
ಮುಂಬೈ(ಏ.27) ಬಾಲಿವುಡ್ ನಟ ಸೋನು ಸೂದ್ ನಟನೆ ಮೂಲಕ ಮಾತ್ರವಲ್ಲ ತಮ್ಮ ಸಾಮಾಜಿಕ ಸೇವೆ ಮೂಲಕ ಅಪಾರ ಅಭಿಮಾನಿಗಳನ್ನು ಪಡೆದಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಸೋನು ಸೂದ್ ಸಂಕಷ್ಟದಲ್ಲಿದ್ದವರಿಗೆ ಅಕ್ಷರಶಃ ದೇವರಾಗಿದ್ದರು. ಕಾರ್ಮಿಕರು, ನಿರ್ಗತಿಕರು, ಬಡವರಿಗೆ ಸೋನ್ ಸೂದ್ ಮಾಡಿದ ಸಹಾಯ ಯಾರೂ ಮರೆತಿಲ್ಲ. ಬಾಲಿವುಡ್ ಸೇರಿ ದಕ್ಷಿಣ ಭಾರತದ ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವ ಸೂನು ಸೂದ್ ಈಗಲೂ ಹಲವರಿಗೆ ಸಹಾಯ ಮಾಡುತ್ತಾ ತಮ್ಮ ಸಮಾಜಿಕ ಸೇವೆಯನ್ನು ಮುಂದುವರಿಸಿದ್ದಾರೆ. ಆದರೆ ಏಕಾಏಕಿ ಸೋನ್ ಸೂದ್ ವ್ಯಾಟ್ಸ್ಆ್ಯಪ್ ಖಾತೆ ಬ್ಲಾಕ್ ಆಗಿದೆ. 36 ಗಂಟೆ ಕಳೆದರೂ ಸೂದ್ ವ್ಯಾಟ್ಸ್ಆ್ಯಪ್ ಖಾತೆ ಸಕ್ರಿಯವಾಗಿಲ್ಲ. ಇದೀಗ ಆಕ್ರೋಶ ಹೊರಹಾಕಿರುವ ಸೂದ್, ಎಚ್ಚೆತ್ತುಕೊಳ್ಳುವಂತೆ ಕಂಪನಿಗೆ ಎಚ್ಚರಿಸಿದ್ದಾರೆ.
ಬ್ಲಾಕ್ ಆಗಿರುವ ವ್ಯಾಟ್ಸ್ಆ್ಯಪ್ ಖಾತೆಯ ಸ್ಕ್ರೀನ್ ಶಾಟ್‌ನ್ನು ಎಕ್ಸ್ ಮೂಲಕ ಹಂಚಿಕೊಂಡಿರುವ ಸೋನ್ ಸೂದ್, ನನ್ನ ವ್ಯಾಟ್ಸ್ಆ್ಯಪ್ ಖಾತೆ ಕಾರ್ಯನಿರ್ವಹಿಸುತ್ತಿಲ್ಲ. ಈಗಾಗಲೇ 36 ಗಂಟೆ ಕಳೆದಿದೆ. ಇದೀಗ ಎಚ್ಚೆತ್ತುಕೊಳ್ಳುವ ಸಮಯ. ಸಂಕಷ್ಟದಲ್ಲಿರುವ ನೂರಕ್ಕೂ ಹೆಚ್ಚು ಮಂದಿ ನೆರವಾಗಿ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ. ಸಂಪರ್ಕಿಸಲು ಸಾಧ್ಯವಾಗದ ಜನರು ನೇರವಾಗಿ ಇಲ್ಲಿ ಸಂದೇಶ ಕಳುಹಿಸಿ ಎಂದು ಸೋನು ಸೂದ್ ಟ್ವೀಟ್ ಮಾಡಿದ್ದಾರೆ.
ದುಬೈನಲ್ಲಿ ಸೋನು ಸೂದ್‌ಗೆ ಕಾದಿತ್ತು ಅಚ್ಚರಿ! ಹೋಟೆಲ್ ಬಿಲ್ ಪಾವತಿಸಿ ಟೇಬಲ್ ಮೇಲೆ ಬರೆದಿತ್ತೊಂದು ಬರಹ...
ವ್ಯಾಟ್ಸ್ಆ್ಯಪ್ ಖಾತೆ ಬ್ಲಾಕ್ ಆದ ಬೆನ್ನಲ್ಲೇ ಈ ಕುರಿತು ಮಾಹಿತಿ ನೀಡಿದ್ದ ಸೋನು ಸೂದ್‌ಗೆ ಕಂಪನಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇಷ್ಟೇ ಅಲ್ಲ ಸೂದ್ ಖಾತೆ ಸಕ್ರಿಯಗೊಂಡಿಲ್ಲ. ಇದೀಗ ನಟ ಆಕ್ರೋಶ ಹೊರಹಾಕಿದ್ದು, ನಟ ಪರ ಹಲವರು ಪ್ರತಿಕ್ರಿಯಿಸಿದ್ದಾರೆ. ವ್ಯಾಟ್ಸ್ಆ್ಯಪ್ ಈ ಕುರಿತು ತಕ್ಷಣವೆ ಸ್ಪಂದಿಸಲು ಜನ ಮನವಿ ಮಾಡಿದ್ದಾರೆ. ಸಾಮಾಜಿಕ ಸೇವೆಯೊಂದಿಗೆ ಪ್ರತಿ ದಿನ ಹಲವರಿಗೆ ನೆರವಾಗುವ ಸೋನು ಸೂದ್ ಖಾತೆಯನ್ನು ಸಕ್ರಿಯಗೊಳಿಸುವಂತೆ ಅಭಿಮಾನಿಗಳು ಮನವಿ ಮಾಡಿದ್ದಾರೆ.
ಗೋಲ್ಡನ್ ರೈನ್ ಮೂವೀಸ್ ಸಂಸ್ಥೆಯಡಿ ಹಾಸನ್ ರಮೇಶ್ ನಿರ್ಮಿಸಿರುವ ‘ಶ್ರೀಮಂತ’ ಕನ್ನಡ ಸಿನಿಮಾದಲ್ಲೂ ಸೋನ್ ಸೂದ್ ಅಭಿನಯಿಸಿದ್ದಾರೆ. ತೆಲುಗು, ತಮಿಳು ಸೇರಿದಂತೆ ದಕ್ಷಿಣ ಭಾರತ ಸಿನಿಮಾಗಳಲ್ಲಿ ಸೂದ್ ಮಿಂಚಿದ್ದಾರೆ. ಇದರ ಜೊತೆಗೆ ಹಲವರಿಗೆ ವೈಯುಕ್ತಿಕವಾಗಿ ನೆರವು ನೀಡಿದ್ದಾರೆ. ಆರ್ಥಿಕ ಸಹಾಯ, ಚಿಕಿತ್ಸೆ, ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ ಸೇರಿದಂತೆ ಹಲವು ರೂಪದಲ್ಲಿ ಸೂದ್ ಜನರಿಗೆ ನೆರವಾಗಿದ್ದಾರೆ.
ಜನರ ಕಷ್ಟ ನೋಡಿಯೂ ನೋಡದಂತೆ ಸುಮ್ಮನೆ ಇರಲಾರೆ; ಬಹುಭಾಷಾ ನಟ ಸೋನು ಸೂದ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.