ಅದಾನಿ ನಂಬರ್‌ 1 ಶ್ರೀಮಂತರಾಗಿ ಇಂದಿಗೆ ಎರಡು ವರ್ಷ: 6 ತಂದ ಅದೃಷ್ಟ 8ರಲ್ಲಿ ಹೋಗಿದ್ದು ಹೇಗೆ?

Published : Nov 24, 2024, 09:15 AM IST
ಅದಾನಿ ನಂಬರ್‌ 1 ಶ್ರೀಮಂತರಾಗಿ ಇಂದಿಗೆ ಎರಡು ವರ್ಷ: 6 ತಂದ ಅದೃಷ್ಟ 8ರಲ್ಲಿ ಹೋಗಿದ್ದು ಹೇಗೆ?

ಸಾರಾಂಶ

ಏಷ್ಯಾದ ನಂಬರ್‌ ಒನ್‌ ಶ್ರೀಮಂತ ಪಟ್ಟಕ್ಕೇರಿದ್ದ ಗೌತಮ್‌ ಅದಾನಿ ಈಗ ಭಾರಿ ಸಂಕಷ್ಟದಲ್ಲಿದ್ದಾರೆ.  ಮೂರು ವರ್ಷಗಳ ಹಿಂದೆಯೇ ಇವರಿಗೆ ಇದರ ಎಚ್ಚರಿಕೆ ನೀಡಲಾಗಿತ್ತು! ಏನಿದು ವಿಷಯ?   

 ಭಾರತದ ಪ್ರಖ್ಯಾತ ಉದ್ಯಮಿ ಹಾಗೂ ಬಿಲೆನಿಯರ್ ಗೌತಮ್ ಅದಾನಿ ಇದೀಗ  ದೊಡ್ಡ ಮಟ್ಟದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ.  ಭಾರತೀಯ ಅಧಿಕಾರಿಗಳಿಗೆ ಕೋಟ್ಯಂತರ ರೂಪಾಯಿ ಲಂಚ ಕೊಟ್ಟಿರುವ ಆರೋಪ ಸೇರಿದಂತೆ ಇನ್ನೂ ಕೆಲವು ಆರೋಪಗಳು ಇವರ ಮೇಲೆ ಬರುತ್ತಿವೆ. ಭಾರತದಲ್ಲಿ ಸೌರಶಕ್ತಿಯಿಂದ ಪವರ್‌ ಉತ್ಪಾದನೆ ಮಾಡುವ ಯೋಜನೆಗಳಿಗೆ ಗುತ್ತಿಗೆಯನ್ನು ಸರಳವಾಗಿ ಪಡೆಯುವುದಕ್ಕೆ ಅಧಿಕಾರಿಗಳಿಗೆ   25 ಕೋಟಿ ಡಾಲರ್‌ ಕೊಟ್ಟಿದ್ದಾರೆ ಇಲ್ಲವೇ ಕೊಡಲು ಮುಂದಾಗಿದ್ದರು ಎನ್ನುವ ಗಂಭೀರ ಆರೋಪವೂ ಇವರ ಮೇಲಿದೆ. ಇದಾಗಲೇ  ಅಮೆರಿಕದ ಕೋರ್ಟ್‌ನಲ್ಲಿ ದೋಷಾರೋಪ ಪಟ್ಟಿಯನ್ನೂ ಸಲ್ಲಿಸಲಾಗಿದೆ.  ಮಾತ್ರವಲ್ಲದೇ ಬಂಧನಕ್ಕೆ ವಾರೆಂಟ್ ಸಹ ಹೊರಡಿಸಲಾಗಿದೆ.  ಈ ಪ್ರಕರಣದ ತನಿಖೆಯನ್ನು ವಿಶ್ವದ ಬಲಿಷ್ಠ  ತನಿಖಾ ಸಂಸ್ಥೆ ಎನಿಸಿರುವ ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ನಡೆಸುತ್ತಿದೆ. ಜೊತೆಗೆ,  ನ್ಯೂಯಾರ್ಕ್‌ನ ಅಮೆರಿಕದ ಅಟಾರ್ನಿ ಕಚೇರಿ ಹಾಗೂ ಡಿಪಾರ್ಟ್‌ಮೆಂಟ್ ಆಫ್ ಜಸ್ಟೀಸ್ ಕ್ರಿಮಿನಲ್ ಡಿವಿಷನ್‌ನಿಂದಲೂ  ವಿಚಾರಣೆ ನಡೆಸಲಾಗುತ್ತಿದೆ. ಈ ಎಲ್ಲಾ ಕಾರಣಗಳಿಂದ ಅದಾನಿ ವಿರುದ್ಧದ ಈ ಪ್ರಕರಣ ಗಂಭೀರ ಸ್ವರೂಪವನ್ನು ಪಡೆದುಕೊಂಡಿದೆ. 

ಕುತೂಹಲದ ಸಂಗತಿ ಏನೆಂದರೆ ಇಂದು ಅಂದರೆ ನವೆಂಬರ್‍‌ 24 ಗೌತಮ್‌ ಅದಾನಿಯವರು ನಂಬರ್‍‌ ಒನ್‌ ಶ್ರೀಮಂತ ಪಟ್ಟಕ್ಕೆ ಏರಿ ಎರಡು ವರ್ಷಗಳಾಗಿವೆ. 2022ರ ನವೆಂಬರ್‍‌ 24ರಂದು ಮೊದಲ ಬಾರಿಗೆ ಶ್ರೀಮಂತರ ಪಟ್ಟಕ್ಕೆ ಏರಿದ್ದರು. ಇದನ್ನೆಲ್ಲಾ ಗಣನೆಗೆ ತೆಗೆದುಕೊಂಡು  ಗೌತಮ್‌ ಅದಾನಿ ಅವರ ಜಾತಕ ನೋಡಲು ತಜ್ಞರು ಆರಂಭಿಸಿದ್ದಾರೆ.  ಪ್ರಖ್ಯಾತ ಸಂಖ್ಯಾಶಾಸ್ತ್ರಜ್ಞರಾಗಿರುವ ಗೌತಮ್‌ ಆಜಾದ್‌ ಅವರು 2021ರಲ್ಲಿಯೇ ಈ ಎಚ್ಚರಿಕೆಯನ್ನೂ ನೀಡಿದ್ದರು. ಅದಾನಿಯವರ ಜನ್ಮ ಜಾತಕದ ಪ್ರಕಾರ ಶೀಘ್ರದಲ್ಲಿಯೇ ಅವರ ಮೇಲೆ ದೊಡ್ಡ ತೂಗುಕತ್ತಿ ಇದೆ, ಅವರು ಕಟ್ಟಿದ ಸಾಮ್ರಾಜ್ಯ ಕುಸಿದು ಬೀಳಲಿದೆ ಎಂದು ಸೂಚನೆ ನೀಡಿದ್ದರು. ಆದರೆ ಅದು ಯಾವಾಗ, ಏನು ಎಂಬ ಬಗ್ಗೆ ನಿಖರ ಮಾಹಿತಿಯನ್ನು ಅವರು ನೀಡಿರಲಿಲ್ಲವಾದರೂ, ಶೀಘ್ರದಲ್ಲಿಯೇ ಇದು ಆಗಲಿದೆ ಎಂದು ಮೂರು ವರ್ಷಗಳ ಹಿಂದೆ ಹೇಳಿದ್ದರು. 

ಹಣವೇ ಸರ್ವಸ್ವ, ಇದೇ ಬದುಕು ಎನ್ನೋದೇ ಸತ್ಯ- ಮಕ್ಕಳಿಗೂ ಇದನ್ನೇ ಹೇಳಿಕೊಡಿ ಎಂದ ನಟಿ ನೀನಾ ಗುಪ್ತಾ!

ಅಷ್ಟಕ್ಕೂ ಅದಾನಿ ಅವರಿಗೆ ಸಂಖ್ಯೆ ಆರು ಇಡೀ ಜೀವನದಲ್ಲಿ ಅದೃಷ್ಟ ತಂದುಕೊಟ್ಟಿತ್ತು. ಆದರೆ ಎಂಟು ಅವರ ಬದುಕನ್ನೇ ದಿವಾಳಿ ಅಂಚಿಗೆ ತಂದು ನಿಲ್ಲಿಸಿದೆ. ಹಾಗಿದ್ದರೆ ಏನಿದು ಆರು ಮತ್ತು ಎಂಟು ಎಂದು ನೋಡುವುದಾದರೆ, ಸಂಖ್ಯಾಶಾಸ್ತ್ರಜ್ಞರಾಗಿರುವ ಗೌತಮ್‌ ಆಜಾದ್‌ ಅವರು ಹೇಳಿರುವ ಪ್ರಕಾರ, ಅವರಿಗೆ ಇಲ್ಲಿಯವರೆಗೆ ಅದೃಷ್ಟ ತಂದುಕೊಟ್ಟ ಸಂಖ್ಯೆ ಆರು. ಅವರು ಜನಿಸಿದ್ದು,  24/06/1962ರಂದು. ಜನಿಸಿರುವ ಸಂಖ್ಯೆ  2 ಮತ್ತು 4 ಸೇರಿದರೆ 6 ಆಗುತ್ತದೆ. ಜೊತೆಗೆ, ಹುಟ್ಟಿದ ತಿಂಗಳು ಕೂಡ ಆರು. 2022ರಲ್ಲಿ ನಂಬರ್‍‌ ಒನ್‌ ಶ್ರೀಮಂತರಾದರು. ಅಷ್ಟೂ ಸಂಖ್ಯೆಯನ್ನು ಕೂಡಿದರೆ ಬರುವ ಮೊತ್ತ ಆರು. ಅದು ಕೂಡ ನವೆಂಬರ್‍‌ 24. ಇಲ್ಲಿ ಕೂಡ ದಿನಾಂಕದ ಮೊತ್ತ ಆರು. ಕುತೂಹಲದ ವಿಷಯ ಎಂದರೆ, ಅವರು ಏಷ್ಯಾದ ನಂಬರ್‍‌ ಒನ್‌ ಶ್ರೀಮಂತ ಆಗಿದ್ದೂ 60ನೇ ವಯಸ್ಸಿನಲ್ಲಿ, ಇದು ಕೂಡ ಆರು! ಇದಕ್ಕೂ ಮುನ್ನ ಆರು ವರ್ಷಗಳಿಂದ ನಂಬರ್‍‌ ಒನ್ ಪಟ್ಟ ಪಡೆದಿದ್ದ ಮುಖೇಶ್‌ ಅಂಬಾನಿಯವರನ್ನು ಮೀರಿಸಿದ್ದರು. ಇಲ್ಲಿಯೂ ಆರು! 
  
ಇನ್ನು ಅಂಬಾನಿ ಅವರ  ಹುಟ್ಟಿನ ಎಲಿಮೆಂಟ್‌ ನೀರು. ಆದ್ದರಿಂದ  ಅವರು ತಮ್ಮ ಜನ್ಮಸ್ಥಳ ಮತ್ತು ನೀರಿನ ಸಮೀಪವಿರುವ ಮುಂಬೈ ನಗರದಲ್ಲಿಯೇ ಜೀವನ ಆರಂಭಿಸಿ, ತಮ್ಮ ಸಾಮ್ರಾಜ್ಯವನ್ನು ಜಲ ಸಂಬಂಧಿತ ವ್ಯವಹಾರದೊಂದಿಗೆ (ಬಂದರು ಅಭಿವೃದ್ಧಿ ಮತ್ತು ರಫ್ತು ಆಮದು) ನಿರ್ಮಿಸಿದರು. ಇವೆಲ್ಲವುಗಳಿಗಿಂತಲೂ ಮುಖ್ಯವಾಗಿ ಅವರು ಹೇಳಿದ್ದು, ಗೌತಮ್ ಅದಾನಿ ಬೇಗ ಅಥವಾ ನಂತರ ದೊಡ್ಡ ಆರ್ಥಿಕ ಮತ್ತು ಕಾನೂನು ತೊಂದರೆಗೆ ಸಿಲುಕುತ್ತಾರೆ ಮತ್ತು ಸಾಮ್ರಾಜ್ಯವನ್ನು ಕಳೆದುಕೊಳ್ಳುತ್ತಾರೆ ಎಂಬುದನ್ನು ನೆನಪಿಡಿ ಎಂಬುದು. ಇದೀಗ ಹೈಲೈಟ್‌ ಆಗುತ್ತಿದೆ. 2024 ಅನ್ನು ಒಟ್ಟುಗೂಡಿದರೆ ಸಿಗುವ ಸಂಖ್ಯೆ ಎಂಟು. ಆರರಿಂದ ಖ್ಯಾತಿ ಪಡೆದ ಅದಾನಿಯವರಿಗೆ ಎಂಟು ಶಾಪವಾಯಿತು ಎನ್ನುವ ಚರ್ಚೆ ಸೋಷಿಯಲ್‌ ಮೀಡಿಯಾದಲ್ಲಿ ಆರಂಭವಾಗಿದೆ. 

ಪತ್ನಿಯನ್ನು ಪ್ರವಾಸಕ್ಕೆ ಕರೆದೊಯ್ದು ಶೇಖ್‌ಗೆ ಮಾರಿ ತಲಾಖ್‌ ನೀಡಿದ ಭೂಪ! ಯುವತಿಯ ಕಣ್ಣೀರ ಕಥೆ ಕೇಳಿ..

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ