ಬಾಲಿವುಡ್ ಚಿತ್ರರಂಗದಲ್ಲಿ ಹೊಸ ಫ್ಯಾಷನ್ ಡಿಸೈನ್ ಕಂಡು ಹಿಡಿಯುವುದಲ್ಲದೆ ಕಲ್ಪನೆ ಮಾಡಿಕೊಳ್ಳದ ರೀತಿಯಲ್ಲಿ disaster ಕ್ರಿಯೇಟ್ ಮಾಡುತ್ತಿರುವ ನಟಿ ಉರ್ಫಿ.
ಉರ್ಫಿ ಜಾವೇದ್ ಪ್ರತಿಯೊಂದು ಲುಕ್ ತುಂಬಾನೇ ಬೋಲ್ಡ್ ಆಗಿರುತ್ತದೆ. ಅತಿ ಹೆಚ್ಚು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುವಾಗ ಹೇಗೆ ಮೈನ್ಟೈನ್ ಮಾಡುತ್ತಾಳೆ ಅನ್ನೋದೆ ನೆಟ್ಟಿಗರ ಪ್ರಶ್ನೆ.
ಟ್ರಾನ್ಸಪರೆಂಟ್ ಲುಕ್ ಆಯ್ತು ಆಫ್ ನೇಕೆಡ್ ಆಯ್ತು ಈಗ ಎರಡೂ ಕಾಂಬಿನೇಷನ್ ಸೇರಿಸಿಕೊಂಡು ಹೊಸ ಲುಕ್ ಕ್ರಿಯೇಟ್ ಮಾಡಿದ್ದಾರೆ. ಅದಕ್ಕೆ ಹೂ ಕೂಡ ಸೇರಿಸಿಕೊಂಡಿದ್ದಾರೆ.
ಹೌದು! ಉರ್ಫಿ ಈಗ ಮತ್ತೆ ಟ್ರಾನ್ಸಪರೆಂಟ್ ಬಟ್ಟೆ ಧರಿಸಿ ಮೈ ತುಂಬಾ ಪಿಂಕ್, ಪರ್ಪಲ್, ಎಲ್ಲೋ ಮತ್ತು ವೈಟ್ ಹೂಗಳನ್ನು ಅಂಟಿಸಿಕೊಂಡಿದ್ದಾರೆ.
ಉರ್ಫಿ ಎಲ್ಲಾ ಲುಕ್ ಟ್ರೋಲ್ ಆಗುವಂತೆ ಈ ಲುಕ್ ಕೂಡ ಟ್ರೋಲ್ ಆಗಿದೆ. ಮೈಯಿಂದ ಒಂದು ಹೂ ಕೆಳಗೆ ಬಿದ್ದರೂ ಏನು ಮಾಡುತ್ತೀರಾ? ಎಂದು ಪ್ರಶ್ನಿಸಿದ್ದಾರೆ.
'ಎಷ್ಟು ಜೇನು ಹುಳಗಳು ನಿಮ್ಮ ಮೈ ತುಂಬಿಕೊಂಡಿತ್ತು?, ನಮಗೆ ಬೇಕಿರುವ ಹೂ ಕಿತ್ತುಕೊಳ್ಳಬಹುದಾ?' ಎಂದು ಪಡ್ಡೆ ಹುಡುಗರು ಕಾಮೆಂಟ್ ಮಾಡಿದ್ದಾರೆ.
ಇನ್ನೂ ಕೆಲವರು ಉರ್ಫಿ ನಿನಗೆ ಧೈರ್ಯ ಜಾಸ್ತಿ ಯಾರಿಗೂ ಯಾವ ಕಾಮೆಂಟ್‌ಗೂ ಕೇರ್ ಮಾಡದೆ ನೀನು ಆಯ್ಕೆ ಮಾಡಿಕೊಂಡಿರುವ ಡಿಸೈನ್‌ಗಳು ಡಿಫರೆಂಟ್ ಎಂದಿದ್ದಾರೆ.