Apr 27, 2024, 5:26 PM IST
ಇವಿಎಂ ಮಷಿನ್ ಜೊತೆ ಜೊತೆಗೆ ವಿವಿ ಪ್ಯಾಟ್‌ನ ಚೀಟಿಗಳನ್ನೂ ಲೆಕ್ಕ ಹಾಕಬೇಕೆಂದು ಸುಪ್ರೀಂ ಕೋರ್ಟ್(Supreme Court) ಮೊರೆ ಹೋಗಲಾಗಿತ್ತು. ಹಾಗೆನೇ ಎಲೆಕ್ಷನ್ ವೋಟಿಂಗ್ ಸಂದರ್ಭದಲ್ಲಿ ಇವಿಎಂ ಮಷಿನ್(EVM machine) ಬದಲಾಗಿ, ಹಳೇ ಪದ್ಧತಿಯಾದ ಬ್ಯಾಲೆಟ್ ಪೇಪರ್(Ballot Paper) ವೋಟಿಂಗ್ ಅನ್ನೇ ಮರಳಿ ತರಬೇಕು ಅನ್ನೋ ಅರ್ಜಿ ಸಹ ಸುಪ್ರೀಂ ಕೋರ್ಟ್‌ನಲ್ಲಿತ್ತು. ನಿನ್ನೆ ಆ ಎಲ್ಲ ಅರ್ಜಿಗಳಿಗೆ ಸುಪ್ರೀಂ ಕೋರ್ಟ್ ಖಡಕ್ ಜವಾಬ್ ಕೊಟ್ಟಿದೆ. ದೇಶದಲ್ಲಿ ಮೊದಲ್ಲೆಲ್ಲ ಬ್ಯಾಲೆಟ್ ಪೇಪರ್ ಮೇಲೆ ದೇಶ ಮತ್ತು ರಾಜ್ಯಗಳ ವೋಟಿಂಗ್ ನಡೆಯುತ್ತಿತ್ತು. ಆದ್ರೆ 2004ರ ಲೋಕಸಭಾ ಚುಣಾವಣೆಯಲ್ಲಿ(Lok Sabha elections 2024) ಸಂಪೂರ್ಣ ಬ್ಯಾಲೆಟ್ ಪೇಪರ್ ಬ್ಯಾನ್ ಮಾಡಲಾಯ್ತು. ಬ್ಯಾಲೆಟ್ ಪೇಪರ್ ಬದಲಾಗಿ ಇವಿಎಂ ಮಷಿನ್ ಮುಖೇನ ವೋಟಿಂಗ್ ಪದ್ಧತಿ ದೇಶದಲ್ಲಿ ಜಾರಿಗೆ ಬಂತು. ದೇಶದಲ್ಲಿ ಇವಿಎಂ ಮಷಿನ್ ಪರಿಚಯವಾಗಿ 20 ವರ್ಷಗಳೇ ಕಳೆದಿವೆ. ಈ 20 ವರ್ಷಗಳಲ್ಲಿ ಹಲವು ಚುಣಾವಣೆಗಳು ನಡೆದಿವೆ. ಆದರು ಸಹ ಈಗಲೂ ಕೆಲವೊಂದಿಷ್ಟು ರಾಜಕೀಯ ಪಕ್ಷಗಳಿಗೆ ಇವಿಎಂ ಮಷಿನ್ ಮೇಲೆ ನಂಬಿಕೆ ಬಂದಂತಿಲ್ಲ. ತಮ್ಮ ಪಕ್ಷಕ್ಕೆ ಗೆಲುವು ಸಿಕ್ಕ ಸಂದರ್ಭದಲ್ಲಿ ಬಾಯಿ ಮುಚ್ಕೊಂಡು ಇರ್ತಾರೆ. ಸೋಲಾಗುತ್ತಿದ್ದಂತೆ ಸೋಲಿನ ಆರೋಪವನ್ನು ಇವಿಎಂ ಮಷಿನ್ ಮೇಲೆ ಹಾಕ್ತಾರೆ. ದೇಶದೆಲ್ಲೆಡೆ ಈಗ ಲೋಕಸಭಾ ಚುನಾವಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ, ಅಸೋಷಿಯೇಷನ್ ಫಾರ್ ಡೆಮಾಕ್ರಾಟಿಕ್ ರಿಫಾರ್ಮ್ಸ್ ಎಂಬ ಸಂಸ್ಥೆಯು ಇವಿಎಂ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ತಮ್ಮ ಸಂಸ್ಥೆಗೆ ಇವಿಎಂ ಮಷಿನ್ ಕೌಂಟ್ ಮಾಡುವ ವೋಟ್ಗಳ ಬಗ್ಗೆ ಅನುಮಾನವಿದೆ. ಹೀಗಾಗಿ ಮುಂದೆ ಬರುವ ಎಲ್ಲ ಚುನಾವಣೆಗಳಲ್ಲೂ ಇವಿಎಂ ಮಷಿನ್ ವೋಟ್ ಕೌಂಟ್ಗಳ ಜೊತೆಗೆ ವಿವಿ ಪ್ಯಾಟ್ನ ಚೀಟಿಗಳನ್ನು ಲೆಕ್ಕ ಹಾಕಬೇಬೇಕು ಎಂಬ ಅರ್ಜಿಯನ್ನು ಹಾಕಿತ್ತು ಈ ಸಂಸ್ಥೆ.
ಇದನ್ನೂ ವೀಕ್ಷಿಸಿ: Siddaramaiah: ಮುಸ್ಲಿಮರಿಗೆ ಹಿಂದುಳಿದ ವರ್ಗದ ಮೀಸಲು ನೀಡಿರುವುದು ನೂರಕ್ಕೆ ನೂರು ಸುಳ್ಳು: ಸಿಎಂ ಸಿದ್ದರಾಮಯ್ಯ