ಪೂಲ್‌ನಲ್ಲಿ ಹಾಟ್ ಆದ ಕಣ್ಸನ್ನೆ ಸುಂದರಿ; ಬೋಲ್ಡ್ ಫೋಟೋ ವೈರಲ್

First Published Oct 2, 2022, 5:49 PM IST

ಬ್ಯಾಂಕಾಕ್ ಪ್ರವಾಸ ಎಂಜಾಯ್ ಮಾಡುತ್ತಿರುವ ಪ್ರಿಯಾ ಪ್ರಕಾಶ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಪೂಲ್ ನಲ್ಲಿ ಎಂಜಾಯ್ ಮಾಡುತ್ತಿರುವ ಕಣ್ಸನ್ನೆ ಸುಂದರಿ ಸಿಕ್ಕಾಪಟ್ಟೆ ಬೋಲ್ಡ್ ಆಗಿದ್ದಾರೆ.

ಪ್ರಿಯಾ ಪ್ರಕಾಶ್ ವಾರಿಯನ್ ಎನ್ನುವುದಕ್ಕಿಂತ ಕಣ್ಸನ್ನೆ ಸುಂದರಿ ಎಂದರೆ ಥಟ್ ಅಂತ ಗೊತ್ತಾಗಲಿದೆ. `ಒರು ಆಡಾರ್ ಲವ್’ ಸಿನಿಮಾ ಮೂಲಕ ರಾಷ್ಟ್ರಮಟ್ಟದ ಗಮನ ಸೆಳೆದಿದ್ದ ಪ್ರಿಯಾ ಪ್ರಕಾಶ್ ವಾರಿಯರ್ ಮತ್ತೆ ಸದ್ದು ಮಾಡುತ್ತಿದ್ದಾರೆ. ಈ ಸಿನಿಮಾ ಬಳಿಕ ಪ್ರಿಯಾ ನಟಿಸಿದ ಚಿತ್ರಗಳು ಹಿಟ್ ಆಗದಿದ್ದರೂ ಪ್ರಿಯಾ ಸದಾ ಸುದ್ದಿಯಲ್ಲಿರುತ್ತಾರೆ. 

ಪ್ರಿಯಾ ಸದ್ಯ ಮಲಯಾಳಂ ಜೊತೆಗೆ ಬೇರೆ ಬೇರೆ ಭಾಷೆಯಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಜೊತಗೆ ಪ್ರಿಯಾ ಪ್ರವಾಸವನ್ನು ಎಂಜಾಯ್ ಮಾಡುತ್ತಿದ್ದಾರೆ. ಪ್ರಿಯಾ ಪ್ರಕಾಶ್ ವಾರಿಯರ್ ಸದ್ಯ ಬ್ಯಾಂಕಾಕ್‌ಗೆ ತೆರಳಿದ್ದಾರೆ. 

ಬ್ಯಾಂಕಾಕ್ ಪ್ರವಾಸ ಎಂಜಾಯ್ ಮಾಡುತ್ತಿರುವ ಪ್ರಿಯಾ ಮಸ್ತ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಪೂಲ್ ನಲ್ಲಿ ಎಂಜಾಯ್ ಮಾಡುತ್ತಿರುವ ಕಣ್ಸನ್ನೆ ಸುಂದರಿ ಸಿಕ್ಕಾಪಟ್ಟೆ ಬೋಲ್ಡ್ ಆಗಿದ್ದಾರೆ. ಸ್ವಿಮ್ ಸೂಟ್ ನಲ್ಲಿ ಕಾಮ್ಯರಾಗೆ ಪೋಸ್ ನೀಡಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ. 

ಪ್ರಿಯಾ ಬೋಲ್ಡ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಭಿಮಾನಿಗಳು ಪ್ರಿಯಾ ಫೋಟೋಗೆ ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.ಹಾರ್ಟ್ ಇಮೋಜಿ ಇರಿಸಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. 

ತಮ್ಮ ಕಣ್ಸನ್ನೆ ವೀಡಿಯೋ ಮೂಲಕ ರಾತ್ರೋ ರಾತ್ರಿ ಫೇಮಸ್ ಆದ ನಟಿ ಪ್ರಿಯಾ ನಂತರ ನಟಿಸಿದ ಸಿನಿಮಾಗಳು ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಸದ್ಯ ಪ್ರಿಯಾ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಒಂದು ಬಿಗ್ ಬ್ರೇಕ್‌ಗಾಗಿ ಕಾಯ್ತಿದ್ದಾರೆ.
 

ಇನ್ನೂ ಪ್ರಿಯಾ ಕನ್ನಡ ಸಿನಿಮಾದಲ್ಲೂ ಮಿಂಚಿದ್ದಾರೆ. ಶ್ರೇಯಸ್ ಮಂಜು ಅವರಿಗೆ ಜೋಡಿಯಾಗಿ ಕನ್ನಡದ ವಿಷ್ಣು ಪ್ರಿಯಾ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾಬಳಿಕ ಮತ್ತೆ ಕನ್ನಡಕ್ಕೆ ಬಂದಿಲ್ಲ. ಸದ್ಯ ಮಲಯಾಳಂ, ತೆಲುಗು, ಹಿಂದಿ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ.

click me!