ಎಲ್ಲ ಗಂಡಸರ ಕಥೆ ಏನು ಅಂತ ರವೀನಾಗೆ ಹೇಳಿದ್ರು ಶ್ರೀದೇವಿ; ಜಗತ್ತೇ ಗಪ್‌ಚುಪ್‌ ಆಗಿತ್ತು!

By Shriram Bhat  |  First Published Nov 15, 2024, 8:28 PM IST

ರವೀನಾ ಮಾತಿಗೆ ಭಾರೀ ಕೋಪಗೊಂಡ ಶ್ರೀದೇವಿ ಸುಮ್ಮನಿರ್ತಾರಾ? ರವೀನಾ ಮಾತಿಗೆ ಕೌಂಟರ್‌ ಕೊಟ್ಟ ಶ್ರೀದೇವಿ 'ನನಗೆ ಗೊತ್ತಿಲ್ವಾ? ಪ್ರಪಂಚದಲ್ಲಿರುವ ಎಲ್ಲಾ ಪುರುಷ ಪುಂಗವರು ಪತ್ನಿ ಜೊತೆಯಲ್ಲಿ ಇಲ್ಲದಿರುವಾಗ ಇನ್ನೊಂದು ಹೆಣ್ಣು ಸಿಕ್ಕರೆ ಅಂಟಿಕೊಂಡು..


ಭಾರತದ ಲೇಡಿ ಸೂಪರ್ ಸ್ಟಾರ್‌ ಖ್ಯಾತಿಯ ನಟಿ ಶ್ರೀದೇವಿ (Sridevi) ಜಗತ್ತಿನ ಬಹುತೇಕ ಕಡೆಗಳಲ್ಲಿ ಫೇಮಸ್. ಅಂತಹ ಶ್ರೇಷ್ಠ ನಟಿಗೆ ಜಗತ್ತಿನ ಗಂಡಸರ ಗುಣಗಳೇನು ಅಂತ ಗೊತ್ತಿಲ್ಲದೇ ಇರಲು ಹೇಗೆ ಸಾಧ್ಯ? ಅನ್ನ ಬೆಂದಿದಿಯೋ ಇಲ್ಲವೊ ಎಂಬುದನ್ನು ಒಂದೇ ಅಗುಳಿನಲ್ಲಿ ನೋಡಿ ತಿಳುಯುವಂತೆ, ಒಬ್ಬನೇ ಒಬ್ಬ ಗಂಡಸು ನೋಡಿದರೆ ಗಂಡಸು ಕುಲದ ಬಗ್ಗೆ ಹೇಳಿಬಿಡುಬಹುದಲ್ಲ! ಅದನ್ನೇ ನಟಿ ಶ್ರೀದೇವಿ ಮಾಡಿದ್ದಾರೆ. ಆದರೆ, ಶ್ರೀದೇವಿ ಹೇಳಿದ್ದು ಬೇರೆ ಯಾರಿಗೂ ಅಲ್ಲ, ತಮ್ಮ ಸಹನಟಿ ರವೀನಾ ಟಂಡನ್‌ಗೆ. 

ರವೀನಾ ಟಂಡನ್‌ (Raveena Tandon) ಕೂಡ ಬಾಲಿವುಡ್ ಸ್ಟಾರ್ ನಟಿಯೇ ಹೌದು. ಆದರೆ ಶ್ರೀದೇವಿಯಷ್ಟು ಸೂಪರ್ ಸ್ಟಾರ್ ಆಗಿ ಮೆರೆದಿಲ್ಲ ಎನ್ನಬಹುದಷ್ಟೇ! ಇಲ್ಲಿ ವಿಷಯ ಏನಪ್ಪಾ ಅಂದ್ರೆ, ನಟಿ ಶ್ರೀದೇವಿ ಗಂಡನ ಮೇಲೆ ರವೀನಾ ಕಣ್ಣು ಹಾಕಿದ್ದಾರೆ. ಅಥವಾ, ಶ್ರೀದೇವಿ ಗಂಡ ಹಾಗೂ ರವೀನಾ ಇಬ್ಬರೂ ಕ್ಲೋಸ್ ಆಗಿ ಓಡಾಡುತ್ತಿದ್ದಾರೆ. ಅದನ್ನು ನೋಡಿಯೂ ಶ್ರೀದೇವಿ ಸಹಿಸುವುದು ಹೇಗೆ ಹೇಳಿ? ಅದಕ್ಕೇ ಶ್ರೀದೇವಿ ಅವರು ರವೀನಾ ಕರೆದು ಸರಿಯಾಗಿ ಮುಖ ತೊಳೆದುಕೊಳ್ಳುವಂತೆ ಉಗಿದಿದ್ದಾರೆ. ಅದೀಗ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗುತ್ತಿದೆ. 

Tap to resize

Latest Videos

undefined

ಒಂದೇ ತಕ್ಕಡಿಯಲ್ಲಿ ತಾಯಿ & ಪತ್ನಿ ತೂಗಿದ ಶಿವರಾಜ್‌ಕುಮಾರ್; ಇಲ್ನೋಡಿ ನೆಟ್ಟಿಗರು ಏನಂತಿದಾರೆ?

ಶ್ರೀದೇವಿ ಅವರ ಅಲ್ಲಿ ಹೇಳಿರುವ ಮಾತನ್ನು ಹಲವರು 'ಹೌದು, ಅದು ನಿಜ... ಜಗತ್ತಿನ ಪುರುಷರೆಲ್ಲರೂ ಹೆಚ್ಚುಕಡಿಮೆ ಹಾಗೆಯೇ..' ಎಂದಿದ್ದಾರೆ. ಹಾಗಿದ್ದರೆ ನಟಿ ಶ್ರೀದೇವಿ ನಟಿ ರವೀನಾಗೆ ಹೇಳಿದ್ದೇನು ಗೊತ್ತಾ? 'ಕಾಜಲ್ ಎಂದು ಕೋಪದಿಂದ ಕರೆದಿರುವ ಶ್ರೀದೇವಿಗೆ ರವೀನಾ ಟಂಡನ್ 'ಕಿರುಚಾಡ್ಬೇಡ..' ಎನ್ನುತ್ತಾಳೆ. ಜೊತೆಗೆ, ರವೀನಾ 'ನೀನೂ ಒಬ್ಬಳು ಹೆಣ್ಣಾಗಿ ಇನ್ನೊಬ್ಬಳು ಹೆಣ್ಣಿನ ಬಗ್ಗೆ ಕೆಟ್ಟದಾಗಿಮಾತಾಡ್ತೀಯ? ಅದಿರ್ಲಿ, ನಿನ್ನ ಗಂಡನ ಬಗ್ಗೆಯೂ ನಿನಗೆ ಸಂಶಯವೇ? ಹೀಗೆ ನೀನು ನಿನ್ನ ಗಂಡನ ಬಗ್ಗೆ ಶಂಕೆ ಹೊಂದಿದ್ದರೆ ಯಾವತ್ತೋ ಒಂದು ದಿನ ಗಂಡನನ್ನು ಬಿಟ್ಟು ಬೀದಿಗೆ ಬೀಳ್ತೀಯಾ' ಅಂತಾಳೆ. 

ರವೀನಾ ಮಾತಿಗೆ ಭಾರೀ ಕೋಪಗೊಂಡ ಶ್ರೀದೇವಿ ಸುಮ್ಮನಿರ್ತಾರಾ? ರವೀನಾ ಮಾತಿಗೆ ಕೌಂಟರ್‌ ಕೊಟ್ಟ ಶ್ರೀದೇವಿ 'ನನಗೆ ಗೊತ್ತಿಲ್ವಾ? ಪ್ರಪಂಚದಲ್ಲಿರುವ ಎಲ್ಲಾ ಪುರುಷ ಪುಂಗವರು ಪತ್ನಿ ಜೊತೆಯಲ್ಲಿ ಇಲ್ಲದಿರುವಾಗ ಇನ್ನೊಂದು ಹೆಣ್ಣು ಸಿಕ್ಕರೆ ಅಂಟಿಕೊಂಡು ಬಿಡ್ತಾರೆ. ಇಂತಹ ಉಪದೇಶಗಳೆಲ್ಲವೂ ನಿನ್ನಂತಹ ಬಡಹೆಣ್ಣುಮಕ್ಕಳಿಗೆ ಹೇಳ್ಬೇಕು ಅಷ್ಟೇ, ನನ್ನಂಥವಳಿಗಲ್ಲ' ಎನ್ನುತ್ತಾರೆ ಶ್ರೀದೇವಿ. ಅಲ್ಲಿಗೆ ರವೀನಾ ಟಂಡನ್‌ ಬಾಯಿ ಮುಚ್ಚಿಹೋಗುತ್ತದೆ!

ಶಂಕರ್‌ ನಾಗ್ ಸಾವಿನ ಬಗ್ಗೆ ಇಂದಿಗೂ ಸಂಶಯ ಯಾಕೆ? ಅಲ್ಲಿ ಉತ್ತರ ಸಿಗದ ಪ್ರಶ್ನೆಗಳು ಇವೆಯಲ್ಲ!

ಇದು 'ಲಾಡ್ಲಾ' ಸಿನಿಮಾದ ಒಂದು ದೃಶ್ಯ. 1994ರಲ್ಲಿ ತೆರೆಗೆ ಬಂದು ಸೂಪರ್ ಹಿಟ್ ಆದ ಈ ಚಿತ್ರವು ಅಂದು ಬಹಳಷ್ಟು ಹೆಸರು ಮಾಡಿತ್ತು. ಶೀತಲ್ ಪಾತ್ರ ಮಾಡಿದ್ದ ನಟಿ ಶ್ರೀದೇವಿ ಜೋಡಿಯಾಗಿ ರಾಜು ಪಾತ್ರದಲ್ಲಿ ನಟ ಅನಿಲ್ ಕಪೂರ್ ನಟಿಸಿದ್ದರು. ಆ ಚಿತ್ರದಲ್ಲಿ, ಶೀತಲ್ ಫ್ಯಾಕ್ಟರಿ ಉದ್ಯೋಗಿಯಾಗಿ ಕಾಜಲ್ ಪಾತ್ರದಲ್ಲಿ ನಟಿ ರವೀನಾ ಟಂಡನ್‌ ನಟಿಸಿದ್ದರು. ಈ ಲಾಡ್ಲಾ ಚಿತ್ರದ ಸೀನ್‌ ಈಗ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಅಂದು ಸಿನಿಮಾದಲ್ಲಿ ನಟಿ ಶ್ರೀದೇವಿ ಹೇಳಿರುವ ಡೈಲಾಗ್‌ನಲ್ಲಿ ಸತ್ಯವಿದೆ ಎಂದು ಬಹಳಷ್ಟು ಜನರು ಕಾಮೆಂಟ್ ಮಾಡುತ್ತಿದ್ದಾರೆ. 

click me!