ದೀಪಿಕಾ ಗರ್ಭಿಣಿ ಹೌದೋ ಅಲ್ವೋ ಎಂಬ ಬಗ್ಗೆ ಅಭಿಮಾನಿಗಳಿಗೆ ಸಕತ್ ಚಿಂತೆ ಶುರುವಾಗಿದೆ. ಅದಕ್ಕೆ ಕಾರಣವೂ ಹೀಗಿದೆ!
ಸದ್ಯ ಪಠಾಣ್ ಬೆಡಗಿ, ಕನ್ನಡತಿ ದೀಪಿಕಾ ಪಡುಕೋಣೆಯ ಗರ್ಭಧಾರಣೆಯ ವಿಷಯ ಹಾಟ್ ವಿಷಯವಾಗಿದೆ. ನಟಿಯೇನೋ ಅಮ್ಮನಾಗುವ ಸುದ್ದಿ ಕೊಟ್ಟರು. ಸೆಪ್ಟೆಂಬರ್‌ನಲ್ಲಿ ಮಗು ಜನಿಸಲಿದೆ ಎಂದೂ ಹೇಳಿದ್ದಾರೆ. ಆದರೆ ಈಕೆಗೆ ಇನ್ನೂ ಬೇಬಿ ಬಂಪ್ ಕಾಣಿಸುತ್ತಿಲ್ಲ. ದೀಪಿಕಾ ಕೊಟ್ಟಿರುವ ಲೆಕ್ಕದ ಪ್ರಕಾರ ಅವರಿಗೆ ಈಗ ಮೂರು ತಿಂಗಳು ಮುಗಿದು ನಾಲ್ಕು ತಿಂಗಳು ಆಗಿದೆ. ಆದರೆ ಇದುವರೆಗೂ ಅವರು ಶೂಟಿಂಗ್ ಸೆಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ದರಿಂದ ದೀಪಿಕಾ ಪಡುಕೋಣೆ ಗರ್ಭಿಣಿ ಅಲ್ಲವೇ ಅಲ್ಲ ಎನ್ನುವ ಸುದ್ದಿ ಭಾರಿ ಸದ್ದು ಮಾಡುತ್ತಿದೆ. ಕೆಲ ದಿನಗಳ ಹಿಂದೆ ನಟಿ, ಟ್ಯಾನ್ ಆಗಿರುವ ಫೋಟೋ ಶೇರ್ ಮಾಡಿದ್ದರು. ಅದನ್ನು ನೋಡಿದರೆ ಅವರು ಶೂಟಿಂಗ್‌ನಲ್ಲಿ ಫುಲ್ ಬಿಜಿ ಇರುವುದು ತಿಳಿದುಬರುತ್ತದೆ. ನಾಲ್ಕು ತಿಂಗಳ ಗರ್ಭಿಣಿ ಈ ರೀತಿ ಶೂಟಿಂಗ್‌ನಲ್ಲಿ ಬಿಜಿಯಾಗುವುದು ಕಷ್ಟ ಎನ್ನುತ್ತಿದ್ದಾರೆ ನೆಟ್ಟಿಗರು. ಇದಕ್ಕಿಂತಲೂ ಮುಖ್ಯವಾಗಿ ನಟಿ, ಇದೀಗ ನಟಿ ಶೂಟಿಂಗ್ ಸ್ಪಾಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅದೂ ಪೊಲೀಸ್ ಅಧಿಕಾರಿಯಾಗಿ. ಪೊಲೀಸ್ ಅಧಿಕಾರಿಯೆಂದರೆ ಸಾಮಾನ್ಯವಾಗಿ ಫೈಟಿಂಗ್ ಇದ್ದೇ ಇರುತ್ತದೆ. ಇಂಥ ಶೂಟಿಂಗ್ ನಾಲ್ಕು ತಿಂಗಳ ಗರ್ಭಿಣಿ ಮಾಡಲು ಸಾಧ್ಯವೇ ಎನ್ನುವ ಪ್ರಶ್ನೆ ಎದುರಾಗಿದೆ. ಅಷ್ಟೇ ಅಲ್ಲದೇ, ನಾಲ್ಕು ತಿಂಗಳು ಎಂದರೆ ಸಾಮಾನ್ಯವಾಗಿ ಸ್ವಲ್ಪವಾದರೂ ಹೊಟ್ಟೆ ಕಾಣಿಸುತ್ತದೆ. ಆದರೆ ನಟಿಯ ಹೊಟ್ಟೆಯೂ ಕಾಣಿಸುತ್ತಿಲ್ಲ ಎನ್ನುವುದು ಡಿಪ್ಪಿ ಫ್ಯಾನ್ಸ್ ಅಭಿಮತ.
ಅಂದಹಾಗೆ ನಟಿ ಇದೀಗ ‘ಸಿಂಗಂ ಅಗೇನ್ ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ದೇಶಕ ರೋಹಿತ್ ಶೆಟ್ಟಿ ಅವರ ‘ಸಿಂಗಂ ಎಗೇನ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಫೋಟೋಗಳು ವೈರಲ್ ಆಗಿವೆ. ಸಾಹಸ ದೃಶ್ಯವೊಂದರ ಚಿತ್ರೀಕರಣಕ್ಕಾಗಿ ದೀಪಿಕಾ ಸೆಟ್‌ಗೆ ಬಂದಿದ್ದಾರೆ ಎನ್ನಲಾಗಿದೆ. ಗರ್ಭಿಣಿ ಹೀಗೆ ಬಂದಿರುವುದಕ್ಕೆ ಅಭಿಮಾನಿಗಳು ಚಿಂತಿತರಾಗಿದ್ದರೂ ಗರ್ಭಿಣಿ ಬರಲು ಸಾಧ್ಯವೇ ಇಲ್ಲ ಎನ್ನುತ್ತಿದ್ದಾರೆ. ಇದೇ ಕಾರಣಕ್ಕೆ ದೀಪಿಕಾ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯುತ್ತಿದ್ದಾರೆ. ಆ ಮಗು ಸೆಪ್ಟೆಂಬರ್‌ನಲ್ಲಿ ಹುಟ್ಟಲಿದೆ. ನಟಿಯೇನೂ ಸುಳ್ಳು ಹೇಳಿಲ್ಲ. ಅಮ್ಮ ಆಗ್ತಿರೋದನ್ನು ಹೇಳಿದ್ದಾರಷ್ಟೇ. ಅಮ್ಮ ಆಗ್ತಿರೋದು ನಿಜ, ಆದರೆ ಈಕೆ ಗರ್ಭಿಣಿಯಲ್ಲ ಎನ್ನುತ್ತಿದ್ದಾರೆ. ಗರ್ಭಿಣಿಯಾದರೆ ಅದನ್ನು ಮುಚ್ಚಿಡುವುದಂತೂ ಸಾಧ್ಯವಿಲ್ಲ. ಕೆಲವೇ ದಿನಗಳಲ್ಲಿ ಗೊತ್ತಾಗಲೇಬೇಕಲ್ಲಾ! ಅಷ್ಟಕ್ಕೂ ದೀಪಿಕಾ ಕೈಯಲ್ಲಿ ಇದಾಗಲೇ ಸಾಕಷ್ಟು ಚಿತ್ರಗಳೂ ಇವೆ.
ದೀಪಿಕಾ ಪಡುಕೋಣೆ ಅಮ್ಮ ಆಗೋದು ನಿಜ, ಆದ್ರೆ ಗರ್ಭಿಣಿ ಅನ್ನೋದೇ ಸುಳ್ಳಾ? ಏನಿದು ಹೊಸ ವಿಷ್ಯ?
ಆದರೆ ಇದರ ನಡುವೆಯೇ ಹೊಸ ವಿಷಯವೊಂದು ಬೆಳಕಿಗೆ ಬಂದಿದೆ. ಅದೇನೆಂದ್ರೆ, ದೀಪಿಕಾ ಮೇ ತಿಂಗಳಿಗೆ ತಮ್ಮ ಎಲ್ಲಾ ಸಿನಿಮಾ ಪ್ರಾಜೆಕ್ಟ್ಗಳನ್ನು ನಿಲ್ಲಿಸಲಿದ್ದಾರೆ. ಫುಲ್ ರೆಸ್ಟ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಹೆರಿಗೆ ದಿನಾಂಕವು ಸೆಪ್ಟೆಂಬರ್‌ನಲ್ಲಿ ಇರುವುದರಿಂದ ಕೆಲಸದಿಂದ ದೂರ ಸರಿದು ತಮ್ಮ ಆರೋಗ್ಯದ ಕಡೆಗೆ ಸಂಪೂರ್ಣವಾಗಿ ಗಮನಹರಿಸುತ್ತಿದ್ದಾರೆ ಎಂದು ಸುದ್ದಿಯಾಗುತ್ತಿದೆ.
ಸದ್ಯ ಅವರ ಕೈಯಲ್ಲಿ, ನಾಗ್ ಅಶ್ವಿನ್ ನಿರ್ದೇಶಿಸಿದ ಮತ್ತು ಸಿ.ಅಶ್ವಿನಿ ದತ್ ನಿರ್ಮಿಸಿದ ಕಲ್ಕಿ 2898 AD ಎಂಬ ವೈಜ್ಞಾನಿಕ ಕಾದಂಬರಿ ಆಧರಿತ ಕೂಡ ಇದೆ. ಈ ಚಿತ್ರದಲ್ಲಿ ಪ್ರಭಾಸ್ ಮತ್ತು ದಿಶಾ ಪಟಾನಿ ಜೊತೆಗೆ ಹಿರಿಯ ನಟರಾದ ಅಮಿತಾಭ್ ಬಚ್ಚನ್ ಮತ್ತು ಕಮಲ್ ಹಾಸನ್ ಸೇರಿದಂತೆ ದೊಡ್ಡ ತಾರಾಗಣವಿದೆ. ಚಿತ್ರ ತಂಡವು ನಟಿಯ ಗರ್ಭಧಾರಣೆಯನ್ನು ಪರಿಗಣಿಸಿ, ಮುಂದಿನ ಶೂಟಿಂಗ್ ಅನ್ನು ವೆಲ್ ಪ್ಲಾನ್ಡ್ ಆಗಿ ಯೋಜಿಸಿದ್ದಾರೆ. ಅವರು ನಿರ್ಮಾಪಕರ ಜೊತೆ ಚರ್ಚೆ ಮಾಡಿ, ಮೇ ಅಂತ್ಯದೊಳಗೆ ಪ್ರಚಾರದ ವಿಡಿಯೋ ಸಂದರ್ಶನಗಳನ್ನು ಪೂರ್ಣಗೊಳಿಸುವಂತೆ ವಿನಂತಿಸಿದ್ದಾರೆ ಎಂದೂ ಹೇಳಲಾಗುತ್ತಿದೆ. ಹಾಗಿದ್ದರೆ ದೀಪಿಕಾ ಮಗುವನ್ನು ತಾವೇ ಹೆರುತ್ತಿರುವುದು ನಿಜನಾ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ನಟಿಯ ಗರ್ಭಧಾರಣೆಯ ವಿಷಯ ಗುಟ್ಟಾಗಿ ಉಳಿದಿದೆ!
ಕೊರಗಜ್ಜನ ಸನ್ನಿಧಿಯಲ್ಲಿ ಪವಾಡ: ಕಪ್ಪು ಬಣ್ಣದ ಘಟನೆ ವಿವರಿಸಿದ ನಟಿ ರಕ್ಷಿತಾ ಪ್ರೇಮ್