ಬೆಂಗಳೂರು: ಗಂಡನನ್ನು ಬಿಟ್ಟು ತನ್ನ ಜೊತೆ ಬಾರದ ಮಹಿಳೆ ಕೊಂದು ಪ್ರಿಯಕರನೂ ಆತ್ಮಹತ್ಯೆ

By Girish Goudar  |  First Published Dec 12, 2024, 11:15 PM IST

ಗಂಡನನ್ನ ತೊರೆದು ತನ್ನೊಂದಿಗೆ ಬರದಿದಕ್ಕೆ ಸಿಟ್ಟಿನಿಂದ‌ ಮೊವುಹಾ ಮಂಡಲ್‌ಳನ್ನ ಮಿಥುನ್ ಮಂಡಲ್ ಕೊಲೆ ಮಾಡಿದ್ದಾನೆ. ಮದುವೆಗೆ ನಿರಾಕರಿಸಿದ ವಿವಾಹಿತೆ ಮಹಿಳೆಯನ್ನ ಚಾಕುವಿನಿಂದ ಇರಿದು ಮಿಥುನ್ ಹತ್ಯೆ ಮಾಡಿದ್ದಾನೆ. ಬಳಿಕ ಬಂಧನ ಭೀತಿಯಿಂದ ಮರವೊಂದಕ್ಕೆ ತಾನು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. 
 


ಬೆಂಗಳೂರು(ಡಿ.12): ವಿವಾಹಿತ ಮಹಿಳೆಯನ್ನ ಕೊಂದು ಪ್ರಿಯಕರ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ  ವೈಟ್ ಫಿಲ್ಡ್ ಪೊಲೀಸ್ ಠಾಣಾ ವ್ಯಾಪ್ತಿ ನಲ್ಲೂರ ಹಳ್ಳಿಯಲ್ಲಿ ಇಂದು(ಗುರುವಾರ) ನಡೆದಿದೆ. ಮೊವುಹಾ ಮಂಡಲ್ (26) ಹತ್ಯೆಯಾದ ವಿವಾಹಿತೆ, ಮಿಥುನ್ ಮಂಡಲ್ (40) ಆತ್ಮಹತ್ಯೆಗೆ ಶರಣಾದ ದುರ್ದೈವಿ. 

ಗಂಡನನ್ನ ತೊರೆದು ತನ್ನೊಂದಿಗೆ ಬರದಿದಕ್ಕೆ ಸಿಟ್ಟಿನಿಂದ‌ ಮೊವುಹಾ ಮಂಡಲ್‌ಳನ್ನ ಮಿಥುನ್ ಮಂಡಲ್ ಕೊಲೆ ಮಾಡಿದ್ದಾನೆ. ಮದುವೆಗೆ ನಿರಾಕರಿಸಿದ ವಿವಾಹಿತೆ ಮಹಿಳೆಯನ್ನ ಚಾಕುವಿನಿಂದ ಇರಿದು ಮಿಥುನ್ ಹತ್ಯೆ ಮಾಡಿದ್ದಾನೆ. ಬಳಿಕ ಬಂಧನ ಭೀತಿಯಿಂದ ಮರವೊಂದಕ್ಕೆ ತಾನು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. 

Tap to resize

Latest Videos

ಹಾಸನ: ಸಾಲದ ಶೂಲಕ್ಕೆ ಭಯಪಟ್ಟು ದಂಪತಿ ಆತ್ಮಹತ್ಯೆ

ಈ ಸಂಬಂಧ ಹತ್ಯೆ ಹಾಗೂ ಆತ್ಮಹತ್ಯೆ ಪ್ರಕರಣಗಳನ್ನ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಇಬ್ಬರೂ ಪಶ್ಚಿಮ ಬಂಗಾಳ ಮೂಲದವರಾಗಿದ್ದಾರೆ.  ಮಿಥುನ್ ಕಳೆದ ಏಳೆಂಟು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ, ಮೊಹುವಾ ಹೌಸ್ ಕೀಪಿಂಗ್ ಹಾಗೂ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದಳು. ಮಿಥುನ್  ವೈಟ್ ಫೀಲ್ಡ್ ನ ಪ್ರಶಾಂತ್ ಲೇಔಟ್‌ನ ಪಿಜಿಯೊಂದರಲ್ಲಿ ನೆಲೆಸಿದ್ದ,  ಕೆಲ ತಿಂಗಳ ಹಿಂದಷ್ಟೇ ಮೋವುಹಾ ಮಂಡಲ್‌ನ ಪರಿಚಯವಾಗಿತ್ತು. ಈಕೆಯೂ ಕೂಡ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದಳು. ಮೊಹುವಾ ಐಟಿಪಿಎಲ್ ಬಳಿಯಲ್ಲಿ ವಾಸವಾಗಿದ್ದಳು. 

undefined

ಆರು ತಿಂಗಳ ಹಿಂದೆ ಪರಿಚಿತರಾಗಿದ್ದ ಮೋವುಹಾ ಮಂಡಲ್‌ಗೆ ತನ್ನನ್ನ ಪ್ರೀತಿಸುವಂತೆ ಮಿಥುನ್‌ ಕೇಳಿಕೊಂಡಿದ್ದನಂತೆ. ತನಗೆ ಮದುವೆಯಾಗಿದೆ ಎಂದು ಹೇಳಿದರೂ ಗಂಡನನ್ನ ತೊರೆದು ತನ್ನ ಜೊತೆಯಿರುವಂತೆ ಮಿಥುನ್ ಒತ್ತಡ ಹೇರಿದ್ದನು. ಈತನ ಒತ್ತಡಕ್ಕೆ ಮಣಿಯದೆ ಆತನೊಂದಿಗೆ ಮೋವುಹಾ ಮಂಡಲ್ ಗಲಾಟೆ ಮಾಡಿಕೊಂಡಿದ್ದಳು. ಮಿಥುನ್ ಇದರಿಂದ ತಲೆಕೆಡಿಸಿಕೊಂಡು ಕೆಲಸಕ್ಕೆ ಹೋಗುತ್ತಿರಲಿಲ್ಲ. ಖರ್ಚಿಗಾಗಿ ಸ್ನೇಹಿತರಿಂದ ಕೈಸಾಲ ಪಡೆದಿದ್ದ. ಪ್ರೀತಿಸಿದ್ದ ವಿವಾಹಿತೆಯನ್ನ ಒಲಿಸಿಕೊಳ್ಳಲು ವಿಫಲವಾಗಿ ಆಕೆಯ ಮೇಲೆ ಹಗೆತನ ಸಾಧಿಸಿದ್ದ. 

ಮಿಥುನ್ ಆಕೆಯನ್ನ ಸಾಯಿಸುವ ಸಂಚು ರೂಪಿಸಿದ್ದನು. ಬುಧವಾರ ರಾತ್ರಿ ಆಕೆ ಮನೆಯಲ್ಲಿ ಯಾರು ಇಲ್ಲದಿರುವಾಗ ಹೋಗಿ ಚಾಕುವಿನಿಂದ ಕುತ್ತಿಗೆ ಕೊಯ್ದು ಹತ್ಯೆ ಮಾಡಿ ಪರಾರಿಯಾಗಿದ್ದನು. ಪ್ರಕರಣ ದಾಖಲಿಸಿಕೊಂಡ ಆರೋಪಿಗಾಗಿ ರಾತ್ರಿಯಿಡಿ ಪೊಲೀಸರು ಶೋಧ ನಡೆಸಿದ್ದರು. 

ಇಂದು ಬೆಳಗ್ಗೆ ನಲ್ಲೂರಹಳ್ಳಿ ಕೆರೆಯ ಮರವೊಂದಕ್ಕೆ ಮಿಥುನ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋದು ಪತ್ತೆಯಾಗಿದೆ. ಈ ಸಂಬಂಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ತುಮಕೂರು: ಪ್ರೀತಿಸಿದ ಹುಡುಗಿ ಮನೆ ಮುಂದೆಯೇ ಯುವಕ ಆತ್ಮಹತ್ಯೆ, ಕಾರಣ?

ಮೊಹುವಾ ಮತ್ತು ಹರಿಪಾದ ಮಂಡಲ್ 2017ರಲ್ಲಿ ಮದುವೆಯಾಗಿದ್ದರು. 2021ರಲ್ಲಿ ಕೆಲಸಕ್ಕೆಂದು ದಂಪತಿ ಬೆಂಗಳೂರಿಗೆ ಬಂದಿದ್ದರು. ಮೊಹುವಾ ಸ್ಥಳೀಯ ಕಾಲೇಜಿನಲ್ಲಿ ಹೌಸ್ ಕೀಪಿಂಗ್ ಕೆಲಸಕ್ಕಿದ್ದಳು. ಅದೇ ಕಾಲೇಜಿನಲ್ಲಿ ಮಿಥುನ್ ಕೂಡ ಹೌಸ್ ಕೀಪಿಂಗ್ ಸೂಪರ್ ವೈಸರ್ ಆಗಿದ್ದ. ಆದ್ರೆ ಗಂಡ & ಮಗು ಬಿಟ್ಟು ತನ್ನೊಂದಿಗೆ ಬರುವಂಥೆ ಮಿಥುನ್ ಒತ್ತಾಯಿಸುತ್ತಿದ್ದನು. 

ಈ ವಿಚಾರ ಗೊತ್ತಾಗಿ ಕಾಲೇಜು ಆಡಳಿತ ಮಂಡಳಿ ಮಿಥುನ್‌ನನ್ನ ಕೆಲಸದಿಂದ ತೆಗೆದುಹಾಕಿತ್ತು. ಬಳಿಕ ಮೊಹುವಾ ಕೂಡ ಕಾಲೇಜಿನಲ್ಲಿ ಕೆಲಸ ಬಿಟ್ಟಿದ್ದಳು. ಆದ್ರೂ ಮೊಹುವಾಗೆ ಕರೆ ಮಾಡಿ ತೊಂದರೆ ಕೊಡುತ್ತಿದ್ದ, ನಿನ್ನೆ ರಾತ್ರಿ ಮಿಥುನ್ ಮೊಹುವಾ ಮನೆ ಬಳಿ ಬಂದಿದ್ದನು. ಮೊಹುವಾ ಕತ್ತು ಕೊಯ್ದು, ಹೊಟ್ಟೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದನು. ಮನೆಯ ಹೊರಗಡೆಯೇ ಕೊಲೆ ಮಾಡಿ ಮಿಥುನ್ ಎಸ್ಕೇಪ್ ಆಗಿದ್ದ. ಬಂಧನದ ಭೀತಿಯಿಂದ ಮರವೊಂದಕ್ಕೆ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪಟ್ಟಂದೂರು ಅಗ್ರಹಾರದ ಐಟಿಪಿಎಲ್ ಹಿಂದಿನ ಗೇಟ್ ರಸ್ತೆ ಮನೆಯಲ್ಲಿ ಕೊಲೆ ನಡೆದಿದೆ. 

click me!