ಪೊಲೀಸ್ ಕಾನ್‌ಸ್ಟೇಬಲ್ ಪತ್ನಿಗೆ ಲವರ್ ಕಾಟ ಹೆಚ್ಚಾಗಿತ್ತು. ಪತ್ನಿಯ ಕೆಲ ವಿಡಿಯೋ ಫೋಟೋಗಳನ್ನು ಬಹಿರಂಗಪಡಿಸುವ ವಾರ್ನಿಂಗ್ ನೀಡಿದ್ದ. ಇದು ಪೊಲೀಸಪ್ಪನ ಪಿತ್ತ ನೆತ್ತಿಗೇರಿಸಿದೆ. ಪತ್ನಿ ಹಳೇ ಲವರ್‌ನ ಕತೆ ಮುಗಿಸಿ ಹಲ್‌ದ್ವಾನಿ ಹಿಂಸಾಚಾರ ಪ್ರದೇಶಕ್ಕೆ ಎಸೆದಿದ್ದ. ಇದರಿಂದ ಹಲ್‌ದ್ವಾನಿ ಗಲಭೆಯಲ್ಲಿ ಮೃತಪಟ್ಟ ಸಂಖ್ಯೆ 6 ಎಂಬ ವರದಿಯಿಂದ ನಿಟ್ಟುಸಿರುಬಿಟ್ಟಿದ್ದ. ಆದರೆ ಗಲಭೆಯಲ್ಲಿ ಮೃತಪಟ್ಟವರ ಸಂಖ್ಯೆ 5ಕ್ಕಿಳಿಯುತ್ತಿದ್ದಂತೆ 6ನೇ ಮೃತದೇಹ ಪೊಲೀಸ್‌ನ ಅಸಲಿ ಕತೆ ಹೇಳಿದೆ.
ಡೆಹ್ರಡೂನ್(ಫೆ.17) ಉತ್ತರಖಂಡದ ಹಲ್‌ದ್ವಾನಿಯಲ್ಲಿ ಅಕ್ರಮ ಮದರಸಾ ತೆರವುಗೊಳಿಸುವ ವೇಳೆ ಹಿಂಸಾಚಾರ ಭುಗಿಲೆದ್ದಿತ್ತು. ಮುಸ್ಲಿಮ್ ಸಮುದಾಯ ಪೊಲೀಸರು ಹಾಗೂ ಅಧಿಕಾರಿಗಳ ಮೇಲೆ ಭೀಕರ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ಹಿಂಸಾಚಾರ ಭುಗಿಲೆದ್ದಿತ್ತು. ಉದ್ರಿಕ್ತರು ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ್ದರು. ಪೊಲೀಸ್ ವಾಹನ ಸೇರಿದಂತೆ ಹಲವು ವಾಹನಗಳು ಹೊತ್ತಿ ಉರಿದಿತ್ತು. ಈ ಹಿಂಸಾಚಾರ ನಿಯಂತ್ರಿಸಲು ಪೊಲೀಸರು ಹರಸಾಹಸ ಮಾಡಬೇಕಾಯಿತು. ಪ್ರತಿದಾಳಿ ನಡೆಸಲಾಗಿತ್ತು. ಹಿಂಸಾಚಾರದಲ್ಲಿ 6 ಮೃತದೇಹಗಳನ್ನು ಪತ್ತೆಯಾಗಿತ್ತು. ಆದರೆ ಹಿಂಸಾಚಾರಕ್ಕೆ ಬಲಿಯಾಗಿದ್ದು ಐವರು ಮಾತ್ರ. ಒಂದು ಮೃತದೇಹ ಅಸಲಿ ಕತೆ ಯನ್ನು ಬಿಚ್ಚಿಟ್ಟಿದೆ.
ಹಲ್‌ದ್ವಾನಿ ವಲಯ ವ್ಯಾಪ್ತಿಯಲ್ಲಿದ್ದ ಪೊಲೀಸ್ ಪೇದೆ ಬೀರೇಂದ್ರ ಸಿಂಗ್ ಪತ್ನಿಗೆ ಲವರ್ ಪ್ರಕಾಶ್ ಕುಮಾರ್ ಕಾಟ ಹೆಚ್ಚಾಗಿತ್ತು. ಬೀರೇಂದ್ರ ಸಿಂಗ್ ಪತ್ನಿ ಕದ್ದು ಮುಚ್ಚಿ ಪ್ರಕಾಶ್ ಕುಮಾರ್ ಜೊತೆಗಿನ ರಹಸ್ಯ ಪ್ರೀತಿ ಮುಂದುವರಿದಿದ್ದು. ಪತ್ನಿಯ ಕಾಮುಕನ ಕತೆ ಅಂತ್ಯಗೊಳಿಸಲು ಪೊಲೀಸ್ ಪೇದೆ ಬೀರೇಂದ್ರ ಸಿಂಗ್ ಪ್ಲಾನ್ ರೆಡಿ ಮಾಡಿದ್ದ. ಇದಕ್ಕೆ ಪತ್ನಿಯ ಸಹೋದರ ಕೂಡ ಸಾಥ್ ನೀಡಿದ್ದ.
undefined
ನಮ್ಮನ್ನು ಜೀವಂತ ಸುಡಲು ಯತ್ನ, ಗಲಭೆಯಲ್ಲಿ ಗಾಯಗೊಂಡ ಮಹಿಳಾ ಪೊಲೀಸ್ ಪೇದೆ ನೋವಿನ ಮಾತು!
ಇದೇ ವೇಳೆ ಹಲ್‌ದ್ವಾನಿಯಲ್ಲಿ ಭಾರಿ ಹಿಂಸಾಚಾರ ನಡೆದಿತ್ತು. ಸರಿಸುಮಾರು ಒಂದು ವಾರಗಳ ಕಾಲ ಈ ಗಲಭೆ ಮುಂದುವರಿದಿತ್ತು. ಈ ಗಲಭೆ ನಡುವೆ ಬೀರೇಂದ್ರ ಸಿಂಗ್ ತನ್ನ ಪತ್ನಿಯ ಲವರ್ ಪ್ರಕಾಶ್ ಕುಮಾರ್ ಹತ್ಯೆ ಮಾಡಿದ್ದ. ಬಳಿಕ ಯಾರಿಗೂ ತಿಳಿಯದಂತೆ ಪ್ರಕಾಶ್ ಕುಮಾರ್ ಮೃತದೇಹವನ್ನು ಹಲ್‌ದ್ವಾನಿ ಗಲಭೆ ಪ್ರದೇಶಕ್ಕೆ ಎಸೆಯಲಾಗಿತ್ತು.
ಗಲಭೆಯಲ್ಲಿ ಉದ್ರಿಕ್ತರ ದಾಳಿಗೆ ಪ್ರತಿಯಾಗಿ ಪೊಲೀಸರು ಕೂಡ ದಾಳಿ ನಡೆಸಿದ್ದರು. ಗಲಭೆ, ಹಿಂಸಾಚಾರದಲ್ಲಿ ಕೆಲ ಸಾವು ನೋವುಗಳ ಸಂಭವಿಸಿತ್ತು. ಹಿಂಸಾಚಾರ ನಿಯಂತ್ರಿಸಿ ಮೃತದೇಹಗಳನ್ನು ವಶಕ್ಕೆ ಪಡೆದು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ಈ ವೇಳೆ ಪ್ರಕಾಶ್ ಮೃತದೇಹಲ್ಲಿ ಸಿಕ್ಕ ಮೊಬೈಲ್ ಫೋನ್ ಕೆಲ ಸುಳಿವು ನೀಡಿತ್ತು. ಈ ಫೋನ್ ಪರಿಶೀಲಿಸಿದ ಪೊಲೀಸರು ಒಂದು ನಂಬರ್‌ಗೆ ಪ್ರತಿ ದಿನ ಕರೆ ಮಾಡಿ ಮಾತನಾಡಿರುವುದು ಪತ್ತೆಯಾಗಿದೆ. ಈ ನಂಬರ್ ಪತ್ತೆ ಹಚ್ಚಿದಾಗ ಇದು ಪೊಲೀಸ್ ಪೇದೆ ಬೀರೇಂದ್ರ ಸಿಂಗ್ ಪತ್ನಿಯ ನಂಬರ್.
ಪೊಲೀಸರ ಜೀವಂತ ಸುಡಲು ಪೂರ್ವನಿಯೋಜಿತ ದಾಳಿ, ಮದರಸಾ ತೆರವು ಗಲಭೆ ಕುರಿತು ಡಿಸಿ ಸ್ಫೋಟಕ ಮಾಹಿತಿ!
ಪತ್ನಿಯನ್ನು ವಶಕ್ಕೆ ಪಡೆದು ಮೃತ ವ್ಯಕ್ತಿಕುರಿತು ಕೇಳಿದಾಗ ತನ್ನ ರಹಸ್ಯ ಸಂಬಂಧದ ಮಾಹಿತಿ ಹೊರಬಂದಿದೆ. ಇದರ ಬೆನ್ನಲ್ಲೇ ಬೀರೇಂದ್ರ ಸಿಂಗ್ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ ಅಸಲಿ ಹತ್ಯೆ ಘಟನೆ ಬೆಳಕಿಗೆ ಬಂದಿದೆ. ಪತ್ನಿಯ ವಿಡಿಯೋಗಳನ್ನು ಬಹಿರಂಗಪಡಿಸುವುದಾಗಿ ಬೆದರಿಸಿದ್ದ. ಹೀಗಾಗಿ ಹತ್ಯೆ ಮಾಡಿರುವುದಾಗಿ ಬೀರೇಂದ್ರ ಸಿಂಗ್ ಹೇಳಿದ್ದಾನೆ.