ರಿಲ್ಯಾಕ್ಸ್ ಮೂಡಲ್ಲಿ ಹಾಟ್ ಸುಂದರಿ: ಮಿರ ಮಿರ ಮಿಂಚಿದ ಜಾಕ್ವೆಲಿನ್ ಫೋಟೋ ವೈರಲ್

First Published | May 27, 2023, 5:58 PM IST

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸದ್ಯ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ. ಐಫಾ ಸಮಾರಂಭಕ್ಕೆ ತೆರಳಿರುವ ನಟಿ ಜಾಕ್ವೆಲಿನ್ ಮಸ್ತ್ ಪೋಸ್ ನೀಡಿರುವ ಫೋಟೋಗಳು ವೈರಲ್ ಆಗಿವೆ. 

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸದ್ಯ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕಣದ ಪ್ರಮುಖ ಆರೋಪಿ ಸುಕೇಶ್ ಚಂದ್ರೇಶಕರ್ ಪ್ರಕರಣದಲ್ಲಿ ಜಾಕ್ವೆಲಿನ್ ಕೂಡ ವಿಚಾರಣೆ ಎದಿರಿಸುತ್ತಿದ್ದಾರೆ. ಈ ನಡುವೆ ಜಾಕ್ವೆಲಿನ್ ಅವರ್ಡ್ ಸಂಭ್ರಮದಲ್ಲಿ ಮಿಂಚುತ್ತಿದ್ದಾರೆ. 

IIFA ರಾಕ್ಸ್ 2023 ಪ್ರಾರಂಭವಾಗಿದೆ. ಬಾಲಿವುಡ್‌ ಅನೇಕ ಮಂದಿ ಐಫಾ ಸಮಾರಂಭದಲ್ಲಿ ಮಿಂಚುತ್ತಿದ್ದಾರೆ. ಅಬುಧಾಬಿಯಲ್ಲಿ ಐಫಾ ಅವಾರ್ಡ್ ಕಾರ್ಯಕ್ರಮ ನಡೆಯುತ್ತಿದ್ದು ಈಗಾಗಲೇ ಬಾಲಿವುಡ್ ಮಂದಿ ಅಬುಧಾಬಿ ತಲುಪಿಸಿದ್ದಾರೆ. 
 

Tap to resize

ಈ ಬಾರಿಯ ಐಫಾದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಕೂಡ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಜಾಕ್ವೆಲಿನ್ ಸುಂದರವಾಗಿ ರೆಡಿಯಾಗಿದ್ದು ಕಂಗೊಳಿಸುತ್ತಿದ್ದಾರೆ. 

ಮಿರ ಮಿರ ಮಿಂಚುವ ಮಲ್ಟಿ ಕಲರ್ ಡ್ರೆಸ್ ನಲ್ಲಿ ಜಾಕ್ವೆಲಿನ್ ಗಮನ ಸೆಳೆಯುತ್ತಿದ್ದಾರೆ. ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿ ಇಂದು ರಾತ್ರಿಯ ಕಾರ್ಯಕ್ರಮಕ್ಕೆ ಎಂದು ಟ್ಯಾಗ್ ಲೈನ್ ನೀಡಿದ್ದಾರೆ.

ಹಾಟ್ ಸುಂದರಿಯ ಫೋಟೋಗಳಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದು ಬಂದಿದೆ. ಜಾಕ್ವೆಲಿನ್ ಫೋಟೋ ಶೇರ್ ಮಾಡಿ ಕೆಲವೇ ಕ್ಷಣಕ್ಕೆ ಸಿಕ್ಕಾಪಟ್ಟೆ ಲೈಕ್ಸ್ ಬಂದಿದೆ. 

ಅಂದಹಾಗೆ ಜಾಕ್ವೆಲಿನ್ ಮಿರ ಮಿರ ಮಿಂಚಲು ಸ್ಟೈಲಿಸ್ಟ್ ನಮಿತಾ ಅಲೆಕ್ಸಾಂಡರ್ ಕಾರಣ. ನಮಿತಾ ಅಲೆಕ್ಸಾಂಡರ್ ಡಿಸೈನ್ ಮಾಡಿರುವ ಡ್ರೆಸ್ ಇದಾಗಿದೆ. ವಜ್ರದ ಉಂಗುರ, ಕಿವಿಯೋಲೆ, ಗೋಲ್ಡನ್ ಹೀಲ್ಸ್‌ನೊಂದಿಗೆ ಹೊಳೆಯುತ್ತಿದ್ದಾರೆ. 

Latest Videos

click me!