ಬೆಳಗಾವಿ ಪ್ರಧಾನಿ ಆಗಮನ; ಭಕ್ಷ್ಯ ಭೋಜನ ಇದ್ದರೂ ಎಳನೀರು ಮಾತ್ರ ಸೇವಿಸಿದ ಮೋದಿ!

By Ravi JanekalFirst Published Apr 27, 2024, 11:40 PM IST
Highlights

ಕರ್ನಾಟಕದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿಗೆ ಆಗಮಿಸಿದರು. ಪ್ರಧಾನಿ ಮೋದಿ ಆಗಮಿಸುತ್ತಿದ್ದಂತೆ ಜೊಲ್ಲೆ ದಂಪತಿ ಸ್ವಾಗತಿಸಿದರು. ಪ್ರಧಾನಿ ಮೋದಿ ಆಗಮಿಸುತ್ತಿರುವ ಹಿನ್ನೆಲೆ ನಗರದ ಕಾಕತಿ ಬಳಿ ಇರುವ ಐಟಿಸಿ ವೆಲ್ ಕಮ್ ಹೋಟೆಲ್ ನಲ್ಲಿ ವ್ಯವಸ್ಥೆ ಮಾಡಲಾಗಿತ್ತು.

ಬೆಳಗಾವಿ (ಏ.27): ಕರ್ನಾಟಕದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿಗೆ ಆಗಮಿಸಿದರು.

ಪ್ರಧಾನಿ ಮೋದಿ ಆಗಮಿಸುತ್ತಿದ್ದಂತೆ ಜೊಲ್ಲೆ ದಂಪತಿ ಸ್ವಾಗತಿಸಿದರು. ಪ್ರಧಾನಿ ಮೋದಿ ಆಗಮಿಸುತ್ತಿರುವ ಹಿನ್ನೆಲೆ ನಗರದ ಕಾಕತಿ ಬಳಿ ಇರುವ ಐಟಿಸಿ ವೆಲ್ ಕಮ್ ಹೋಟೆಲ್ ನಲ್ಲಿ ವ್ಯವಸ್ಥೆ ಮಾಡಲಾಗಿತ್ತು.

ಹೋಟೆಲ್‌ನಲ್ಲೇ ಗುಜರಾತಿ ಹಾಗೂ ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಶೈಲಿಯ 36 ಬಗೆಯ ಖಾದ್ಯ ಸಿದ್ದಪಡಿಸಲಾಗಿತ್ತು. ಆದರೆ ಭಕ್ಷ್ಯ ಭೋಜನ ಇದ್ದರೂ ರಾತ್ರಿ ಭೋಜನ ತಿರಸ್ಕರಿಸಿ ಪ್ರಧಾನಿ ಮೋದಿ ಕೇವಲ ಎಳನೀರು ಮಾತ್ರ ಸೇವಿಸಿದರು.

ಪ್ರಧಾನಿಗಳು ದೊಣ್ಣೆ ನಾಯಕನ ರೀತಿ ಆಡ್ತಿದ್ದಾರೆ, ಮೋದಿ ವಿರುದ್ಧ ಮತ್ತೆ ಪ್ರಕಾಶ್ ರಾಜ್ ವಾಗ್ದಾಳಿ!

ಮೋದಿ ಸ್ವಾಗತಿಸಿ ಸಂಗೀತಾ ಮಸೂತಿ ಹೇಳಿದ್ದೇನು?

ಪ್ರಧಾನಿ ಮೋದಿಯವರು ಬಂದಿಳಿದ ತಕ್ಷಣ ಎಷ್ಟೊತ್ತಿನಿಂದ ನಿಂತಿದ್ದಿರಿ ಎಂದು ಕೇಳಿದ್ರು. ನಾವು 6 ಗಂಟೆಯಿಂದ ನಿಂತಿದ್ದಿವಿ ಅಂತಾ ಹೇಳಿದ್ವಿ ಆಗ ಎಲೆಕ್ಷನ್ ಟೈಂನಲ್ಲಿ ಜಾಸ್ತಿ ಹೊತ್ತು ನಿಂತಿದ್ರಲ್ಲ ಅಂದ್ರು. ಅದಕ್ಕೆ ನಾವು ನಿಮ್ಮನ್ನು ನೋಡುವುದೇ ಒಂದು ಭಾಗ್ಯ ಅಂದ್ವಿ. ಅವರನ್ನು ನೋಡಿ ಶ್ರೀರಾಮನನ್ನು ನೋಡಿದಷ್ಟು ಆನಂದವಾಯ್ತು.

ಪ್ರಧಾನಿ ಮೋದಿ ಆಗಮಿಸಿದಾಗ ನಾವು ಅಬ್‌ ಕೀ ಬಾರ್.. ಎಂದಾಗ ಚಾರ್ ಸೋ ಫಾರ್ ಎಂದು ಮೋದಿಯವರು ಹೇಳಿದ್ರು. ಅವರನ್ನು ವೆಲ್ ಕಮ್ ಮಾಡುವ ಭಾಗ್ಯ ಸಿಕ್ಕಿದ್ದು ನನ್ನ ಪುಣ್ಯ ಎಂದು ಯಮಕನಮರಡಿ ಕ್ಷೇತ್ರದ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿರುವ ಸಂಗೀತಾ ಸಂತಸ ವ್ಯಕ್ತಪಡಿಸಿರು.

Reddy VS Tangadagi: ಮೋದಿ ಅಂದ್ರೆ ಶಿವರಾಜ್‌ ತಂಗಡಗಿ ಕಿವಿಯಲ್ಲಿ ಮುಳ್ಳು ಚುಚ್ಚಿದಂತಾಗುತ್ತೆ:ಜನಾರ್ದನ ರೆಡ್ಡಿ

click me!