ಪತ್ನಿಯನ್ನು ಪ್ರವಾಸಕ್ಕೆ ಕರೆದೊಯ್ದು ಶೇಖ್‌ಗೆ ಮಾರಿ ತಲಾಖ್‌ ನೀಡಿದ ಭೂಪ! ಯುವತಿಯ ಕಣ್ಣೀರ ಕಥೆ ಕೇಳಿ..

By Suchethana D  |  First Published Nov 23, 2024, 5:13 PM IST

ಬಿಹಾರದ ಪತಿರಾಯನೊಬ್ಬ ಪ್ರವಾಸಕ್ಕೆ ಪತ್ನಿಯನ್ನು ಕರೆದೊಯ್ದು 10 ಲಕ್ಷಕ್ಕೆ ಶೇಖ್‌ಗೆ ಮಾರಿದ್ದ. ಮುಂದೇನಾಯ್ತು ಕೇಳಿ..  
 


ತ್ರಿವಳಿ ತಲಾಖ್‌ ಬ್ಯಾನ್‌ ಮಾಡಿ ವರ್ಷಗಳೇ ಕಳೆದಿದ್ದರೂ ಇದುವರೆಗೂ ಮುಸ್ಲಿಂ ಮಹಿಳೆಯರ ನೋವು ತಪ್ಪಿದ್ದಲ್ಲ. ಮೊಬೈಲ್‌ ಫೋನ್‌ ಮೂಲಕ, ಅಂಚೆ ಮೂಲಕ, ಬರಿ ಮಾತಿನ ಮೂಲಕ... ಹೀಗೆ ಮನಸೋ ಇಚ್ಛೆ ತ್ರಿವಳಿ ತಲಾಖ್‌ ನೀಡುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಆದರೆ ಕೇವಲ ತಲಾಖ್ ಆಗಿದ್ದರೆ ಸಹಿಸಿಕೊಳ್ಳಬಹುದಿತ್ತೇನೋ, ಆದರೆ  ಬಿಹಾರದ ಪಾಟ್ನಾದ ಯುವತಿಯ ಕಣ್ಣೀರಿನ ಕಥೆ ಕೇಳಿದ್ರೆ ಎಂಥವರ ಎದೆಯೂ ಝಲ್‌ ಎನ್ನಿಸದೇ ಇರಲಾರದು. ಪತ್ನಿಯನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಶೇಖ್‌ ಒಬ್ಬನಿಗೆ ಹತ್ತು ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾನೆ ಈ ಭೂಪ! ಬಳಿಕ ಅಂಚೆ ಮೂಲಕ ತ್ರಿಬಲ್‌ ತಲಾಖ್‌ ನೀಡಿದ್ದಾನೆ. ಕತಾರ್‍‌ಗೆ ಕರೆದುಕೊಂಡು ಹೋಗಿರುವ ಪತಿರಾಯ, ಇಂಥದ್ದೊಂದು ಘನಘೋರ ಕೃತ್ಯ ಮಾಡಿದ್ದು ಈಗ ಕಾನೂನಿನ ಕುಣಿಕೆಯಲ್ಲಿ ಸಿಲುಕಿದ್ದಾನೆ. 

2021 ರಲ್ಲಿ ಶಹಬಾಜ್ ಹಸನ್​ ಎಂಬ ಆಸಾಮಿಯ ಜೊತೆ ಯುವತಿಯ ಮದುವೆಯಾಗಿದೆ. ಮದುವೆ ಸಂದರ್ಭದಲ್ಲಿ  ವಿದ್ಯುತ್ ಇಲಾಖೆಯಲ್ಲಿ ಸರ್ಕಾರಿ ನೌಕರ ಎಂದು ಸುಳ್ಳು ಬೇರೆ ಹೇಳಿದ್ದ. ಮದುವೆಯಾದ ಮೇಲೆ ಯುವತಿಗೆ ಸತ್ಯ ತಿಳಿದಿದೆ. ಆತ  ಹೆಸರು ಹೇಳದ ಒಂದು ಎನ್‌ಜಿಒದಲ್ಲಿ ಕೆಲಸ ಮಾಡುತ್ತಿದ್ದನಂತೆ. ಆದರೆ ಅದು ಯಾವ ರೀತಿಯ ಸ್ವಯಂ ಸೇವಾ ಸಂಘ ಎನ್ನುವುದೂ ಪತ್ನಿಗೆ ತಿಳಿದಿಲ್ಲ.  2021 ರ ಅಕ್ಟೋಬರ್ 29 ರಂದು ಪ್ರವಾಸದ ನೆಪದಲ್ಲಿ, ಕತಾರ್‍‌ಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಯುವತಿ ಮಗುವಿಗೆ ಜನ್ಮ ಕೂಡ ನೀಡಿದ್ದಾರೆ. ಆದರೆ ಕತಾರ್‍‌ಗೆ ತನ್ನನ್ನು ಕರೆತಂದಿರುವ ಉದ್ದೇಶವೇ, ಬೇರೆ ಎಂದು ಬಳಿಕ ಯುವತಿಗೆ ತಿಳಿದಿದೆ.

Tap to resize

Latest Videos

ಅನುಷ್ಕಾ- ವಿರಾಟ್‌ ದಾಂಪತ್ಯದಲ್ಲಿ ಬಿರುಕು? ಕೊಹ್ಲಿ ಭಾವನಾತ್ಮಕ ಪೋಸ್ಟ್‌ಗೆ ಫ್ಯಾನ್ಸ್ ಶಾಕ್‌!

ಅಲ್ಲಿ ಶೇಖ್‌ ಒಬ್ಬನಿಗೆ ಹತ್ತು ಲಕ್ಷ ರೂಪಾಯಿಗೆ ವ್ಯಾಪಾರ ಕುದುರಿಸಿಕೊಂಡಿದ್ದ ಶಹಬಾಜ್ ಹಸನ್​, ಆತನಿಗೆ ಮಾರಾಟ ಮಾಡಿದ್ದ. ಆದರೆ ಧೃತಿಗೆಡದ ಯುವತಿ, ಶೇಖ್‌ನಿಂದ ತಪ್ಪಿಸಿಕೊಂಡು ಭದ್ರತಾ ಸಿಬ್ಬಂದಿಯ ಸಹಾಯದಿಂದ  ಕತಾರ್‍‌ನಲ್ಲಿರುವ  ಭಾರತೀಯ ರಾಯಭಾರ ಕಚೇರಿಗೆ ವಿಷಯ ತಲುಪಿಸಿದ್ದಾರೆ. ರಾಯಭಾರ ಕಚೇರಿಯ ಮುಂದಾಳತ್ವದಲ್ಲಿ   ಭಾರತಕ್ಕೆ ಮರಳಿದ್ದಾರೆ.  ಭಾರತಕ್ಕೆ ಮರಳಿದ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತಮಗಾಗಿರುವ ನೋವನ್ನು ತೋಡಿಕೊಂಡಿದ್ದಾರೆ. 

ಪತಿ ಮಾತ್ರವಲ್ಲದೇ, ಆತನಿಗೆ ಸಹಾಯ ಮಾಡಿದ ಅತ್ತೆ ವಿರುದ್ಧವೂ ದೂರ ದಾಖಲು ಮಾಡಿದ್ದಾರೆ. ಗಂಡನ ಮನೆಗೆ ವಾಪಸಾದ ಮೇಲೆ ಅವರು ಕೂಡ ಈಕೆಯನ್ನು ಒಪ್ಪಿಕೊಳ್ಳಲಿಲ್ಲವಂತೆ! ಸದ್ಯ  ದಿಘಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.   ಇಲ್ಲಿ ಒನ್ ಸ್ಟಾಪ್ ಸೆಂಟರ್ ಮೂಲಕ ಯುವತಿಗೆ ಕಾನೂನು ನೆರವು ನೀಡಲಾಗುತ್ತಿದೆ. ಕೇಂದ್ರಕ್ಕೆ ಬಂದಿರುವ ಮಾಹಿತಿ ಪ್ರಕಾರ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ   ಅತ್ತೆ ಮಾವಂದಿರಿಗೆ ನೋಟಿಸ್ ನೀಡಲಾಗಿದೆ ಎಂದು ವರದಿಯಾಗಿದೆ. 
 

ಈ ಗಂಡಸ್ರಿಗೋ ಪ್ಯೂರ್ ಹುಡುಗಿ ಬೇಕಂತೆ! ಮುಂಬೈ ಏನು ನಿಜವಾದ ಭಾರತನಾ?

click me!