ಪತ್ನಿಯ ಬೋಲ್ಡ್ ಫೋಟೋ ಶೇರ್ ಮಾಡಿದ ವಿಘ್ನೇಶ್; ನಯನತಾರಾ ಮಾಂಗಲ್ಯ ನೋಡಿ ಗ್ರೇಟ್ ಎಂದ ಫ್ಯಾನ್ಸ್

First Published | Aug 17, 2022, 1:35 PM IST

ಸೌತ್ ಸ್ಟಾರ್ ನಟಿ ನಯನತಾರಾ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಜೊತೆಯಗೂ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ. ಹೌದು, ನಯನತಾರಾ ಮತ್ತು ವಿಘ್ನೇಶ್ ಇಬ್ಬರು ವಿದೇಶಕ್ಕೆ ಹಾರದ್ದಾರೆ. ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿರುವ ನಯನತಾರಾ ಮತ್ತು ವಿಘ್ನೇಶ್ ಸದ್ಯ ವಿದೇಶಿ ಪ್ರವಾಸ ಮಜಾ ಮಾಡುತ್ತಿದ್ದಾರೆ. 

Nayanthara

ಸೌತ್ ಸ್ಟಾರ್ ನಟಿ ನಯನತಾರಾ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಜೊತೆಯಗೂ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ. ಹೌದು, ನಯನತಾರಾ ಮತ್ತು ವಿಘ್ನೇಶ್ ಇಬ್ಬರು ವಿದೇಶಕ್ಕೆ ಹಾರದ್ದಾರೆ. ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿರುವ ನಯನತಾರಾ ಮತ್ತು ವಿಘ್ನೇಶ್ ಸದ್ಯ ವಿದೇಶಿ ಪ್ರವಾಸ ಮಜಾ ಮಾಡುತ್ತಿದ್ದಾರೆ. 

ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತಿಗಳಿಸಿರುವ ನಟಿ ನಯನತಾರಾ ಮತ್ತು ಪತಿ ವಿಘ್ನೇಶ್ ಶಿವನ್ ಸ್ಪೇನ್ ನಲ್ಲಿದ್ದಾರೆ. ಮದುವೆ ಬಳಿಕ ಎರಡನೇ ಬಾರಿ ಹಿನಿಮೂನ್ ಪ್ರವಾಸಕ್ಕೆ ತೆರಳಿರುವ ನಯನತಾರಾ ದಂಪತಿ ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

Tap to resize

ಸ್ಪೇನ್ ಪ್ರವಾಸ ಎಂಜಾಯ್ ಮಾಡುತ್ತಿರುತ್ತಿರುವ ನಯನತಾರಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ವಿಘ್ನೇಶ್ ಶಿವನ್ ಶೇರ್ ಮಾಡಿರುವ ಪತ್ನಿಯ ಹಾಟ್ ಫೋಟೋ ಪಡ್ಡೆಗಳ ನಿದ್ದೆ ಗೆಡಿಸಿದೆ. ನಯನತಾರಾ ಬೋಲ್ಡ್ ಲುಕ್‌ಗೆ ನೆಟ್ಟಿಗರಿಂದ ಮೆಚ್ಚುಗೆಯ ಕಾಮೆಂಟ್ ಮತ್ತು ಹಾರ್ಟ್ ಇಮೋಜಿ ಹರಿದುಬರುತ್ತಿದೆ. 
 

ಅಂದಹಾಗೆ ವಿಘ್ನೇಶ್ ಶೇರ್ ಮಾಡಿರುವ ಪತ್ನಿ ನಯನತಾರಾ ಫೋಟೋದಲ್ಲಿ ಮಾಂಗಲ್ಯ ಸರ ಎದ್ದು ಕಾಣುತ್ತಿದೆ. ಮಾಂಗಲ್ಯ ನೋಡಿದ ಅಭಿಮಾನಿಗಳು ಇನ್ನು ಮಾಂಗಲ್ಯ ಸರ ಧರಿಸಿದ್ದೀರಾ ಗ್ರೇಟ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಮಾಂಗಲ್ಯ ಹಾಕಿದ್ದೀರಾ ಸಂತಸವಾಯಿತು ಎಂದು ಕಾಮೆಂಟ್ ಮಾಡುತ್ತಿದ್ದಾರೆ. 
 

ವಿದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಿರುವ ನಯನತಾರಾ ದಂಪತಿ ಬಾವುಟ ಹಿಡಿದಿರುವ ಫೋಟೋವನ್ನು ಶೇರ್ ಮಾಡಿದ್ದರು. ಇಬ್ಬರ ದೇಶಪ್ರೇಮದ ಫೋಟೋಗೆ ಅಭಿಮಾನಿಗಳಿಂದ ಮೆಚ್ಚುಗೆಯ ಕಾಮೆಂಟ್ ಹರಿದುಬಂದಿತ್ತು. 

ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಜೂನ್ 9ರಂದು ಚೆನ್ನೈನ ಮಹಾಬಲಿಪುರಂನಲ್ಲಿ ಅದ್ದೂರಿಯಾಗಿ ಹಸೆಮಣೆ ಏರಿದ್ದರು. ಇಬ್ಬರ ಮದುವೆಗೆ ಅನೇಕ ಸಿನಿ ಸೆಲೆಬ್ರಿಟಿಗಳು ಹಾಜರಾಗಿದ್ದರು. ರಜನಿಕಾಂತ್, ಶಾರುಖ್ ಖಾನ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು. 

ನಯನತಾರಾ ಸದ್ಯ ತಮಿಳು ಸಿನಿಮಾ ಜೊತೆಗೆ ಬಾಲಿವುಡ್ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ಬಾಲಿವುಡ ನಲ್ಲಿ ಶಾರುಖ್ ಖಾನ್ ಜೊತೆ ಜವಾನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಮಿಳು ನಿರ್ದೇಶಕ ಅಟ್ಲೀ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಟೀಸರ್ ರಿಲೀಸ್ ಆಗಿದೆ. ಶಾರುಖ್ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. 

ತಮಿಳಿನಲ್ಲಿ ನಯನತಾರಾ ಇರೈವನ್, ಕನೆಕ್ಟ್, ಲೇಡಿ ಸೂಪರ್ ಸ್ಟಾರ್ ಹಾಗೂ ತೆಲುಗಿನಲ್ಲಿ ಗಾಡ್ ಫಾದರ್ ಮಲಯಾಳಂನಲ್ಲಿ ಗೋಲ್ಡ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಬಹುಭಾಷ ನಟಿ ನಯನತಾರಾ ಅವರನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.   

Latest Videos

click me!