ಅಯ್ಯೋ ಆಂಟಿನಾ...? ಬಾಲಕ 'ಆಂಟಿ' ಎಂದಾಗ ನಟಿ ಮಾಧುರಿ ದೀಕ್ಷಿತ್​ ರಿಯಾಕ್ಷನ್​ ಹೇಗಿತ್ತು ನೋಡಿ- ವಿಡಿಯೋ ವೈರಲ್

Published : May 04, 2024, 06:55 PM IST
 ಅಯ್ಯೋ ಆಂಟಿನಾ...? ಬಾಲಕ 'ಆಂಟಿ' ಎಂದಾಗ  ನಟಿ ಮಾಧುರಿ ದೀಕ್ಷಿತ್​ ರಿಯಾಕ್ಷನ್​ ಹೇಗಿತ್ತು ನೋಡಿ- ವಿಡಿಯೋ ವೈರಲ್

ಸಾರಾಂಶ

ನಟಿ ಮಾಧುರಿ ದೀಕ್ಷಿತ್​ ಅವರಿಗೆ ಬಾಲಕನೊಬ್ಬ ಆಂಟಿ ಎಂದಾಗ ನಟಿಯ ರಿಯಾಕ್ಷನ್​ ನೋಡಿ ಥಹರೇವಾರಿ ಕಮೆಂಟ್ಸ್​ಗಳ ಸುರಿಮಳೆಯಾಗಿದೆ.  

ಬೆಂಗಳೂರಿನಂಥ ಕೆಲವು ಪ್ರದೇಶಗಳಲ್ಲಿ ಆಂಟಿ ಎಂದು ಮಹಿಳೆಯರಿಗೆ ಕರೆಯುವುದು ಮಾಮೂಲು. ವಯಸ್ಸಿನಲ್ಲಿ ಎಷ್ಟೇ ದೊಡ್ಡವರಾಗಿದ್ದರೂ ಹೆಣ್ಣುಮಕ್ಕಳನ್ನು ಕಂಡಾಕ್ಷಣ ಆಂಟಿ ಎಂದು ಬಿಡುತ್ತಾರೆ. ಇದು ಹಲವರಿಗೆ ಸಿಟ್ಟು ತರಿಸಿದರೂ ಸಹಿಸಿಕೊಂಡು ಸುಮ್ಮನಾಗುತ್ತಾರೆ. ಇನ್ನು ಕೆಲವರು ಹಲೋ ಅಜ್ಜಾ ಎಂದೋ, ಹಲೋ ಅಂಕಲ್​ ಎಂದೇ ತಿರುಗೇಟು ಕೊಟ್ಟು ತಮ್ಮ ಕೋಪವನ್ನು ತಣಿಸಿಕೊಂಡುಬರುವುದು ಇದೆ. ಇದೇ ಕಾರಣಕ್ಕೆ ಆಂಟಿ ಎನ್ನುವುದು ಹಲವರಿಗೆ ಆ್ಯಂಟಿ ಎನಿಸಿಕೊಂಡಿದೆ. 

ಇದು ಸಾಮಾನ್ಯ ಮಹಿಳೆಯರ ಪಾಡಾದರೆ ಇನ್ನು ಸಿನಿ ತಾರೆಯರ ಕಥೆ? ಅವರು ತಮಗೆ ವಯಸ್ಸೇ ಆಗಿಲ್ಲ ಎಂದುಕೊಳ್ಳುವವರು. ಹೀಗಿರುವಾಗ ಯಾರಾದೂ ಅವರಿಗೆ ಆಂಟಿ, ಅಂಕಲ್​ ಎಂದರೆ ಹೇಗೆ ಸಹಿಸಿಕೊಂಡಾರು? ಅದರಲ್ಲಿಯೂ ಚಿತ್ರ ನಟಿಯರಿಗೆ ಇವೆಲ್ಲಾ ಇಷ್ಟವೇ ಆಗಲ್ಲ. ಅವರು ಸದಾ ಯಂಗ್​ ಆಗಿ ಕಾಣಿಸಿಕೊಳ್ಳಲು ಏನೆಲ್ಲಾ ಸರ್ಕಸ್​ ಮಾಡುತ್ತಿರುತ್ತಾರೆ. ಫಿಟ್​ ಆ್ಯಂಡ್​ ಫೈನ್​ ಆಗಿರಲು ಡಯೆಟ್, ಜಿಮ್​, ವರ್ಕ್​ಔಟ್​ ಅಂತೆಲ್ಲಾ ಸಮಯ ಮೀಸಲು ಇಡುತ್ತಾರೆ. ಇನ್ನು ಕೆಲವರು ವಯಸ್ಸು 40 ದಾಟುತ್ತಿದ್ದಂತೆಯೇ ಮೇಕಪ್​ನ ತೂಕವನ್ನೂ ಹೆಚ್ಚಿಸಿಕೊಳ್ಳುತ್ತಾರೆ. ಒಟ್ಟಿನಲ್ಲಿ ಯಂಗ್​ ಆಗಿರಲು ನೋಡುತ್ತಾರೆ. ಇನ್ನು ಧಕ್​ ಧಕ್​ ಬೆಡಗಿ ಎಂದೇ ಕರೆಸಿಕೊಳ್ಳುವ ಮಾಧುರಿ ದೀಕ್ಷಿತ್​ ಸುಮ್ಮನೆ ಇರ್ತಾರಾ? ಇವರಿಗೆ ಮೇಡಂ ಎಂದರಷ್ಟೇ ಖುಷಿಯಾಗಬಹುದು. ಅದನ್ನು ಬಿಟ್ಟು ಆಂಟಿ ಗೀಂಟಿ ಅಂದುಬಿಟ್ಟರೆ?

ಮೇಲಿಂದೆಲ್ಲಾ ತೋರಿಸ್ತಿರೋದು ಓಕೆ... ಪದೇ ಪದೇ ಕೈ ಅಲ್ಲಿ ಹೋಗ್ತಿರೋದ್ಯಾಕೆ ಎಂದು ಪೂನಂಗೆ ಕೇಳಿದ ಫ್ಯಾನ್ಸ್​!

ಈಗ ವೈರಲ್​ ಆಗಿರೋ ವಿಡಿಯೋದಲ್ಲಿ ಮಾಧುರಿ ದೀಕ್ಷಿತ್​ ಆಂಟಿ ಎಂಬ ಶಬ್ದ ಕೇಳಿ ತುಸು ಇರುಸುಮುರುಸು ಆಗಿದ್ದನ್ನು ನೋಡಬಹುದು. ಅಷ್ಟಕ್ಕೂ ನಟಿ ಹೋಗುತ್ತಿರುವಾಗ ಮಹಿಳೆಯೊಬ್ಬರು ತಮ್ಮ ಚಿಕ್ಕ ಮಗನ ಜೊತೆ ಬರುತ್ತಿದ್ದರು. ಆಗ ಆಂಟಿಗೆ ಹಾಯ್​ ಹೇಳು ಎಂದು ತಮ್ಮ ಮಗನಿಗೆ ಹೇಳಿದ್ದಾರೆ. ಆ ಬಾಲಕನ ವಯಸ್ಸೂ ಹತ್ತರ ಆಸುಪಾಸು. ಮಾಧುರಿಯ ವಯಸ್ಸು 56 ವರ್ಷ. ಆದರೂ ಆಂಟಿ ಎನ್ನುವ ಶಬ್ದ ಕೇಳಿದ ತಕ್ಷಣ ಒಂದು ರೀತಿಯಲ್ಲಿ ಮುಖ ಮಾಡಿದ ನಟಿ, ಕೊನೆಗೆ ಏನನ್ನೋ ಹೇಳಿಕೊಂಡು ವ್ಯಂಗ್ಯವಾಗಿ ನಕ್ಕಿದ್ದಾರೆ. ಆಂಟಿ ಎಂದ ಕಾರಣ, ಬಾಲಕನತ್ತ ತಿರುಗಿಯೂ ಅವರು ನೋಡಲಿಲ್ಲ. 

ಆರಂಭದಲ್ಲಿ ಹಲೋ ಎಂದು ಬಾಲಕ ಮತ್ತು ಮಹಿಳೆಯತ್ತ ಮಾಧುರಿ ಕೈಬೀಸಿದ್ದಾರೆ. ಬಳಿಕ ಯಾವಾಗ ಆ ಮಹಿಳೆ ಆಂಟಿಗೆ ಹಾಯ್​ ಎಂದು ಹೇಳಿದ್ದಾರೋ ಆಗ ಒಂದೇ ಕ್ಷಣ ಮಾಧುರಿ ದೀಕ್ಷಿತ್​ ಅವರ ಮುಖ ಬಾಡಿದೆ. ಬಾಲಕನತ್ತ ತಿರುಗಿಯೂ ನೋಡದ ಅವರು ಏನನ್ನೋ ಹೇಳಿ ನಕ್ಕಿದ್ದಾರೆ. ಇದಕ್ಕೆ ಥರಹೇವಾಗಿ ಕಮೆಂಟ್ಸ್​ ಬಂದಿವೆ. ಮಹಿಳೆಯರಿಗೆ ಎಷ್ಟೇ ವಯಸ್ಸಾದರೂ ಅವರು ಆಂಟಿ ಆಗಲ್ಲ ಬಿಡಿ, ನಟಿ ಮಾಧುರಿಯಂತೂ ಸದಾ ಯಂಗ್​ ಅವರಿಗೆ ಆಂಟಿ ಎಂದ್ರೆ ಬೇಜಾರು ಆಗದೇ ಇರುತ್ತಾ ಎಂದು ಕೆಲವರು ಪ್ರಶ್ನಿಸಿದರೆ, ಅಬ್ಬಾ ಈ ಹೆಂಗಸರಾ ಎಂದು ಕೆಲವರು ಲೇವಡಿಯನ್ನೂ ಮಾಡಿದ್ದಾರೆ. ಹಾಗೆ ನೋಡಿದರೆ ಅವನ ಅಜ್ಜಿ ನಿಮ್ಮ ವಯಸ್ಸು ಇರ್ಬೋದು ಬಿಡಿ ಮೇಡಂ ಅಂತಾನೂ ಟ್ರೋಲ್​  ಮಾಡುತ್ತಿದ್ದಾರೆ ತರ್ಲೆಗಳು. 
 

ಡ್ರೆಸ್​ನಿಂದ ಉದುರಿದ ಹೂವು, ಎಲೆಗಳು... ಅಬ್ಬಬ್ಬಾ ಉರ್ಫಿಗೆ ಉರ್ಫಿನೇ ಸಾಟಿ ಕಣ್ಲಾ ಅಂತಿದ್ದಾರೆ ಫ್ಯಾನ್ಸ್​..

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?