ಆರೋಗ್ಯದ ಕಾರಣದಿಂದ ನಟಿ ಸಮಂತಾ ರುತ್ ಪ್ರಭು ಕಳೆದೊಂದು ವರ್ಷದಿಂದ ಸಿನಿಮಾದಿಂದ ಬ್ರೇಕ್ ಪಡೆದುಕೊಂಡಿದ್ದರು. ಇದು ಅಭಿಮಾನಿಗಳಿಗೆ ಆಘಾತ ನೀಡಿತ್ತು. ಇದೀಗ ಚೇತರಿಸಿಕೊಂಡಿರುವ ಸಮಂತಾ ಮತ್ತೆ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ.
ಇದರ ನಡುವೆ ವೆಬ್ ಸೀರಿಸ್ಗಳಲ್ಲೂ ಕಾಣಿಸಿಕೊಂಡಿರು ಸಮಂತಾ ಎಲ್ಲರಿಗೂ ಸರ್ಪ್ರೈಸ್ ನೀಡಿದ್ದಾರೆ. ಸಮಾಂತ ಇದೀಗ ಬ್ರೌನ್ ಬಿಕಿನಿಯಲ್ಲಿ ಕಾಣಿಸಿಕೊಂಡು ಹಲರ ಹುಬ್ಬೇರಿಸಿದ್ದಾರೆ.
ಬ್ರೌನ್ ಕಲರ್ ಬಿಕಿನಿಯಲ್ಲಿ ಸಮಂತಾ ಪೋಸ್ ನೀಡಿದ್ದಾರೆ. ಸದ್ಯ ಸಮಂತಾ ಮಲೇಷಿಯಾದ ಲ್ಯಾಂಗ್ಕವಿಯಲ್ಲಿ ತಮ್ಮ ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ. ಸಮಂತಾ ಫೋಟೋಗೆ ಭಾರಿ ಕಮೆಂಟ್ಗಳು ವ್ಯಕ್ತವಾಗಿದೆ.
ನೈಸರ್ಗಿಕ ನೀರಿನ ಝರಿಯಲ್ಲಿ ಮಿಂದೆದ್ದ ಸಮಂತಾ ತಮ್ಮ ಸೆಕ್ಸಿ ಲುಕ್ನಿಂದಲೇ ಹಲವರ ನಿದ್ದೆಗೆಡಿಸಿದ್ದಾರೆ. ಪ್ರಕೃತಿಯ ಸುಂದರ ತಾಣದಲ್ಲಿ ಸಮಂತಾ ಹಾಟ್ ಲುಕ್ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.
ಹಾಟ್ ಫೋಟೋ ಜೊತೆಗೆ ಅತ್ಯುನ್ನತ ಪ್ರೀತಿ ಎಂದು ಬರೆದುಕೊಂಡಿದ್ದಾರೆ. ಬಿಕಿನಿ ಫೋಟೋ ಡೊತೆಗೆ ನೀರಿನಲ್ಲಿರುವ, ಧ್ಯಾನದಲ್ಲಿ ಮಗ್ನರಾಗಿರುವ ಸೇರಿದಂತೆ ಹಲವು ಫೋಟೋಗಳನ್ನು ಸಮಂತಾ ಹಂಚಿಕೊಂಡಿದ್ದಾರೆ.
ಮೊನ್ನೆಯಷ್ಟೇ ಸಮಂತಾ ಫಿಟ್ನೆಸ್ ಕುರಿತ ಫೋಟೋ ಹಂಚಿಕೊಂಡಿದ್ದಾರೆ. ಈ ವೇಳೆ ವಯಸ್ಸೂ 36 ದಾಟಿದರೂ ತಮ್ಮ ಮೆಟಾಬಲಿಕ್ ವಯಸ್ಸು 23 ಎಂದು ಹೇಳಿಕೊಂಡಿದ್ದರು.
ಸಿನಿಮಾದಿಂದ ದೂರ ಉಳಿದಿದ್ದರೂ ಸಾಮಾಜಿಕ ಮಾಧ್ಯಮದಲ್ಲಿ ಸಮಂತಾ ರುತ್ ಪ್ರಭು ಸಕ್ರಿಯರಾಗಿದ್ದರು. ಅಭಿಮಾನಿಗಳಿಗೆ ತಮ್ಮ ಅಪ್ಡೇಟ್ ನೀಡುತ್ತಲೇ ಬಂದಿದ್ದಾರೆ. ಸೀರೆ ಮೂಲಕ ಹಾಟ್ ಲುಕ್ ನೀಡಿ ಮೋಡಿ ಮಾಡಿದ್ದರು.
ಸಮಂತಾ ಕೊನೆಯದಾಗಿ ಖುಷಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರ. 2018ರ ಬಳಿಕ ಮತ್ತೆ ವಿಜಯ್ ದೇವರಕೊಂಡ ಜೊತೆ ಕಾಣಿಸಿಕೊಂಡ ಸಮಂತಾ ಭಾರಿ ಮೋಡಿ ಮಾಡಿದ್ದರು. ಈ ಚಿತ್ರ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಬಿಡುಗಡೆಯಾಗಿತ್ತು.