Hot Photo Shoot: ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದೆ ಅಮಲಾ ಫೋಟೋಸ್!

First Published Nov 17, 2021, 5:15 PM IST

ತಮಿಳು ನಟಿ ಅಮಲಾ ಪಾಲ್ (Amala paul) ಅವರ  ಇತ್ತೀಚಿನ ಮದುವೆ ಥೀಮ್ (Wedding Theme) ಫೋಟೋ ಶೂಟ್ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ನೆಟ್ಟಿಗರು ಅಮಲಾ ಅವರ ಫೋಟೋಗೆ ತೀವ್ರವಾಗಿ ಕಾಮೆಂಟ್‌ ಮಾಡಿದ್ದಾರೆ. ಅವರ ರಿಸೆಂಟ್‌ ಪೋಟೋಗಳು ಇಲ್ಲಿವೆ. 

ಭಿನ್ನಾಭಿಪ್ರಾಯದಿಂದ ನಿರ್ದೇಶಕ ಎಎಲ್ ವಿಜಯ್ ಗೆ ಏಕಾಏಕಿ ವಿಚ್ಛೇದನ ನೀಡಿದ ಅಮಲಾ ಪೌಲ್ ಸದ್ಯ ಸ್ವತಂತ್ರ ಹಕ್ಕಿಯಾಗಿದ್ದಾರೆ. ದಕ್ಷಿಣದ ನಟಿ ಅಮಲಾ ಪೌಲ್ ಮತ್ತು ಚಲನಚಿತ್ರ ನಿರ್ಮಾಪಕ ಎ.ಎಲ್.ವಿಜಯ್ ವಿಚ್ಛೇದನ ಪಡೆದು ಸುಮಾರು ಮೂರು ವರ್ಷಗಳಾಗಿವೆ. 

2014ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ  ಅಮಲಾ ಪೌಲ್ ಮತ್ತು  ಎ.ಎಲ್.ವಿಜಯ್ 2017ರಲ್ಲಿ ವಿಚ್ಛೇದನ ಪಡೆದಿದ್ದರು. ಅಮಲಾ ಅವರ ಇತ್ತೀಚೀನ ಫೋಟೋಗಳನ್ನು ನೋಡಿದ ನೆಟ್ಟಿಜನ್‌ ತೀವ್ರವಾಗಿ ಕಾಮೆಂಟ್‌ ಮಾಡಿದ್ದಾರೆ.

ಸೌತ್‌ ಚೆಲುವೆ ಅಮಲಾ ಪೌಲ್ ಅವರು  ಮದುವೆಗೂ ಮುನ್ನ ತೋರಿದ ಗ್ಲಾಮರ್ ಗಿಂತ ವಿಚ್ಛೇದನದ ನಂತರ ಆಕೆಯ ಗ್ಲಾಮರ್‌ ಕೊಂಚ ಹೆಚ್ಚೇ ಇದೆ ಎಂದು ನೆಟಿಜನ್ ಗಳು ಕಿಡಿಕಾರಿದ್ದಾರೆ. 

ಅದಕ್ಕೆ ತಕ್ಕ ಹಾಗೆ ಅವರು ವಿವಾದದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ, ಇನ್‌ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಹಾಕುತ್ತ ನಟಿ ಬೆರಗುಗೊಳಿಸುತ್ತಲೇ ಇದ್ದಾರೆ. ನೆಗೆಟಿವ್‌ ವಿಮರ್ಶೆಗಳ ಹೊರತಾಗಿಯೂ ಅಮಲಾ ಪೌಲ್ ಬೋಲ್ಡ್‌ ಹಾಗೂ ಹಾಟ್‌ ಫೋಟೋಗಳನ್ನು ಶೇರ್‌ ಮಾಡುವುದನ್ನು ಮುಂದುವರೆಸಿದ್ದಾರೆ.

ಅಮಲಾ ಅವರ ಇತ್ತೀಚಿನ  ಮದುವೆ ಥೀಮ್‌ ಫೋಟೋಶೂಟ್‌ನ ಫೋಟೋಗಳು ಇಂಟರ್‌ನೆಟ್‌ಗೆ ಬೆಂಕಿ ಹಂಚಿವೆ. ಮನಮೋಹಕ ಭಂಗಿಗಳಲ್ಲಿ ಹಸಿರು ಬಣ್ಣದ ಲಾಂಗ್ ಗೌನ್‌ನ ಅಮಲಾ ಅವರ ಲುಕ್‌ ಯುವಕರ ನಿದ್ರೆ ಹಾಳು ಮಾಡಿದೆ.

ಲಾಂಗ್‌ ಸ್ಲಿಟ್‌ ಹೊಂದಿರುವ ಈ ಮಾಡರ್ನ್ ವೆಡ್ಡಿಂಗ್ ಡ್ರೆಸ್ ನಲ್ಲಿ ಅಮಲಾ ತುಂಬಾ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಅಮಲಾ ಪೌಲ್ ಅವರ ಇತ್ತೀಚಿನ ಹಾಟ್ ಫೋಟೋ ಶೂಟ್ ಫೋಟೋಗಳು ಅಭಿಮಾನಿಗಳಲ್ಲಿ ವೈರಲ್ ಆಗಿದ್ದು, ನೆಟಿಜನ್‌ಗಳು ಅವರ ಸೌಂದರ್ಯವನ್ನು ಕೊಂಡಾಡುತ್ತಿದ್ದಾರೆ.

ದೊಡ್ಡ  ಚಿತ್ರಗಳ ಅವಕಾಶಗಳನ್ನು ಪಡೆಯಲು ಹರಸಾಹಸ ಪಡುತ್ತಿರುವ ಅಮಲಾ ಪಾಲ್, ಹೇಗಾದರೂ ಮಾಡಿ ಮತ್ತೆ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳುವ ಉದ್ದೇಶದಿಂದ ಇಂತಹ  ಫೋಟೋ ಶೂಟ್ ಫೋಟೋಗಳನ್ನು ಬಿಡುಗಡೆ ಮಾಡುತ್ತಿದ್ದಾರೆ ಎನ್ನಲಾಗಿದೆ.  

click me!