ಕ್ರಾಪ್ ಟಾಪ್- ಸ್ಕರ್ಟ್ ಧರಿಸಿ ಕುಣಿದು ಕುಪ್ಪಳಿಸಿದ ನೋರಾ; ಇಲ್ಲಿವೆ ಹಾಟ್ ಸುಂದರಿಯ ಹುಟ್ಟುಹಬ್ಬ ಆಚರಣೆ ಫೋಟೋಗಳು

First Published Feb 7, 2023, 1:08 PM IST

ಬಾಲಿವುಡ್ ಖ್ಯಾತ ಡಾನ್ಸರ್, ನಟಿ ನೋರಾ ಫತೇಹಿ ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡರು. ದುಬೈನಲ್ಲಿ ಬರ್ತಡೇ ಸೆಲೆಬ್ರೇಟ್ ಮಾಡಿದ ನೋರಾ ತನ್ನ ಸ್ನೇಹಿತರ ಗ್ಯಾಂಗ್ ಜೊತೆ ಕುಣಿದು ಕುಪ್ಪಳಿಸಿದ್ದಾರೆ. 

ಬಾಲಿವುಡ್ ಖ್ಯಾತ ಡಾನ್ಸರ್, ನಟಿ ನೋರಾ ಫತೇಹಿ ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡರು. ದುಬೈನಲ್ಲಿ ಬರ್ತಡೇ ಸೆಲೆಬ್ರೇಟ್ ಮಾಡಿದ ನೋರಾ ತನ್ನ ಸ್ನೇಹಿತರ ಗ್ಯಾಂಗ್ ಜೊತೆ ಕುಣಿದು ಕುಪ್ಪಳಿಸಿದ್ದಾರೆ. ವಿಶೇಷವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ನೋರಾ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. 

ಸ್ನೇಹಿತರ ಜೊತೆ ನೌಕೆ ಏರಿದ್ದ ನೋರಾ ಅಲ್ಲೇ ಮಸ್ತ್ ಡಾನ್ಸ್ ಮಾಡಿದ್ದಾರೆ. ಕ್ರಾಪ್ ಟಾಪ್ ಮತ್ತು ಸ್ಕರ್ಟ್ ಧರಿಸಿದ್ದ ನೋರಾ ಸುಂದರವಾಗಿ ಕಾಣಿಸುತ್ತಿದ್ದರು. ಹುಟ್ಟುಹಬ್ಬದ ದಿನವೂ ತನ್ನ ಅಭಿಮಾನಿಗಳಿಗೆ ಡಾನ್ಸ್ ಮೂಲಕ ಸಖತ್ ಮನರಂಜನೆ ನೀಡಿದರು. 

ವಿದೇಶದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡು ನೋರಾಗೆ ಅಭಿಮಾನಿಗಳು ಮತ್ತು ಸಿನಿಮಾ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಅನೇಕರು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ತಿಳಿಸಿದ್ದಾರೆ. 

ನೋರಾ ಫತೇಹಿ ಹುಟ್ಟುಹಬ್ಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನೇಕರು ಪ್ರೀತಿಯ ಕಾಮೆಂಟ್ ಮಾಡಿ ವಿಶ್ ಮಾಡಿದ್ದಾರೆ. ಡಾನ್ಸ್ ಅದ್ಭುತ ಎಂದು ಹೇಳಿದ್ದಾರೆ. 

ಅದ್ಭುತ ಡಾನ್ಸ್ ಮೂಲಕವೇ ಅಭಿಮಾನಿಗಳ ಹೃದಯ ಗೆದ್ದಿರುವ ನೋರಾ ಸದ್ಯ 100 ಪರ್ಸೆಂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ರಿತೇಶ್ ದೇಶ್‌ಮುಖ್, ಶೆಹ್ನಾಜ್ ಗಿಲ್ ಮತ್ತು ಜಾನ್ ಅಬ್ರಹಾಂ ಜೊತೆ ಹೆಜ್ಜೆ ಹಾಕಿದ್ದಾರೆ. ಕೊನೆಯದಾಗಿ ನೋರಾ ಆಕ್ಷನ್ ಹೀರೋ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. 
 

ಕೆನಡಾ ಮೂಲಕ ನಟಿ ನೋರಾ 2014ರಲ್ಲಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ರೋರ್; ಟೈಗರ್ ಆಫ್ ದಿ ಸುಂದರಬನ್ಸ್ ಮೂಲಕ ಮೊದಲ ಬಾರಿಗೆ ತೆರೆಮೇಲೆ ಮಿಂಚಿದರು. ಬಳಿಕ ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಬಾಹುಬಲಿ ಸಿನಿಮಾದ ಒಂದು ಹಾಡಿನಲ್ಲಿ ನೋರಾ ಸೊಂಟ ಬಳುಕಿಸಿದ್ದಾರೆ. ಅನೇಕ ಸೂಪರ್ ಹಿಟ್ ಹಳಿಗೆ ಹೆಜ್ಜೆ ಹಾಕಿರುವ ನೋರಾ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ಕಿರುತೆರೆಯಲ್ಲೂ ನೋರಾ ಬ್ಯುಸಿಯಾಗಿದ್ದಾರೆ.   
 

click me!