ಹುಟ್ಟುಹಬ್ಬದ ಔತಣ ಕೂಟದಲ್ಲಿ ಮದ್ಯ ಸೇವಿಸುವಾಗ ಗುರಾಯಿಸಿದ ಎಂಬ ಕಾರಣಕ್ಕೆ ಕೋಪಗೊಂಡು ಚಾಲಕನೊಬ್ಬನನ್ನು ಆತನ ಸ್ನೇಹಿತರೇ ಅಟ್ಟಾಡಿಸಿಕೊಂಡು ಹೋಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು (ಮೇ.26): ಹುಟ್ಟುಹಬ್ಬದ ಔತಣ ಕೂಟದಲ್ಲಿ ಮದ್ಯ ಸೇವಿಸುವಾಗ ಗುರಾಯಿಸಿದ ಎಂಬ ಕಾರಣಕ್ಕೆ ಕೋಪಗೊಂಡು ಚಾಲಕನೊಬ್ಬನನ್ನು ಆತನ ಸ್ನೇಹಿತರೇ ಅಟ್ಟಾಡಿಸಿಕೊಂಡು ಹೋಗಿ ಚಾಕುವಿನಿಂದ ಇರಿದು ಹತ್ಯೆಗೈದು ಪರಾರಿಯಾಗಿರುವ ಘಟನೆ ನಂದಿನಿಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚೌಡೇಶ್ವರಿ ನಗರದ ನಿವಾಸಿ ರವಿಕುಮಾರ್ ಅಲಿಯಾಸ್ ಮತ್ತಿ ರವಿ (38) ಕೊಲೆಯಾದ ದುರ್ದೈವಿ. ಈ ಕೃತ್ಯ ಎಸಗಿ ಪರಾರಿಯಾಗಿರುವ ಲಗ್ಗೆರೆಯ ಮಂಜು, ನಾಗರಾಜ ಅಲಿಯಾಸ್ ಸ್ಪಾಟ್ ನಾಗ, ಗೋಪಿ, ಕಿರಣ್ ಹಾಗೂ ಮಣಿ ಸೇರಿದಂತೆ ಮತ್ತಿತರರ ಪತ್ತೆಗೆ ತನಿಖೆ ನಡೆದಿದೆ. ಚೌಡೇಶ್ವರಿನಗರದ ಹಳ್ಳಿರುಚಿ ಹೊಟೇಲ್ ಮುಂಭಾಗ ಬುಧವಾರ ರಾತ್ರಿ 12ರ ಸುಮಾರಿಗೆ ರವಿಗೆ ಚಾಕುವಿನಿಂದ ಇರಿದು ಬಳಿಕ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದು ಆರೋಪಿಗಳು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
undefined
ಮಹಿಳಾ ಕೆಎಎಸ್ ಅಧಿಕಾರಿ ಮೇಲೆ ಬಾನಮತಿ; ಹಣಕ್ಕಾಗಿ ಸಹೋದರನಿಂದ್ಲೇ ಜೀವ ಬೆದರಿಕೆ!
ತನ್ನ ಕುಟುಂಬದ ಜತೆ ನೆಲೆಸಿದ್ದ ರವಿ, ಟೆಂಪೋ ಟ್ರಾವೆಲರ್ ಚಾಲಕನಾಗಿ ಜೀವನ ಸಾಗಿಸುತ್ತಿದ್ದ. ಅಲ್ಲದೆ ಕುರಿ ಸಾಕಾಣಿಕೆಯಲ್ಲಿ ಕೂಡ ಆತ ತೊಡಗಿದ್ದ. ತನ್ನ ಗೆಳೆಯ ಕೃಷ್ಣ ಮೂರ್ತಿ ಹುಟ್ಟಹಬ್ಬದ ನಿಮಿತ್ತ ಚೌಡೇಶ್ವರಿನಗರದಲ್ಲಿ ಗೆಳೆಯ ಆಯೋಜಿಸಿದ್ದ ಪಾನಗೋಷ್ಠಿಗೆ ರಾತ್ರಿ 7.45ರಲ್ಲಿ ರವಿ ಹೋಗಿದ್ದ. ಆಗ ಅಲ್ಲಿ ಕೇಕ್ ಕತ್ತರಿಸಿದ ಬಳಿಕ ಮದ್ಯ ಸೇವಿಸುವಾಗ ಕ್ಷುಲ್ಲಕ ಕಾರಣಕ್ಕೆ ರವಿ ಹಾಗೂ ನಾಗನ ಮಧ್ಯೆ ಜಗಳವಾಗಿದೆ. ನನ್ನನ್ನು ಗುರಾಯಿಸುತ್ತೀಯಾ ಎಂದು ಹೇಳಿ ರವಿ ಮೇಲೆ ನಾಗ ಕಡೆಯವರು ಗಲಾಟೆ ಮಾಡಿದ್ದರು. ಆಗ ಕೆಲ ಸ್ನೇಹಿತರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು. ಇದಾದ ನಂತರ ಮನೆಗೆ ಮರಳಿದ ರವಿಯನ್ನು ಕರೆ ಮಾಡಿ ರಾತ್ರಿ 9.45ಕ್ಕೆ ಹೊರಗೆ ಆರೋಪಿಗಳು ಕರೆಸಿಕೊಂಡಿದ್ದರು.
'ಏರಿಯಾದಲ್ಲಿ ನಿಂದು ಹವಾ ಜಾಸ್ತಿ ಆಗಿದೆ': ಕ್ಷುಲ್ಲಕ ಕಾರಣಕ್ಕೆ ಯುವಕನ ಹತ್ಯೆ!
ಗೆಳೆಯ ಮಂಜು ಕರೆ ಮೇರೆಗೆ ಚೌಡೇಶ್ವರಿ ನಗರದ 50 ಅಡಿ ರಸ್ತೆ ಬಳಿಗೆ ರವಿ ತೆರಳಿದ್ದ. ಆಗ ಆತನ ಮೇಲೆ ನಾಗ ಹಾಗೂ ಆತನ ಸಹಚರರು ಹಲ್ಲೆಗೆ ಮುಂದಾಗಿದ್ದಾರೆ. ಈ ಹಂತದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ ರವಿ ಬೆನ್ನು ಹತ್ತಿ ಹೋಗಿ ಚಾಕುವಿನಿಂದ ಇರಿದು ಬಳಿಕ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.