'ಚಂದ್ರನ ಬೆಳಕಲ್ಲಿ ನನ್ನ ಭೇಟಿ ಮಾಡಿ' ಎಂದು ಹಾಟ್ ಫೋಟೋ ಹಂಚಿಕೊಂಡ ನಟಿ ಜಾನ್ವಿ

First Published Dec 10, 2022, 1:09 PM IST

ನಟಿ ಜಾನ್ವಿ ಕಪೂರ್ ಸದ್ಯ ಮಾಲ್ಡೀವ್ಸ್ ಪ್ರವಾಸದಲ್ಲಿದ್ದಾರೆ. ಸಿಕ್ಕಾಪಟ್ಟೆ ಹಾಟ್ ಫೋಟೋಗಳನ್ನು ಶೇರ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

ಜಾನ್ವಿ ಕಪೂರ್ ಹೆಚ್ಚಾಗಿ ಮಾಲ್ಡೀವ್ಸ್ ನಲ್ಲಿ ಕಾಣಿಸಿಕೊಳ್ಳುತ್ತಾರೆ. ಸೆಲೆಬ್ರಿಟಿಗಳ ನೆಚ್ಚಿನ ತಾಣ ಮಾಲ್ಡೇವ್ಸ್‌ಗೆ ಜಾನ್ವಿ ಆಗಾಗ ಪ್ರವಾಸಕ್ಕೆ ಹೋಗುತ್ತಿರುತ್ತಾರೆ. ಸದ್ಯ  ಶೂಟಿಂಗ್‌ನಿಂದ ಬಿಡುವು ಮಾಡಿಕೊಂಡು, ಮಾಲ್ಡೀವ್ಸ್‌ನಲ್ಲಿ ರಜೆಯನ್ನು ಆನಂದಿಸುತ್ತಿದ್ದಾರೆ ಜಾನ್ವಿ. 

ಮಾಲ್ಡೀವ್ಸ್ ಹೋದ ಮೇಲೆ ಬಿಕಿನಿ ಫೋಟೋ ಶೇರ್ ಮಾಡದೆ ಇರಲು ಸಾಧ್ಯನಾ. ಜಾನ್ವಿ ಒಂದಿಷ್ಟು ಹಾಟ್ ಆಂಡ್ ಬೋಲ್ಡ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಬಿಕಿನಿಯಲ್ಲಿ  ಮಸ್ತ್ ಪೋಸ್ ನೀಡಿರುವ ಜಾನ್ವಿ ಫೋಟೋಗಳು ಸಾಮಾಜಿಕ ಜಾಲಾತಣದಲ್ಲಿ ವೈರಲ್ ಆಗಿವೆ. 

ಹಳದಿ ಹಾಟ್ ಬಿಕಿನಿಯಲ್ಲಿ ಜಾನ್ವಿ ತನ್ನ ಟೋನ್ ಫಿಗರ್‌ ಅನ್ನು ತೋರಿಸುತ್ತಿರುವುದನ್ನು ಕಾಣಬಹುದು. ಅವರು ತೆರೆದ ಕೂದಲು ಮತ್ತು ಯಾವುದೇ ಮೇಕಪ್‌ ಇಲ್ಲದೇ ಸಖತ್ ಬೋಲ್ಡ್‌ ಹಾಗೂ ಮಾದಕವಾಗಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಬಿಕಿನಿ ಫೋಟೋಗಳನ್ನು ಶೇರ್ ಮಾಡಿದ ಬೆನ್ನಲ್ಲೇ ಮತ್ತಷ್ಟು ಫೋಟೋ ಹಂಚಿಕೊಂಡಿದ್ದಾರೆ. 

ಫೋಟೋ ಶೇರ್ ಮಾಡಿ ಚಂದ್ರನ ಬೆಳಕಲ್ಲಿ ನನ್ನ ಭೇಟಿ ಮಾಡಿ ಎಂದು ಕ್ಯಾಪ್ಷನ್ ನೀಡಿದ್ದಾರೆ. ರಾತ್ರಿ ಹೊತ್ತು ಸಮುದ್ರ ತೀರದಲ್ಲಿ ಕುಳಿತಿರುವ ಜಾನ್ವಿ ಚಂದ್ರನ ಬೆಳಕನ್ನು ಎಂಜಾಯ್ ಮಾಡಿದ್ದಾರೆ. ಬಿಳಿ ಬಣ್ಣದ ಡ್ರೆಸ್ ಧರಿಸಿರುವ ಜಾನ್ವಿ ಚಂದ್ರನ ಬೆಳಕಲ್ಲಿ ಹೊಳೆಯುತ್ತಿದ್ದಾರೆ. ಮತ್ತೊಂದು ಫೋಟೋದಲ್ಲಿ ಸಮುದ್ರದ ಕಡೆ ಮುಖ ಮಾಡಿ ನಿಂತಿದ್ದಾರೆ. 
 

ಜಾನ್ವಿ ಫೋಟೋಗಳಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬರುತ್ತಿದೆ. ಬೆಂಕಿ, ಹಾರ್ಟ್ ಇಮೋಜಿ ಇರಿಸಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಸದಾ ಹಾಟ್ ಫೋಟೋಗಳ ಮೂಲಕವೇ ಹೆಚ್ಚು ಸದ್ದು ಮಾಡುವ ಜಾನ್ವಿ ಇದೀಗ ಮಾಲ್ಡೀವ್ಸ್ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ. 

ಜಾನ್ವಿ ಕೊನೆಯದಾಗಿ ಮಿಲಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಈ ವರ್ಷ ಮಿಲಿ ಸಿನಿಮಾ ಜೊತೆಗೆ ಗುಡ್ ಲಕ್ ಜೆರ್ರಿ ಸಿನಿಮಾ ಕೂಡ ರಿಲೀಸ್ ಆಗಿದೆ. ಈ ಎರಡೂ ಸಿನಿಮಾಗಳು ಸಹ ಬಾಕ್ಸ ಆಫೀಸ್ ನಲ್ಲಿ ಹೆಚ್ಚು ಕಮಾಯಿ ಮಾಡಿಲ್ಲ. 

ಜಾನ್ವಿ ಕಪೂರ್ ಇತ್ತೀಚಿನ ದಿನಗಳಲ್ಲಿ ಮಿಸ್ಟರ್ ಅಂಡ್ ಮಿಸಸ್ ಮಹಿ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ರಾಜ್‌ಕುಮಾರ್ ರಾವ್ ಜೊತೆಗಿನ ಈ ಚಿತ್ರ ಕ್ರಿಕೆಟ್ ಆಧಾರಿತವಾಗಿದೆ. ಈ ಸಿನಿಮಾಕ್ಕಾಗಿ ಜಾಹ್ನವಿ ಸಾಕಷ್ಟು ಕ್ರಿಕೆಟ್ ಅಭ್ಯಾಸಗಳನ್ನು ಕೂಡ ಮಾಡುತ್ತಿದ್ದರು. ಈ ಸಿನಿಮಾ ಜೊತೆಗೆ ಬಾವಲ್ ಸಿನಿಮಾದ ಶೂಟಿಂಗ್ ಕೂಡ ಮುಗಿಸಿದ್ದಾರೆ. 

ಜಾನ್ವಿ ಕಪೂರ್ 2018ರಲ್ಲಿ ಧಡಕ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಇಶಾನ್ ಖಟ್ಟರ್ ಜೊತೆಗಿನ ಅವರ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಮಾಡಿದ ನಂತರ ಅವರು ಗಂಜಾನ್ ಸಕ್ಸೇನಾ ದಿ ಕಾರ್ಗಿಲ್ ಗರ್ಲ್, ರೂಹಿ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

click me!