲಿ ಬಳಿಯ ಕಾಳಿ ನದಿಯಲ್ಲಿ ಮುಳುಗಿ ಹುಬ್ಬಳ್ಳಿ ಒಂದೇ ಕುಟುಂಬದ 6 ಮಂದಿ ಸಾವು!
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವೃತ್ತಿಪರತೆ ಅಂತ್ಯಸಂಸ್ಕಾರ, ಪ್ರಶ್ನೆ ಕೇಳಿದ ಪತ್ರಕರ್ತೆಗೆ ಕಣ್ಣು ಹೊಡೆದ ಪಾಕಿಸ್ತಾನ ಸೇನಾ ಲೆ.ಜನರಲ್
ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್