ಕೋರಿಯರ್ ಮೂಲಕ ಬಂದ ಹೇರ್ ಡ್ರೈಯರ್ ಸ್ಫೋಟಗೊಂಡು ಮಹಿಳೆಯ ಕೈಗಳು ತುಂಡಾಗಿದ್ದ ಪ್ರಕರಣದಲ್ಲಿ ಅನೈತಿಕ ಸಂಬಂಧ ಮತ್ತು ಕೊಲೆ ಯತ್ನದ ಹಿನ್ನೆಲೆ ಪತ್ತೆಯಾಗಿದೆ. ಟಾರ್ಗೆಟ್ ಬೇರೆಯವರಾಗಿದ್ದರೂ ಪ್ರೇಯಸಿಯೇ ಬಲಿಪಶುವಾಗಿದ್ದಾಳೆ.
ಬಾಗಲಕೋಟೆ (ನ.22): ಕೋರಿಯರ್ ಮೂಲಕ ಪಾರ್ಸಲ್ ಬಂದಿದ್ದ ಹೇರ್ ಡ್ರೈಯರ್ ಸ್ಫೋಟಗೊಂಡು ಮಹಿಳೆಯೊಬ್ಬರ ಎರಡೂ ಕೈಗಳು ತುಂಡಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೆರೆಡು ಟ್ವಿಸ್ಟ್‌ಗಳು ಲಭ್ಯವಾಗಿದೆ. ಈ ಪ್ರಕರಣ ಬೇಧಿಸಿದ ಪೋಲೀಸರಿಗೆ ಹೇರ್ ಡ್ರೈಯರ್‌ನಲ್ಲಿ ಸ್ಫೋಟಕವನ್ನು ಇಟ್ಟು ಕಳಿಸಿರುವುದು ಪತ್ತೆಯಾಗಿದೆ. ಇದರ ಜೊತೆಗೆ ಮತ್ತೊಂದು ರೋಚಕ ತಿರುವು ಕಂಡುಬಂದಿದೆ.
ಬಾಗಲಕೋಟೆಯಲ್ಲಿ ಕಳೆದೊಂದು ವಾರದ ಹಿಂದೆ ಸ್ನೇಹಿತೆಯ ಹೆಸರಿಗೆ ಬಂದಿದ್ದ ಪಾರ್ಸಲ್ ಬಾಕ್ಸ್‌ನಲ್ಲಿದ್ದ ಹೇರ್ ಡ್ರೈಯರ್ ತೆಹರದು ಆನ್ ಮಾಡಿದ್ದ ಮಹಿಳೆ ಬಸವರಾಜೇಶ್ವರಿ ಅವರ ಕೈಗಳು ತುಂಡಾಗಿದ್ದವು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಕುಟುಂಬಸ್ರು ಆಕೆಯ ಜೀವ ಉಳಿಸಿದ್ದರು. ಆದರೆ, ಈ ಪ್ರಕರಣವನ್ನು ತನಿಖೆಗೆ ಕೈಗೆತ್ತಿಕೊಂಡ ಪೊಲೀಸರಿಗೆ ಎರಡೆರಡು ಟ್ವಿಸ್ಟ್‌ಗಳು ಸಿಕ್ಕಿವೆ. ಹೇರ್ ಡ್ರೈಯರ್ ಬ್ಲಾಸ್ಟ್ ಪ್ರಕರಣಕ್ಕೆ ಅನೈತಿಕ ಸಂಬಂಧವೇ ಕಾರಣವಾಗಿದೆ ಎಂದು ತಿಳಿದುಬಂದಿದೆ. ಜೊತೆಗೆ, ಅನೈತಿಕ ಸಂಭಂದಕ್ಕೆ ವಿರೋಧ ಮಾಡಲು ಬಂದವಳನ್ನ ಕೊಲ್ಲಲು ಸಂಚು ರೂಪಿಸಿ ಸ್ಪೋಟಕವನ್ನು ಹೇರ್ ಡ್ರೈಯರ್‌ನೊಳಗೆ ಇಟ್ಟು ಪಾರ್ಸಲ್ ಕಳಿಸಲಾಗಿತ್ತು ಎಂಬ ಮತ್ತೊಂದು ಟ್ವಿಸ್ಟ್ ಹೊರಬಿದ್ದಿದೆ.
ಈ ಪ್ರಕರಣದಲ್ಲಿ ಟಾರ್ಗೆಟ್ ಮಾಡಿದ್ದು ಶಶಿಕಲಾಗೆ, ಆದರೆ ಇಲ್ಲಿ ಪರಿಣಾಮ ಬೀರಿದ್ದು ಮಾತ್ರ ತನ್ನದೇ ಪ್ರೇಯಸಿ ಬಸಮ್ಮ (ಬಸವ ರಾಜೇಶ್ವರಿ) ಮೇಲೆ. ಇಳಕಲ್ ಪೊಲೀಸರು ಸದ್ಯ ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ. ಸಿದ್ದಪ್ಪ ಶೀಲವಂತ ಮಹಿಳೆಯ ಕೊಲೆಗೆ ಸಂಚು ರೂಪಿಸಿದ ಆರೋಪಿ. ಈ ಪ್ರಕರಣದಲ್ಲಿ ಹೇರ್ ಡ್ರೈಯರ್ ಬ್ಲಾಸ್‌ನಿಂದ ಕೈ ಕಳೆದುಕೊಂಡ ಬಸಮ್ಮಗೂ ಹಾಗೂ ಆರೋಪಿ ಸಿದ್ದಪ್ಪನಿಗೂ ಅನೈತಿಕ ಸಂಬಂಧವಿತ್ತು. ಬಸಮ್ಮ ಮತ್ತು ಸಿದ್ದಪ್ಪ ಕಳ್ಳಸಂಬಂಧದ ಬಗ್ಗೆ ತಿಳಿದುಕೊಂಡಿದ್ದ ಶಶಿಕಲಾ ಇಬ್ಬರಿಗೂ ಬುದ್ಧಿ ಮಾತನ್ನು ಹೇಳಿದ್ದಳು. ಆದರೆ, ಶಿಕಲಾಳ ಬುದ್ಧಿಮಾತಿನಿಂದ ಕೋಪಗೊಂಡಿದ್ದ ಆರೋಪಿ, ಶಶಿಕಲಾಳನ್ನು ಮುಗಿಸಲು ಫ್ಲ್ಯಾನ್ ರೂಪಿಸಿದ್ದನು. ಹೀಗಾಗಿ, ತಾನೇ ಹೇರ್ ಡ್ರೈಯರ್ ಖರೀದಿಸಿ, ಅದರೊಳಗೆ ಸ್ಫೋಟಕ ವಸ್ತು ಡೆಟೊನೇಟರ್ ಇಟ್ಟು ಶಶಿಕಲಾ ವಿಳಾಸಕ್ಕೆ ಕಳುಹಿಸಿದ್ದನು.
ಇದನ್ನೂ ಓದಿ: ಎಲ್ಲವೂ ಚೆನ್ನಾಗಿತ್ತು, ಆದ್ರೆ ಪಾರ್ಸಲ್‌ನಲ್ಲಿ ಬಂದ ಹೇರ್ ಡ್ರೈಯರ್‌ನಿಂದ ನನ್ನ ಕೈಗಳೇ ಕಟ್ ಆಯ್ತು!
ಅದೃಷ್ಟವಶಾತ್ ಊರಲ್ಲಿ ಇರದ ಶಶಿಕಲಾ ಇಲ್ಲದ ಕಾರಣ ಆಕೆ ತನ್ನ ಸ್ನೇಹಿತೆ ಬಸಮ್ಮಳಿಗೆ (ಆರೋಪಿ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಾಕೆ) ಹೇರ್ ಡ್ರೈಯರ್ ಪಡೆಯುವಂತೆ ತಿಳಿಸುತ್ತಾಳೆ. ಸ್ನೇಹಿತೆ ಶಶಿಕಲಾ ಮಾಹಿತಿಯಂತೆ ಡಿಟಿಡಿಸಿ ಕೋರಿಯರ್ ಸೆಂಟರ್‌ಗೆ ತೆರಳಿ ಹೇರ್ ಡ್ರೈಯರ್ ಪಡೆದಿದ್ದ ಬಸಮ್ಮ, ಮನೆಗೆ ಬಂದ ನಂತರ ಕುತೂಹಲ ತಡೆಯಲಾರದೇ ಬಾಕ್ಸ್ ಓಪನ್ ಮಾಡಿ ಹೇರ್ ಡ್ರೈಯರ್ ಆನ್ ಮಾಡಿದ್ದಾಳೆ. ಇನ್ನು ಅದನ್ನು ಆನ್ ಮಾಡುತ್ತಿದ್ದಂತೆಯೇ ಸ್ಪೋಟಗೊಂಡಿದ್ದು, ಆಕೆಯ ಎರಡೂ ಕೈಗಳು ತುಂಡಾಗಿ ಬೆಳರಳುಗಳೆಲ್ಲಾ ಮನೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಇನ್ನು ತೀವ್ರ ಗಾಯಗೊಂಡ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ, ಮುಂಗೈಗಳನ್ನು ತುಂಡರಿಸಿ ರಕ್ತಸ್ರಾವ ನಿಲ್ಲಿಸಿ ಪ್ರಾಣ ಉಳಿಸಿದ್ದರು. ಇದೀಗ ಒಂದು ವಾರದಲ್ಲಿ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿದ್ದಾರೆ.
ಇದನ್ನೂ ಓದಿ: ತಲೆಹೊಟ್ಟು ನಿವಾರಣೆಗೆ ಸಿಂಪಲ್ ವೀಳ್ಯದೆಲೆ ಹೇರ್ ಪ್ಯಾಕ್
ಬಸಮ್ಮನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಆರೋಪಿ ಸಿದ್ದಪ್ಪ ಕೊಪ್ಪಳದಲ್ಲಿ ಡಾಲ್ಫೀನ್ ಇಂಟರ್ನ್ಯಾಷನಲ್ ಗ್ರಾನೈಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಎಂ.ಎ, ಬಿ.ಇಡಿ ಮುಗಿಸಿದ್ದ ಆರೋಪಿ ಕಂಪನಿಯಲ್ಲಿ ಸೂಪರ್ ವೈಸರ್ ಆಗಿದ್ದನು. ಕಳೆದ 16 ವರ್ಷಗಳಿಂದ ಕೆಲಸ ಇಲ್ಲಿ ಕೆಲಸ ಮಾಡುತ್ತಿದ್ದನು. ಇನ್ನು ಸ್ಫೋಟಕ ತಂದದ ಬಗ್ಗೆ ತನಿಖೆ ಕೈಗೊಂಡ ಪೋಲೀಸರಿಗೆ ಹೇರ್ ಡ್ರೈಯರ್ ಒಳಗೆ ಡೆಟೊನೇಟರ್ ಜೋಡಿಸಿ ಸ್ಫೋಟಗೊಳ್ಳುವಂತೆ ಮಾಡಿದ್ದನು. ಇನ್ನು ಕಲ್ಲುಗಳನ್ನು ಬ್ಲಾಸ್ಟ್ ಮಾಡಲು ಬಳಸುವ ಡೆಟೋನೇಟರ್ ಅನ್ನು ಹೇರ್ ಡ್ರೈಯರ್ ಒಳಗಿಟ್ಟು ಇಟ್ಟು ಕೊಲೆಗೆ ಯತ್ನಿಸಿದ್ದ ಸಿದ್ದಪ್ಪನ ಪ್ರೇಯಸಿಯೇ ಕೈ ಕಳೆದುಕೊಂಡು ಬಲಿಪಶು ಆಗಿದ್ದಾಳೆ.