
ಬಾಲಿವುಡ್ನ ಖ್ಯಾತ ನಟ ಗೋವಿಂದ ಅವರ ಸೊಸೆ ಅಂದರೆ ಅಕ್ಕನ ಮಗಳು, ಕಿರುತೆರೆ ನಟಿ ನಟಿ ರಾಗಿಣಿ ಖನ್ನಾ (Ragini Khanna) ಕಳೆದ ಕೆಲವು ದಿನಗಳಿಂದ ಭಾರಿ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ, ಅವರು ಹಿಂದೂ ಧರ್ಮ ಬಿಟ್ಟು ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿರುವುದಾಗಿ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಮತಾಂತರ ಗೊಂಡ ಒಂದೇ ದಿನಕ್ಕೆ ಅವರು ವಾಪಸ್ಸು ಹಿಂದೂ ಧರ್ಮಕ್ಕೆ ಬಂದಿದ್ದಾರೆ ಎಂದು ಹೇಳಲಾಗಿತ್ತು. ಈ ಕುರಿತಂತೆ ನಟಿ ಈಗ ಸ್ಪಷ್ಟನೆ ನೀಡಿದ್ದಾರೆ. ತಮ್ಮಿಂದ ಚಿಕ್ಕ ಎಡವಟ್ಟಾಗಿರುವ ಬಗ್ಗೆ ಅವರು ಹೇಳಿಕೊಂಡಿದ್ದಾರೆ.
ಅಂದಹಾಗೆ ನಟಿ, ಹಿಂದಿಯ ‘ಸಸುರಾಲ್ ಗೇಂಡಾ ಫೂಲ್’ ಮತ್ತು ‘ಭಾಸ್ಕರ್ ಭಾರ್ತಿ’ ಧಾರಾವಾಹಿ ಮೂಲಕ ಖ್ಯಾತಿ ಗಳಿಸಿದವರು. 2008ರಲ್ಲಿ ಕಿರುತೆರೆ ಪ್ರವೇಶಿಸಿದ ನಟಿ ‘ರಾಧಾ ಕಿ ಬೇಟಿಯಾ ಕುಚ್ ಕರ್ದಿಕಾಯೇಂಗಿ’ ಧಾರಾವಾಹಿ ಮೂಲಕ ಅವರು ಫೇಮಸ್ ಆದರು. ರಾಗಿಣಿ ಅವರು ‘ಸಸುರಾಲ್ ಗೇಂಡಾ ಫೂಲ್ 2’ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ನಟಿಯ ಹೆಸರು ಕೇಳದೇ ಇರುವವರು ಕೂಡ ಈಗ ಮತಾಂತರದ ಕುರಿತು ಚರ್ಚಿಸುತ್ತಿದ್ದಾರೆ. ಖುದ್ದು ನಟಿಯೇ ತಾವು ವಾಪಸ್ ಬಂದಿರುವ ವಿಷಯವನ್ನು ಹೇಳಿರುವುದಾಗಿ ಸುದ್ದಿಯಾಗಿತ್ತು. ಈ ಎಡವಟ್ಟು ಆಗಿದ್ದು ಹೇಗೆ ಎನ್ನುವುದನ್ನು ರಾಗಿಣಿ ಸ್ಪಷ್ಟಪಡಿಸಿದ್ದಾರೆ. ಅಂದರೆ ತಾವು ಮತಾಂತರ ಆಗಿರುವ ಸುದ್ದಿ ಸುಳ್ಳು, ಆದರೆ ಈ ಸುದ್ದಿ ಹರಡಲು ತಮ್ಮಿಂದ ಆದ ಚಿಕ್ಕ ಎಡವಟ್ಟು ಕಾರಣ ಎಂದಿದ್ದಾರೆ.
ನಿಜಕ್ಕೂ ಈ ಹಾಟ್ ಬ್ಯೂಟಿ ಅದೇ ಜಾಹೀರಾತಿನ ಬಾಲಕಿನಾ? ಊಹಿಸಲು ಸಾಧ್ಯವೇ ಇಲ್ಲ ನೋಡಿ..!
ಇದನ್ನು ರಾಗಿಣಿ ಖನ್ನಾ ಸುಳ್ಳು ಎಂದಿದ್ದಾರೆ. ಈ ರೀತಿ ಆಗಲು ಅವರು ಮಾಡಿದ ಎಡವಟ್ಟು ಕಾರಣ ಎಂದು ಹೇಳಿದ್ದಾರೆ. ದೈನಿಕ್ ಭಾಸ್ಕರ್ ಮಾಧ್ಯಮಕ್ಕೆ ಸಂದರ್ಶನ ನೀಡಿರೋ ನಟಿ, ನಾನು ಇತ್ತೀಚೆಗೆ ಅಭಿಮಾನಿಗಳ ಪೋಸ್ಟ್ಗಳನ್ನು ರೀಪೋಸ್ಟ್ ಮಾಡುತ್ತಿದ್ದೇನೆ. ಹೀಗೆ ರೀ ಪೋಸ್ಟ್ ಮಾಡುವ ಭರದಲ್ಲಿ ಈ ಮತಾಂತರದ ಕುರಿತು ಅಭಿಮಾನಿಯೊಬ್ಬ ಹಾಕಿದ್ದ ಪೋಸ್ಟ್ ಅನ್ನು ಸರಿಯಾಗಿ ಗಮನಿಸದೇ ರೀ ಪೋಸ್ಟ್ ಮಾಡಿಬಿಟ್ಟೆ. ಅದರಲ್ಲಿ ಮತಾಂತರಗೊಂಡು ಬಳಿಕ ವಾಪಸಾದೆ ಎಂದು ವರದಿಯಾಗಿತ್ತು. ಅದನ್ನು ನಾನು ಗಮನಿಸದೇ ಪೋಸ್ಟ್ ಮಾಡಿರುವ ಕಾರಣ ಹೀಗಾಯಿತು ಎಂದಿದ್ದಾರೆ. ‘ನನಗೆ ಲಕ್ಷಾಂತರ ಅಭಿಮಾನಿಗಳು ಇದ್ದಾರೆ. ಯಾರೋ ಒಬ್ಬವನು ಮಾಡಿದ ತಪ್ಪಿನಿಂದ ನಾನು ನನ್ನ ಎಲ್ಲಾ ಅಭಿಮಾನಿಗಳನ್ನು ದೂಷಿಸಲಾರೆ. ನನ್ನ ಅಭಿಮಾನಿಗಳು ನನಗೆ ತುಂಬಾನೇ ನಿಷ್ಠಾವಂತರಾಗಿದ್ದಾರೆ. ಹೀಗಾಗಿ ನಾನು ಅವರನ್ನು ಗೌರವಿಸುತ್ತೇನೆ’ ಎಂದಿದ್ದಾರೆ.
ಕಲಾವಿದರ ಸದಾ ಎಚ್ಚರಿಕೆಯಿಂದ ಇರಬೇಕು. ನಾನು ಈ ಬಗ್ಗೆ ಈಗ ಕಲಿತಿದ್ದೇನೆ. ಫ್ಯಾನ್ಸ್ ಪೋಸ್ಟ್ ನೊಡದೇ ರೀಪೋಸ್ಟ್ ಮಾಡಿದರೆ ಆಗುವ ಎಡವಟ್ಟು ಏನೆಂದು ಎಲ್ಲರೂ ತಿಳಿದುಕೊಳ್ಳಬೇಕಿದೆ ಎಂದಿದ್ದಾರೆ. ನಾನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುತ್ತೇನೆ ಎನ್ನುವ ಫೇಕ್ ಪೋಸ್ಟ್ನ ಅಭಿಮಾನಿಯೋರ್ವ ಪೋಸ್ಟ್ ಮಾಡಿದ್ದೂ ಅಲ್ಲದೇ ಕೊಲಾಬರೇಷನ್ಗೆ ರಿಕ್ವೆಸ್ಟ್ ಕೂಡ ಕಳುಹಿಸಿದ್ದ. ಅದನ್ನು ಗಮನಿಸದೇ ನಾನು ಅಕ್ಸೆಪ್ಟ್ ಮಾಡಿಬಿಟ್ಟೆ. ನಾನೀಗ ಅದನ್ನು ಡಿಲೀಟ್ ಮಾಡಿದ್ದು ರಿಪೋರ್ಟ್ ಕೂಡ ಮಾಡಿದ್ದೇನೆ ಎಂದಿದ್ದಾರೆ. ಅಂದಹಾಗೆ ಪೋಸ್ಟ್ನಲ್ಲಿ, ‘ನಾನು ರಾಗಿಣಿ ಖನ್ನಾ. ನಾನು ಹಿಂದೂ ಧರ್ಮವನ್ನು ತ್ಯಜಿಸಿ ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ್ದೇನೆ. ಆದರೆ ಈಗ ನಾನು ಕಟ್ಟಾ ಹಿಂದೂ ಆಗಿಬಿಟ್ಟಿದ್ದೇನೆ. ನಾನು ಹಿಂದೂ ಸಂಪ್ರದಾಯಸ್ಥನಾಗುವತ್ತ ಸಾಗಿದ್ದೇನೆ’ ಎಂದು ಬರೆಯಲಾಗಿತ್ತು. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗಿದ್ದಕ್ಕೆ ಅವರು ಕ್ಷಮೆ ಕೇಳಿದ ರೀತಿ ಪೋಸ್ಟ್ ಇತ್ತು. ಸನಾತನ ಧರ್ಮವೇ ಶ್ರೇಷ್ಠವೆಂದು ಅದರಲ್ಲಿ ಉಲ್ಲೇಖವಾಗಿತ್ತು.
ಯಶ್ ಟಾಕ್ಸಿಕ್ ಚಿತ್ರದಿಂದ ನಟಿ ಕರೀನಾ ಕಪೂರ್ ಔಟ್! ಬಾಲಿವುಡ್ ಬೆಡಗಿಗೆ ಆಗಿದ್ದೇನು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.