ಭಾರತದಲ್ಲಿ ರೈಲು ದೇಶದ ಎಲ್ಲಾ ಭಾಗಕ್ಕೂ ಸಂಪರ್ಕ ಕಲ್ಪಿಸುತ್ತಿದೆ. ಇದರಲ್ಲಿ ಒಂದು ರೈಲು ನಿಲ್ದಾಣದಲ್ಲಿ ಕೆಲ ವಿಶೇಷತೆಗಳಿವೆ. ದೇಶದ ಎಲ್ಲಾ ಪ್ರಮುಖ ನಗರಗಳಿಗೆ ರೈಲು ಸೇವೆ ನೀಡುತ್ತದೆ. 24 ಗಂಟೆ ಯಾವಾಗ ಬೇಕಾದರೂ ಇಲ್ಲಿ ರೈಲು ಲಭ್ಯವಿದೆ. ಒಂದು ದಿನ 197 ರೈಲು ಇಲ್ಲಿ ನಿಲುಗಡೆಯಾಗುತ್ತದೆ.
ನವದೆಹಲಿ(ಡಿ.12) ಭಾರತದ ರೈಲು ವಿಶ್ವದ ಅತೀ ದೊಡ್ಡ ರೈಲು ಸಂಪರ್ಕ ಜಾಲಗಳಲ್ಲಿ ಒಂದು. ಪ್ರತಿ ದಿನ ಲಕ್ಷಾಂತರ ಮಂದಿ ರೈಲು ಮೂಲಕ ಪ್ರಯಾಣಿಸುತ್ತಾರೆ. ಕೈಗೆಟುಕುವ ದರದಲ್ಲಿ ಆರಾಮಾದಾಯಕ ಪ್ರಯಾಣ ರೈಲಿನಲ್ಲಿ ಸಿಗಲಿದೆ. ಇದೀಗ ವಂದೇ ಭಾರತ್ ಸೇರಿದಂತೆ ಹಲವು ಅತ್ಯಾಧುನಿಕ ರೈಲು ಸೇವೆಗಳು ಲಭ್ಯವಿದೆ. ದೇಶದ ಎಲ್ಲಾ ರೈಲು ನಿಲ್ದಾಣಗಳಲ್ಲಿ ಸೀಮಿತ ಸ್ಥಳಕ್ಕೆ ರೈಲು ಸಂಪರ್ಕವಿರುತ್ತದೆ. ಆದರೆ ಒಂದು ನಿಲ್ದಾಣ ದೇಶದ ಮೂಲೆ ಮೂಲೆಗೂ ಸಂಪರ್ಕ ಕಲ್ಪಿಸುತ್ತದೆ. ಈ ರೈಲು ನಿಲ್ದಾಣದಲ್ಲಿ ಪ್ರತಿ ದಿನ 197 ರೈಲು ನಿಲುಗಡೆಯಾಗುತ್ತದೆ. ದಿನ 24 ಗಂಟೆಯೂ ಇಲ್ಲಿ ರೈಲು ಲಭ್ಯವಿರುತ್ತದೆ. ಈ ವಿಶೇಷ ರೈಲು ನಿಲ್ದಾಣವೇ ಮಥುರಾ ಜಂಕ್ಷನ್.
ಕಾಶ್ಮೀರವೇ ಇರಲಿ, ಕನ್ಯಾಕುಮಾರಿಯೇ ಆಗಲಿ. ದೇಶದ ಯಾವುದೇ ಭಾಗಕ್ಕೆ ತೆರಳಬೇಕಾದರೂ ಈ ರೈಲು ನಿಲ್ದಾಣಕ್ಕೆ ಆಗಮಿಸಿದರೆ ಸಾಕು, ರೈಲು ಲಭ್ಯವಿರುತ್ತದೆ. ಇದೇ ಸಮಯಕ್ಕೆ ತೆರಳಬೇಕು ಅನ್ನೋ ಚಿಂತೆ ಇಲ್ಲ. ದಿನದ 24 ಗಂಟೆಯೂ ರೈಲು ಸೇವೆ ಎಲ್ಲಾ ಕಡೆಗೆ ಲಭ್ಯವಿದೆ. ಮಥುರಾ ರೈಲ್ವೇ ಜಂಕ್ಷನ್ ನಿಲ್ದಾಣ ದೆಹಲಿ ಸಮೀಪವಿದೆ. ಉತ್ತರ ಪ್ರದೇಶದಲ್ಲಿರುವ ಈ ರೈಲು ನಿಲ್ದಾಣ ನಾರ್ತ್ ಸೆಂಟ್ರಲ್ ರೈಲ್ವೇ ಅಡಿಯಲ್ಲಿದೆ. ಇದು ದೇಶದ ಅತೀ ದೊಡ್ಡ ರೈಲು ನಿಲ್ದಾಣಗಳಲ್ಲೂ ಒಂದಾಗಿದೆ.
ಪುಷ್ಪ 2 ಚಿತ್ರ ನೋಡಲು ಧಾವಂತದಲ್ಲಿ ತೆರಳಿದ ಬೆಂಗಳೂರಿನ 19 ವರ್ಷದ ಯುವಕ ರೈಲಿಗೆ ಬಲಿ!
ಮಥುರಾ ರೈಲು ನಿಲ್ದಾಣದಲ್ಲಿ 10 ಪ್ಲಾಟ್‌ಫಾರ್ಮ್‌ಗಳಿವೆ. ಪ್ರತಿ ದಿನ 197 ರೈಲು ಇಲ್ಲಿ ನಿಲುಗಡೆಯಾಗುತ್ತದೆ. ಮಥುರಾದಿಂದ 17 ಬೇರೆ ಬೇರೆ ಕಡೆ ತೆರಳುವ ರೈಲು ಹೊರಡಲಿದೆ. ಶಟಲ್, ಸೂಪರ್‌ಫಾಸ್ಟ್ ರೈಲುಗಳಾದ ಶತಾಬ್ದಿ ಸೇರಿದಂತೆ ಹಲವು ರೈಲುಗಳು ಇಲ್ಲಿ ನಿಲುಗಡೆ ಇದೆ. ದೆಹಲಿ, ರಾಜಸ್ಥಾನ, ಚತ್ತಿಸಘಡ, ಮಧ್ಯಪ್ರದೇಶ, ಬಿಹಾರ, ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ಒಡಿಶಾಗೂ ಸಂಪರ್ಕ ಕಲ್ಪಿಸುತ್ತದೆ.
undefined
ಭಾರತದ ಅತ್ಯಂತ ಹಳೇ ರೈಲು ನಿಲ್ದಾಣಗಳ ಪೈಕಿಯೂ ಮಥುರಾ ಒಂದಾಗಿದೆ. ಈ ರೈಲು ನಿಲ್ದಾಣ ಆರಂಭಗೊಂಡಿದ್ದು ಬ್ರಿಟೀಷ ಆಡಳಿತದಲ್ಲಿ. 1875ರಲ್ಲಿ ಈ ರೈಲು ನಿಲ್ದಾಣ ಆರಂಭಗೊಂಡಿತ್ತು. ಆರಂಭದಲ್ಲಿ ಹಾತ್ ರಸ್ತೆ-ಮಥುರಾ ಕಂಟೊನ್ಮೆಂಟ್ ರೈಲು ಸೇವೆ ಆರಂಭಗೊಂಡಿತ್ತು. ಇದು 47 ಕಿಲೋಮೀಟರ್ ಪ್ರಯಾಣದ ರೈಲಾಗಿತ್ತು. ಬಳಿಕ ಹಂತ ಹಂತವಾಗಿ ರೈಲು ಸೇವೆ ವಿಸ್ತರಣೆಗೊಂಡಿತ್ತು.ಈಗ ದೇಶದ ಪ್ರಮಖ ಎಲ್ಲಾ ನಗರಗಳಗೆ ಮಥುರದಿಂದ ರೈಲು ಸಂಪರ್ಕವಿದೆ.
ಭಾರತದಲ್ಲಿ ಒಟ್ಟು 7,349 ರೈಲು ನಿಲ್ದಾಣಗಳಿವೆ. ಭಾರತದ ರೈಲು ಟ್ರಾಕ್ ಉದ್ದ 1,32,310 ಕಿಲೋಮೀಟರ್. ಇನ್ನು ಆಗಸ್ಟ್ 2024ರ ವೇಳೆ ಶೇಕಡಾ 96.59% ರಷ್ಟು ಎಲೆಕ್ಟ್ರಿಫಿಕೇಶನ್ ಮಾಡಲಾಗಿದೆ. ಬರೋಬ್ಬರಿ 1.2 ಮಿಲಿಯನ್ ಉದ್ಯೋಗಿಗಳು ಭಾರತೀಯ ರೈಲ್ವೇಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅತೀ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ ಭಾರತದ 2ನೇ ಸಂಸ್ಥೆ ಹಾಗೂ ವಿಶ್ವದ 9ನೇ ಸಂಸ್ಥೆ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.