ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್ ಹೊಸ ವಿಡಿಯೋ ಹರಿಬಿಟ್ಟಿದ್ದು, ಅದನ್ನು ನೋಡಿ ನೆಟ್ಟಿಗರು ಏನೆಲ್ಲಾ ಹೇಳಿದ್ರು ನೋಡಿ.
ವಿವಾದಗಳ ರಾಣಿ ರಾಖಿ ಸಾವಂತ್ ರಾಖಿ ಸಾವಂತ್ ಮೈಸೂರಿನ ಯುವಕ ಆದಿಲ್ ಖಾನ್ ಅವರನ್ನು ಮದುವೆಯಾಗಿ ಧರ್ಮ ಬದಲಿಸಿ ಫಾತಿಮಾ ಆಗಿದ್ದರು. ನಿಜವಾಗಿ ರಾಖಿ ತಾನು ಆದಿಲ್ ನನ್ನು ಮದುವೆಯಾಗಲು ಇಸ್ಲಾಂಗೆ ಮತಾಂತರಗೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಇಷ್ಟಾದರೂ ಗಂಡನ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸಿ ಅವರನ್ನು ಜೈಲಿಗೆ ಕಳುಹಿಸಿದ್ದ ರಾಖಿ ಸಾವಂತ್, ಮೆಕ್ಕಾಕ್ಕೆ ಹೋಗಿ ಉಮ್ರಾ ನೆರವೇರಿಸಿದ್ದರು. ತಾವೀಗ ರಾಖಿ ಅಲ್ಲ, ಫಾತೀಮಾ (Phatima) ಎಂದು ಕರೆಯಿರಿ ಎಂದೂ ಈ ಸಂದರ್ಭದಲ್ಲಿ ಅವರು ಹೇಳಿದ್ದರು. ತಮ್ಮ ಹೆಸರನ್ನು ಫಾತೀಮಾ ಎಂದು ಬದಲಾಯಿಸಿಕೊಂಡಿರುವುದಾಗಿ ಹೇಳಿದ್ದರು. ಕೆಲ ದಿನಗಳ ಹಿಂದೆ ಈ ಡ್ರಾಮಾ ಕ್ವೀನ್ ಬಂದೂಕು ಹಿಡಿದು ದೇಶಕ್ಕಾಗಿ ಪ್ರಾಣ ಕೊಡಲೂ ಸಿದ್ಧ ಎನ್ನುವ ದಿಲ್ ದಿಯಾ ಹೈ ಜಾನ್ ಭೀ ದೇಂಗೆ ಹಾಡನ್ನು ಗುನುಗಿದ್ದರು. ಭಾರತೀಯ ಸೈನಿಕರ ಸಮವಸ್ತ್ರ ತೊಟ್ಟ ನಟಿಯನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ ನೆಟ್ಟಿಗರು. ಬಂದೂಕು ಹಿಡಿದು ಪ್ಯಾಲೆಸ್ತೀನ್ಗೆ ಹೋಗು. ಅಲ್ಲಿ ನಿನ್ನ ಜೀವ ಕೊಡು, ಹೇಗಿದ್ದರೂ ಮತಾಂತರಗೊಂಡಿರುವೆಯಲ್ಲ, ನಿನ್ನವರು ಅಲ್ಲಿ ಕಾಯುತ್ತಿದ್ದಾರೆ ಹೋಗು ಎಂದು ಹೇಳುತ್ತಿದ್ದಾರೆ. ಸೈನಿಕರ ಸಮವಸ್ತ್ರ ತೊಟ್ಟು ಅವರನ್ನು ಅವಮಾನ ಮಾಡಬೇಡ ಎಂದು ಹಲವರು ನಟಿಯ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಪಾಕಿಸ್ತಾನಕ್ಕೆ ಹೋಗುವೆ ಅಂದಿದ್ರಲ್ಲ, ಅಲ್ಲಿಂದ ನೇರವಾಗಿ ಪ್ಯಾಲಿಸ್ತೀನ್ಗೆ ಹೋಗಿ ನಿನ್ನವರ ಜೊತೆ ಸೇರಿಕೋ. ಅಲ್ಲಿ ಜೀವ ಕೊಡು ಎಂದು ಗಂಭೀರವಾಗಿ ರಾಖಿ ವಿರುದ್ಧ ಟ್ರೋಲ್ ಮಾಡಿದ್ದರು.
ಇದಾದ ಬಳಿಕ ಅತ್ತ ಆದಿಲ್ ಖಾನ್ ಬೇರೆ ಯುವತಿಯ ಜೊತೆ ಮದ್ವೆಯಾಗಿರುವುದಾಗಿ ಘೋಷಿಸುತ್ತಿದ್ದಂತೆಯೇ ಸೋಷಿಯಲ್ ಮೀಡಿಯಾದಲ್ಲಿ ಬಂದು ಇಲ್ಲಸಲ್ಲದ್ದನ್ನು ಮಾತನಾಡಿದ್ದರು ರಾಖಿ. ಅಷ್ಟಕ್ಕೂ ಆದಿಲ್ ಖಾನ್ ದುರ್ರಾನಿ ಅವರ ಜೊತೆಗಿನ ರಾಖಿ ಮದುವೆಯ ಕಥೆ ಸಿನಿಮಾಕ್ಕಿಂತಲೂ ಕುತೂಹಲವಾಗಿದೆ. ಮೈಸೂರಿನ ಯುವಕ ಆದಿಲ್ ಖಾನ್ ಮದುವೆಯನ್ನು ನಿರಾಕರಿಸಿದ್ದು, ರಾಖಿ ರಂಪಾಟ ಮಾಡಿದ್ದು, ಕೊನೆಗೂ ಆದಿಲ್ ಮದುವೆಯನ್ನು ಒಪ್ಪಿಕೊಂಡಿದ್ದು ಎಲ್ಲವೂ ಯಾವ ಸಿನಿಮಾ ಕಥೆಗಿಂತಲೂ ಭಿನ್ನವಾಗಿರಲಿಲ್ಲ. ಎಲ್ಲವೂ ಸುಖಾಂತ್ಯಗೊಂಡಿತು ಎನ್ನುವಾಗಲೇ ಆದಿಲ್ ತಮಗೆ ಮೋಸ ಮಾಡುತ್ತಿದ್ದಾರೆ, ಹಲ್ಲೆ ಮಾಡಿದ್ದಾರೆ, ಇನ್ನೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ, ಆದಿಲ್‌ಗಾಗಿ ಇಸ್ಲಾಂಗೆ ಮತಾಂತರ ಮಾಡಿಕೊಂಡಿರುವೆ. ನಾನು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡು ಆದಿಲ್‌ನ ಮದುವೆ ಆಗಿದ್ದೇನೆ ಎಂದೆಲ್ಲಾ ಆರೋಪಿಸಿದ್ದ ರಾಖಿ ಕೊನೆಗೆ ದೂರು ಕೊಟ್ಟರು. ಇದರಿಂದ ಆದಿಲ್ (Adil Khan Durrani) ವಿರುದ್ಧ ಎಫ್ಐಆರ್ ದಾಖಲಾಗಿದ್ದು ಸದ್ಯ ಅವರು ಜೈಲಿಗೆ ಹೋದದ್ದು, ನಂತರ ಅವರು ಬಿಡುಗಡೆಗೊಂಡದ್ದು ಎಲ್ಲವೂ ಸಿನಿಮೀಯವೇ.
ಇದೀಗ ತಮ್ಮ ಪ್ಲಾಸ್ಟಿಕ್ ಸರ್ಜರಿ ದೇಹವನ್ನು ಪ್ರದರ್ಶಿಸುತ್ತಾ ಮಿನಿ ಸ್ಕರ್ಟ್ ಧರಿಸಿ ರೀಲ್ಸ್ ಮಾಡಿರುವ ರಾಖಿ ಅವರ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಸಕತ್ ಟ್ರೋಲ್ ಮಾಡುತ್ತಿದ್ದಾರೆ. ಇದು ಫಾತೀಮಾ ಅವತಾರವೋ, ರಾಖಿಯ ಅವತಾರವೋ ಎಂದು ಪ್ರಶ್ನಿಸುತ್ತಿದ್ದಾರೆ. ಇಷ್ಟು ಬಟ್ಟೆ ಹಾಕುವ ಬದಲು ಅದನ್ನೂ ತೆಗೆದುಬಿಡು, ಏನಂತೆ ಎಂದು ಕೆಲವರು ಪ್ರಶ್ನಿಸುತ್ತಿದ್ದರೆ, ಫಾತೀಮಾ, ಏನು ನಿನ್ನೀ ಅವತಾರವಮ್ಮಾ ಎಂದು ಮತ್ತೆ ಕೆಲವರು ನಟಿಯ ಕಾಲೆಳೆಯುತ್ತಿದ್ದಾರೆ.
ಕೆಲ ದಿನಗಳ ಹಿಂದೆ ಪತಿ ಆದಿಲ್ ಖಾನ್ ದುರ್ರಾನಿ ಇನ್ನೊಂದು ಮದುವೆಯಾದ ಸುದ್ದಿ ಕೇಳಿದ್ದ ನಟಿ, ಎರಡು ಮಂಗಗಳ ಫೋಟೋ ಶೇರ್ ಮಾಡಿದ್ದರು. ಅಷ್ಟಕ್ಕೂ ಈ ಎರಡು ಮಂಗಗಳು ಮದುವೆ ಮಾಡಿಕೊಂಡಿರುವ ಫೋಟೋಗಳು ಇದಾಗಿದ್ದು, ಇದು ಯಾರು ಎಂದು ಪ್ರಶ್ನಿಸಿದ್ದರು. ಅದಾದ ಬಳಿಕ ಸಲ್ಮಾನ್ ಖಾನ್ ಮನೆಯ ಮೇಲೆ ಗುಂಡಿನ ದಾಳಿ ನಡೆದಾಗ, ಸಲ್ಮಾನ್ ಖಾನ್ ಒಳ್ಳೆಯ ಮನುಷ್ಯ, ಅವರು ದೇವತಾ ಮನುಷ್ಯ. ಅವರನ್ನು ಕೊಲ್ಲಬೇಡಿ ಎಂದು ಇನ್ಸ್ಟಾಗ್ರಾಮ್ನಲ್ಲಿ ಬಂದು ಗೋಗರೆದಿದ್ದರು. ಇದೀಗ ಭರ್ಜರಿ ಡ್ಯಾನ್ಸ್ ಮಾಡುವ ಮೂಲಕ ಎಲ್ಲರನ್ನೂ ಬೆಚ್ಚಿ ಬೀಳಿಸಿದ್ದಾರೆ.
ಕೋತಿಗಳ ಮದ್ವೆ ಫೋಟೋ ಶೇರ್ ಮಾಡಿದ ರಾಖಿ ಸಾವಂತ್: ನಟಿ ಪ್ರಕಾರ ಇವರು ಯಾರು ಗೊತ್ತಾ?