ಕ್ಷುಲ್ಲಕ ಕಾರಣ ಬಡಪಾಯಿ ಟೀ ಶಾಪ್ ಯುವಕನ ಮೇಲೆ ಪುಂಡರು ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಕಾಟನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪುಂಡರಿಂದ ಹಲ್ಲೆಗೊಳಗಾದ ಯುವಕ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾನೆ.
ಬೆಂಗಳೂರು (ಏ.28): ಕ್ಷುಲ್ಲಕ ಕಾರಣ ಬಡಪಾಯಿ ಟೀ ಶಾಪ್ ಯುವಕನ ಮೇಲೆ ಪುಂಡರು ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಕಾಟನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪುಂಡರಿಂದ ಹಲ್ಲೆಗೊಳಗಾದ ಯುವಕ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾನೆ.
ಕುಡಿದ ಮತ್ತಿನಲ್ಲಿ ಟೀ ಶಾಪ್‌ಗೆ ಬಂದಿದ್ದ ಆರೋಪಿ. ಟೀ ಕುಡಿದು ಸಿಗರೇಟ್ ಸೇದಿದ ಬಳಿಕ ದುಡ್ಡು ಕಮ್ಮಿ ಕೊಟ್ಟಿದ್ದಾನೆ. ಇದರಿಂದ ಟೀ ಶಾಪ್ ಯುವಕ. ಕೊಟ್ಟಿರುವ ದುಡ್ಡು ಕಮ್ಮಿ ಇದೆ ಎಂದಿದ್ದಾನೆ. ಇದೇ ಕಾರಣಕ್ಕೆ ಮಾತಿನ ಪುಂಡರು ಮಾತಿನ ಚಕಮಕಿ ನಡೆಸಿದ್ದಾರೆ. ಈ ವೇಳೆ ಯುವಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಳಿಕ ಕೈಯಲ್ಲಿದ್ದ ಬಿಯರ್ ಬಾಟಲಿಯಿಂದ ಯುವಕನ ಮೇಲೆ ಹಲ್ಲೆ ನಡೆಸಿರುವ ಪುಂಡರು. ಹಲ್ಲೆಗೊಳಗಾದ ಯುವಕ ಆಸ್ಪತ್ರೆಗೆ ದಾಖಲಾದರೂ ಆಸ್ಪತ್ರೆಗೆ ಹೋಗಿ ಧಮ್ಕಿ ಹಾಕಿರುವ ಪುಂಡರು. ಹಲ್ಲೆ ವೇಳೆ ತಡೆಯಲು ಬಂದ ಸ್ಥಳೀಯ ಯುವಕನ ಮೇಲೂ ಹಲ್ಲೆ ನಡೆಸಿದ್ದಾರೆ. ಸದ್ಯ ಹಲ್ಲೆ ಘಟನೆ ಸಂಬಂಧ ದೂರು ದಾಖಲಿಕೊಂಡ ಪೊಲೀಸರು. ವಿಚಾರಣೆಗೆ ಮುಂದಾಗಿದ್ದಾರೆ.
ಬೆಂಗಳೂರಲ್ಲಿ ಪಾನಿಪೂರಿ ಕೊಡಿಸ್ತೇನೆಂದು 7 ವರ್ಷದ ಮಗು ಕರೆದೊಯ್ದು ಅತ್ಯಾಚಾರ
ಈ ಹಿಂದೆ ನಗರದಲ್ಲಿ ರೌಡಿಸಂ, ಹಲ್ಲೆ ದರೋಡೆಕೋರರನ್ನು ಮಟ್ಟಹಾಕುತ್ತೇವೆ ಎಂದು ಅಬ್ಬರಿಸಿ ಬೊಬ್ಬಿರಿದಿದ್ದ ಬೆಂಗಳೂರು ಪೊಲೀಸರು. ಕೇವಲ ಮಾತಿಗೆ ಮಾತ್ರ ಸೀಮಿತವಾಯಿತಾ? ದಿನನಿತ್ಯ ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಪುಂಡರು ಹಾವಳಿ ಮಿತಿಮೀರಿದ ಸಾರ್ವಜನಿಕರು, ವ್ಯಾಪಾರಿಗಳ ಮೇಲೆ ಹಲ್ಲೆಯಂತಹ ಪ್ರಕರಣಗಳು ದಿನನಿತ್ಯ ನಡೆಯುತ್ತಿದ್ದರೂ ಪುಂಡರ ಹಾವಳಿಯನ್ನು ನಿಯಂತ್ರಣ ಮಾಡುವಲ್ಲಿ ಪೊಲೀಸರು ವಿಫಲರಾಗಿದ್ದಾರಾ ಎಂಬ ಅನುಮಾನ ಮೂಡಿಸುವಂತಾಗಿದೆ.