ರಜನಿಕಾಂತ್: ನೀನು ಹೀಗೆ ಬಂದ್ರೆ ಚಪ್ಪಲಿಯಲ್ಲಿ ಹೊಡಿತೀನಿ ಅಂದಿದ್ರು ನಂಗೆ!

By Shriram Bhat  |  First Published Dec 12, 2024, 4:17 PM IST

ರಜನಿಕಾಂತ್ ತಮ್ಮ ಸಂದರ್ಶನವೊಂದರಲ್ಲಿ ಒಂದು ಸೀಕ್ರೆಟ್‌ ಆಗಿದ್ದ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಅವರು ಸೂಪರ್ ಸ್ಟಾರ್ ಆಗುವುದಕ್ಕೂ ಮುಂಚೆ, ಸಿನಿಮಾವೊಂದರ ಶೂಟಿಂಗ್ ವೇಳೆ ನಿರ್ದೇಶಕರೊಬ್ಬರು ನಟ ರಜನಿಕಾಂತ್ ಅವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದರಂತೆ. ಹಾಗಿದ್ದರೆ ನಟ ರಜನಿಕಾಂತ್ ಏನೋ ತಪ್ಪು ಮಾಡಿರಬೇಕು...


ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಅವರು ತಮ್ಮ ಸಂದರ್ಶನವೊಂದರಲ್ಲಿ ಒಂದು ಸೀಕ್ರೆಟ್‌ ಆಗಿದ್ದ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಅವರು ಸೂಪರ್ ಸ್ಟಾರ್ ಆಗುವುದಕ್ಕೂ ಮುಂಚೆ, ಸಿನಿಮಾವೊಂದರ ಶೂಟಿಂಗ್ ವೇಳೆ ನಿರ್ದೇಶಕರೊಬ್ಬರು ನಟ ರಜನಿಕಾಂತ್ ಅವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದರಂತೆ. ಹಾಗಿದ್ದರೆ ನಟ ರಜನಿಕಾಂತ್ ಏನೋ ತಪ್ಪು ಮಾಡಿರಬೇಕು. ಅದೇನು ತಪ್ಪು ಮಾಡಿದ್ರು ನಟ ರಜನಿಕಾಂತ್? ಅವ್ರಿಗೆ ಬೈದಿರೋ ಡೈರೆಕ್ಟರ್ ಯಾರು? ಇಲ್ಲಿದೆ ನೋಡಿ ಸ್ಟೋರಿ.. 

ಹೌದು, ನಟ ರಜನಿಕಾಂತ್ ಅವರು ತಮಿಳು ನಿರ್ದೇಶಕರೊಬ್ಬರ ಬಳಿ ಸರಿಯಾಗಿ ಬೈಸಿಕೊಂಡಿದ್ದರಂತೆ. ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಕಾಲದಲ್ಲಿ ನಟ ರಜನಿಕಾಂತ್ ಅವರು ಸಿಕ್ಕಾಪಟ್ಟೆ ಡ್ರಿಂಕ್ಸ್ ಮಾಡೋದು ಹಾಗೂ ಸ್ಮೋಕ್ ಮಾಡೋದು ಮಾಡ್ತಾ ಇದ್ರಂತೆ.. ಅದರಂತೆ, ತಮಿಳು ಖ್ಯಾತ ನಿರ್ದೇಶಕರಾದ ಕೆ ಬಾಲಚಂದರ್ ಅವರು ನಟ ರಜನಿ ಅವಸ್ಥೆ ನೋಡಿ, ಕೋಪ ಹಾಗು ಪ್ರೀತಿಯಿಂದ ಚೆನ್ನಾಗಿ ಬೈಯ್ದು ಬುದ್ದಿ ಹೇಳಿದ್ದರು. ಅದನ್ನು ಸ್ವತಃ ರಜನಿಕಾಂತ್ ಅವರು ತಮ್ಮ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದಾರೆ. 

Tap to resize

Latest Videos

ಮಾಜಿ ಪತಿ ಮದುವೆ ಬೆನ್ನಲ್ಲೇ ಹೊಸ ಜೀವನಕ್ಕೆ ರೆಡಿಯಾದ್ರಾ ಸಮಂತಾ?

ಸಿನಿಮಾ ಶೂಟಿಂಗ್‌ಗೆ ಬಂದ ನಟ ರಜನಿಕಾಂತ್ ಅವರು ಕುಡಿದಿದ್ದಾರೆ ಎಂಬುದು ನಿರ್ದೇಶಕ ಕೆ ಬಾಲಚಂದರ್ ಅವರಿಗೆ ಗೊತ್ತಾಗಿದೆ. ತಮ್ಮ ರೂಮಿಗೆ ಬರಲು ಹೇಳಿದ್ದಾರೆ. ಅದರಂತೆ ಬಂದ ನಟ ರಜನಿಕಾಂತ್‌ಗೆ 'ನೀನು ನಟ ನಾಗೇಶ್ ಅವರ ಮುಂದೆ ಒಂದು ಇರುವೆಗೂ ಸಮ ಇಲ್ಲ. ಆದರೆ ನಟ ನಾಗೇಶ್ ಕುಡಿದು ಕುಡಿದು ತನ್ನ ಜೀವನ ಹಾಳು ಮಾಡಿಕೊಂಡ. ಇನ್ನು ಮುಂದೆ ನೀನು ಹೀಗೆ ಶೂಟಿಂಗ್ ವೇಳೆ ಕುಡಿದು ಬಂದರೆ ಚಪ್ಪಲಿಯಲ್ಲಿ ಹೊಡಿತೀನಿ...' ಅಂದ್ರಂತೆ. 

undefined

ಈ ಬಗ್ಗೆ ಹೇಳಿಕೊಂಡಿರುವ ಸೂಪರ್ ಸ್ಟಾರ್ ರಜನಿಕಾಂತ್ ಅವರು 'ಆವತ್ತೇ ಕೊನೆ, ಮತ್ತೆಂದೂ ನಾನು ಚಿತ್ರೀಕರಣದ ವೇಳೆ ಕುಡಿಯಲಿಲ್ಲ..' ಎಂದಿದ್ದಾರೆ. ಕೆ ಬಾಲಚಂದರ್ ಬೈಯ್ದ ಬಳಿಕ, ಶೂಟಿಂಗ್‌ನಲ್ಲಿ ಮಾತ್ರವಲ್ಲ, ರಿಯಲ್ ಆಗಿ ಕೂಡ ನಟ ರಜನಿಕಾಂತ್ ಅವರು ಕುಡಿಯುವುದನ್ನು ಬಹಳಷ್ಟು ಕಮ್ಮಿ ಮಾಡಿದ್ದರು ಎಂಬ ಮಾಹಿತಿಯಿದೆ. ಇತ್ತೀಚೆಗಂತೂ ನಟ ರಜನಿಕಾಂತ್ ಅವರು ಆಧ್ಯಾತ್ಮಿಕ ದಾರಿಯಲ್ಲಿ ಸಾಗುತ್ತಿರುವುದರಿಂದ ಆ ಬಗ್ಗೆ ಆಸಕ್ತಿಯನ್ನೇ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಕನ್ನಡದ ಚಿತ್ರಗಳಲ್ಲಿ ಕೂಡ ನಟ ರಜನಿಕಾಂತ್ ನಟಿಸಿದ್ದಾರೆ. 

ಕುಡ್ಸು ನನ್ ಮಗ್ನಿಗೆ ಹಾಲು, ಹಂಗಾದ್ರೂ ಬೆಳ್ಳಗಾಗ್ತಾನೇನೋ ಅಂದಿದ್ರಂತೆ ಡಾ ರಾಜ್‌!

click me!