ಸಿಡಿದಿದ್ದೇಕೆ ಡಿಕೆಶಿ ? ರೊಚ್ಚಿಗೆದ್ದಿದ್ದೇಕೆ ಎಚ್‌ಡಿಕೆ ? ಮತ್ತೆ ನೆನಪಾದ “ಶಿವ”ತಾಂಡವ.. “ಕುಮಾರ” ದ್ವೇಷದ ಕಥೆ..!

ಸಿಡಿದಿದ್ದೇಕೆ ಡಿಕೆಶಿ ? ರೊಚ್ಚಿಗೆದ್ದಿದ್ದೇಕೆ ಎಚ್‌ಡಿಕೆ ? ಮತ್ತೆ ನೆನಪಾದ “ಶಿವ”ತಾಂಡವ.. “ಕುಮಾರ” ದ್ವೇಷದ ಕಥೆ..!

Published : Apr 27, 2024, 05:42 PM IST

"ಮಹಿಳೆಯರ ಮಾನ ಹರಾಜಿಟ್ಟವರು ರಣಹೇಡಿಗಳು"- ಎಚ್.ಡಿ.ಕೆ
"ಕುಮಾರಸ್ವಾಮಿಗೆ ಮಾನ ಮರ್ಯಾದೆ ಇದ್ಯಾ.." ಅಂದಿದ್ದೇಕೆ ಡಿಕೆ..?
ಡಿಕೆಶಿ ಚರಿತ್ರೆಯನ್ನು ಕೆದಕಿ ಕುಮಾರಸ್ವಾಮಿ ಕೊಟ್ಟದ್ದೆಂಥಾ ಡಿಚ್ಚಿ..?
"ಗೌಡರ ಕುಟುಂಬದ ಮೂವರೂ ಸೋಲ್ತಾರೆ" ಡಿಕೆ ಸ್ಫೋಟಕ ಭವಿಷ್ಯ

ಅದು 25 ವರ್ಷಗಳ ದ್ವೇಷ, ದುಷ್ಮನಿ. ಅಲ್ಲಿ ದುಷ್ಮನಿಯ ಅಖಾಡದಲ್ಲಿ ನಡೆದದ್ದು ಅಕ್ಷರಶಃ ರಾಜಕೀಯ ಹಗೆತನದ ರೋಚಕ ಕಥೆ. ಒಬ್ಬ ಬೆಂಕಿಯಾದ್ರೆ, ಮತ್ತೊಬ್ಬ  ಬಿರುಗಾಳಿ. ಒಬ್ಬ ಸುನಾಮಿಯಾದ್ರೆ, ಮತ್ತೊಬ್ಬ ಸುಂಟರಗಾಳಿ. ಶಿವತಾಂಡವ, ಕುಮಾರ ದ್ವೇಷದ ಚರಿತ್ರೆಯಲ್ಲಿ ಹೊಸ ಅಧ್ಯಾಯಕ್ಕೆ ಕಾರಣವಾಗಿದೆ ಈ ಲೋಕಸಭಾ ಚುನಾವಣೆ(Lok Sabha elections 2024). ರಾಜಕೀಯ ದ್ವೇಷದ ಕಥೆಯಲ್ಲಿ ಇಲ್ಲಿಯವರೆಗಿನದ್ದು ಒಂದು ಲೆಕ್ಕವಾದ್ರೆ, ಇಲ್ಲಿಂದ ಮತ್ತೊಂದು ಲೆಕ್ಕ. ಯಾರನ್ನು ತಮ್ಮ ಜೋಡೆತ್ತು ಅಂತ ಕುಮಾರಸ್ವಾಮಿ(HD Kumaraswamy) ಕರೆದಿದ್ರೋ, ಯಾರನ್ನು ಅಣ್ಣ ನನ್ನಣ್ಣ ಅಂತ ಡಿಕೆ ಶಿವಕುಮಾರ್(DK Shivakumar) ಹೇಳಿದ್ರೋ. ಅವ್ರಿಬ್ರೂ ಈಗ ಮತ್ತೆ ತಮ್ಮ ಹಳೇ ವರಸೆ ತೋರಿಸುತ್ತಿದ್ದಾರೆ. ಡಿಕೆ ಶಿವಕುಮಾರ್ ಮತ್ತು ಎಚ್.ಡಿ ಕುಮಾರಸ್ವಾಮಿ ಮಧ್ಯೆ ಮತ್ತದೇ ಮದಗಜ ಗುದ್ದಾಟದಂತಾ ದುಷ್ಮನಿ ಕಾಳಗ ಶುರುವಾಗಿದೆ. ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಹೊತ್ತಿಕೊಂಡಿದ್ದ ಆ ದುಷ್ಮನಿಯ ಕಿಡಿಯೀಗ ಅಕ್ಷರಶಃ ಜ್ವಾಲಾಗ್ನಿಯಂತೆ ಧಗಧಗಿಸ್ತಾ ಇದೆ.

ಇದನ್ನೂ ವೀಕ್ಷಿಸಿ:  ಕಲ್ಯಾಣ ಕರ್ನಾಟಕ 14 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಬಾವುಟ ಹಾರಿಸಲು ರಣತಂತ್ರ! ಡಿಕೆಶಿ ಮಾಸ್ಟರ್ ಪ್ಲ್ಯಾನ್‌ ಏನು?

22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
Read more