ಆಫ್ ಶೋಲ್ಡರ್ ಗೌನ್‌, ಸಿಲ್ವರ್ ಕಾಲ್ಗೆಜ್ಜೆಯಲ್ಲಿ ಮಿಂಚಿದ ದಿಶಾ ಪಟಾನಿ: ಹಾಟ್‌ನೆಸ್ ಗೊಂಬೆ ಎಂದ ನೆಟ್ಟಿಗರು!

First Published Mar 28, 2024, 9:47 AM IST

ಬಾಲಿವುಡ್ ಬೆಡಗಿ ದಿಶಾ ಪಟಾನಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಫಿಟ್‌ನೆಸ್‌ ಜೊತೆಗೆ ತಮ್ಮ ಫ್ಯಾಷನ್‌ ಸೆನ್ಸ್‌ನಿಂದ ಎಲ್ಲರ ಗಮನ ಸೆಳೆಯುತ್ತಾರೆ. ದಿಶಾ ಪಟಾನಿ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಮೋಹಕ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
 

ಬಾಲಿವುಡ್ ಬೆಡಗಿ ದಿಶಾ ಪಟಾನಿ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಸಖತ್ ಫೋಟೋಸ್ ಶೇರ್ ಮಾಡುತ್ತಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಕ್ರೇಜ್ ಕ್ರಿಯೇಟ್ ಮಾಡುವುದರಲ್ಲಿ ಯಾವಾಗಲೂ ಮುಂಚೂಣಿಯಲ್ಲಿರುವ ದಿಶಾ ಪಠಾನಿ ಶ್ವೇತ ವರ್ಣದ ಗೌನ್‌ನಲ್ಲಿ ಮಿಂಚಿದ್ದಾರೆ.

ಗೋಲ್ಡ್ ಪೋಸ್‌ನಲ್ಲಿ ಹಾಟ್ ಆಗಿ ಕಂಡಿರುವ ದಿಶಾ ಪಟಾನಿ ಕಾಲಿಗೆ ಸಿಲ್ವರ್ ಕಾಲ್ಗೆಜ್ಜೆ ತೊಟ್ಟು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಜೊತೆಗೆ ಗೌನ್‌ಗೆ ಮ್ಯಾಚ್ ಆಗುವ ಹಾಗೆ ಕೈಯಲ್ಲಿ ಸಿಲ್ವರ್ ಬಳೆ, ಕಿವಿಯೋಲೆ ಕೈ ಉಂಗುರವನ್ನು ಧರಿಸಿದ್ದಾರೆ. 

ದಿಶಾ ಪಠಾನಿ ಬೋಲ್ಡ್ ಬ್ಯೂಟಿ ತೋರಿಸಿ ಹುಡುಗರ ಮನಸೆಳೆಯುತ್ತಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ದಿಶಾ ಸೌಂದರ್ಯದ ಬಗ್ಗೆ ನೆಟ್ಟಿಗರು ನಾನಾ ಕಮೆಂಟ್ಸ್ ಮಾಡುತ್ತಿದ್ದಾರೆ.

2016 ರಲ್ಲಿ ಎಂಎಸ್ ಧೋನಿಯ ಅನ್ಟೋಲ್ಡ್ ಲವ್ ಸ್ಟೋರಿ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ದಿಶಾ ಪಠಾನಿ ನಂತರ ಅನೇಕ ಚಿತ್ರಗಳ ಭಾಗವಾದರು. ಭಾಗಿ, ಭಾರತ್ ಮತ್ತು ಮಲಂಗ್‌ನಂತಹ ಚಿತ್ರಗಳೊಂದಿಗೆ ಅವರ ಕ್ರೇಜ್ ಅಪಾರವಾಗಿ ಹೆಚ್ಚಾಯಿತು.

ದಿಶಾ ಪಠಾನಿ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ದಿಶಾ ಪಠಾನಿ ಅವರ ಕ್ರೇಜ್ ಹೆಚ್ಚಿದ್ದು ಅಭಿಮಾನಿಗಳ ಸಂಖ್ಯೆ ಬೇಗನೆ ಹೆಚ್ಚಾಗುತ್ತದೆ.

ದಿಶಾ ಪಠಾನಿ ನಟನೆಗಿಂತ ಗ್ಲಾಮರ್ ಮತ್ತು ವ್ಯವಹಾರಗಳಿಗೆ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಬಾಲಿವುಡ್ ನಟ ಟೈಗರ್ ಶ್ರಾಫ್ ಜೊತೆಗಿನ ದಿಶಾ ಅವರ ಡೇಟಿಂಗ್ ಅಫೇರ್ ಯಾವಾಗಲೂ ಬಾಲಿವುಡ್‌ನಲ್ಲಿ ಹಾಟ್ ಟಾಪಿಕ್ ಆಗಿದೆ. ಇವರಿಬ್ಬರಿಗೆ ಸಂಬಂಧಿಸಿದ ಹಲವು ಫೋಟೋಗಳು ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಬಾಲಿವುಡ್‌ ನಟಿ ದಿಶಾ ಪಟಾನಿ ಸದ್ಯ ತಮ್ಮ ಸಂಪೂರ್ಣ ಗಮನವನ್ನು ಸೌತ ಸಿನಿಮಾರಂಗದ ಮೇಲೆ ನೆಟ್ಟಿದ್ದಾರೆ. ಪ್ರಭಾಸ್ ಜತೆಗೆ ಕಲ್ಕಿ 2898 ಎಡಿ ಮತ್ತು ಸೂರ್ಯ ಜತೆಗೆ ಕಂಗುವಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

click me!