ಲಸಿಕೆಗೆ ಸ್ಪೋರ್ಟ್ಸ್ ಬ್ರಾ ಧರಿಸಿದ ಮಲೈಕಾ ಸಿಕ್ಕಾಪಟ್ಟೆ ಟ್ರೋಲ್ !

First Published | Jul 3, 2021, 10:42 AM IST

ಬಾಲಿವುಡ್‌ನ ಮಾಡೆಲ್‌ ಕಮ್‌ ನಟಿ ಮಲೈಕಾ ಅರೋರಾ ಸದಾ ಸುದ್ದಿಯಾಗುತ್ತಿರುತ್ತಾರೆ. ಇತ್ತೀಚೆಗೆ ಮಲೈಕಾ ಎರಡನೇ ಡೋಸ್‌ ಕೋವಿಡ್‌ ವ್ಯಾಕ್ಸಿನೇಷನ್‌ ತೆಗೆದುಕೊಂಡ ಫೋಟೋವನ್ನು ಶೇರ್‌ ಮಾಡಿಕೊಂಡಿದ್ದಾರೆ. ಈ ಸಮಯದಲ್ಲಿ ಅವರು ಧರಿಸಿದ್ದ ಡ್ರೆಸ್‌ ನೆಟ್ಟಿಗರ ಅಸಮಾಧಾನಕ್ಕೆ ಗುರಿಯಾಗಿದೆ.ವ್ಯಾಕ್ಸಿನೇಷನ್‌ಗೆ ಸ್ಪೋರ್ಟ್ಸ್ ಬ್ರಾ ಧರಿಸಿದ್ದ ಮಲೈಕಾರನ್ನು ಸಿಕ್ಕಾಪಟ್ಟೆ ಟ್ರೋಲ್‌ ಮಾಡಲಾಗುತ್ತಿದೆ.  

ಬಾಲಿವುಡ್ ದಿವಾ ಮಲೈಕಾ ಅರೋರಾ ಇತ್ತೀಚೆಗೆ ಕೋವಿಡ್ 19 ಲಸಿಕೆಯ ಎರಡನೇ ಡೋಸ್‌ಪಡೆದರು. ಈ ಸಮಯದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
undefined
'ನಾನು ನನಗಾಗಿ ಮಾತ್ರವಲ್ಲ, ನಿಮಗೂ ಸೇಫ್‌ ಆಗಿದ್ದೇನೆ. ಫುಲ್ಲಿ ವ್ಯಾಕ್ಸಿನೇಟೇಡ್‌. ಅಲ್ಲಿರುವ ಪ್ರತಿಯೊಬ್ಬ ಫ್ರಂಟ್‌ಲೈನ್‌ ವಾರಿಯರ್‌ಗೆ ಕೃತಜ್ಞತೆ ಸಲ್ಲಿಸಲು ಯಾವುದೇ ಪದಗಳಿಲ್ಲ. ಎಲ್ಲರಿಗೂ ಧನ್ಯವಾದಗಳು' ಎಂದು ಫೋಟೋ ಜೊತೆ ಬರೆದಿದ್ದಾರೆ.
undefined

Latest Videos


ಈ ಸಮಯದಲ್ಲಿ ನಟಿ ಧರಿಸಿದ್ದ ಕಪ್ಪು ಜಿಮ್ ಡ್ರೆಸ್‌ ಕಾರಣಕ್ಕಾಗಿ ಸಖತ್‌ ಟ್ರೋಲ್ ಆಗಿದ್ದಾರೆ.
undefined
ಕಪ್ಪು ರೀಬಾಕ್ ಸ್ಪೋರ್ಟ್ಸ್ ಬ್ರಾ ಮತ್ತು ಬ್ಯಾಕ್‌ಟ್ರಾಕ್ ಪ್ಯಾಂಟ್‌ ಹಾಗೂ ಜಾಕೆಟ್ ತೊಟ್ಟಿದ್ದರು. ಆದರೆ ಲಸಿಕೆ ತೆಗೆದುಕೊಳ್ಳುವಾಗ ಜಾಕೆಟ್‌ ತೆಗೆದರು.
undefined
ಲಸಿಕೆ ಡ್ರೈವ್‌ಗೆ ಜಿಮ್ ಡ್ರೆಸ್‌ ಹಾಕುತ್ತಾರಾ? ಎಂದು ಒಬ್ಬರು ಕಾಮೆಂಟ್‌ ಮಾಡಿದರೆ, ಇನ್ನೊಬ್ಬರು ವ್ಯಾಕ್ಸಿನೇಷನ್‌ಗಾಗಿ ನೀವು ನಿಮ್ಮ ಆಸ್ತಿಗಳನ್ನು ತೋರಿಸಬೇಕಾ? ಇಲ್ಲದಿದ್ದರೆ ಅವರು ವ್ಯಾಕ್ಸಿನೇಷನ್ ಮಾಡುವುದಿಲ್ಲವಾ? ಎಂದು ಕೇಳಿದ್ದಾರೆ.
undefined
'ವ್ಯಾಕ್ಸಿನೇಷನ್‌ಗೆಈ ರೀತಿ ಬಟ್ಟೆಗಳ ಆಯ್ಕೆ ಸರಿಯಲ್ಲ', 'ಲಸಿಕೆ ಪಡೆಯಲು ಯಾರು ಅಂತಹ ಬಟ್ಟೆಗಳನ್ನು ಧರಿಸುತ್ತಾರೆ?',ಇಲ್ಲಿಯೂ ಸಹ? ಏಕೆ? ಯಾವಾಗಲಾದರೂ ಯೋಗ್ಯವಾದ ಬಟ್ಟೆ ಧರಸಿ' ಎಂದಿದ್ದಾರೆ ನೆಟಿಜನ್ಸ್‌.
undefined
'ನಿಮ್ಮ ವಾರ್ಡ್ರೋಬ್‌ನಲ್ಲಿ ಇದಕ್ಕಾಗಿ ಧರಿಸಲು ನಿಮಗೆ ಬೇರೆ ಏನೂ ಇರಲಿಲ್ಲವೇ?' 'ಹೆಚ್ಚು ಸೂಕ್ತವಲ್ಲದ ಬಟ್ಟೆಯ ಆಯ್ಕೆ' .
undefined
ಹೀಗೆ ಅನೇಕ ಸೋಷಿಯಲ್ ಮೀಡಿಯಾ ಬಳಕೆದಾರರುನಟಿಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.
undefined
click me!