ಲಿವ್‌ ಇನ್‌ ಸಂಗಾತಿ ಕೊಂದು 40 ಪೀಸ್‌ ಮಾಡಿದ ವ್ಯಕ್ತಿ, ಮಾಂಸದ ಪೀಸ್‌ ನಾಯಿ ಕಚ್ಚಿಕೊಂಡು ಹೋಗುವಾಗ ಪತ್ತೆಯಾಯ್ತು ಕೇಸ್‌!

By Santosh Naik  |  First Published Nov 28, 2024, 2:10 PM IST

ಕೊಲೆ ನಡೆದು 15 ದಿನಗಳ ಬಳಿಕ ಕೇಸ್‌ ಪತ್ತೆಯಾಗಿದೆ. ಅರಣ್ಯ ಪ್ರದೇಶದಿಂದ ನಾಯಿ ಮಾನವನ ಮಾಂಸದ ಪೀಸ್‌ ಕಚ್ಚಿಕೊಂಡು ಓಡುವಾಗ ಘಟನೆ ಪೊಲೀಸರ ಗಮನಕ್ಕೆ ಬಂದಿದೆ.


ರಾಂಚಿ (ನ.28): ಮಾಂಸದ ಅಂಗಡಿಯಲ್ಲಿ ಮಾಂಸ ಕತ್ತರಿಸುವ ಕೆಲಸ ಮಾಡುತ್ತಿದ್ದ 25 ವರ್ಷದ ಯುವಕ ತನ್ನ ಲಿವ್‌ ಇನ್‌ ಸಂಗಾತಿಯನ್ನು ಕೊಂದು, ಆಕೆಯ ದೇಹವನ್ನು 40 ಪೀಸ್‌ಗಳನ್ನಾಗಿ ಕತ್ತರಿಸಿದ ಭೀಬತ್ಸ ಘಟನೆ ನಡೆದಿದೆ. ಜಾರ್ಖಂಡ್‌ನ ಕುಂತಿ ಜಿಲ್ಲೆಯ ಗ್ರಾಮವೊಂದರ ಅರಣ್ಯ ಪ್ರದೇಶದಲ್ಲಿ ಯುವತಿಯ ದೇಹದ ಪೀಸ್‌ಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಪಟ್ಟಂತೆ ಪೊಲೀಸರು ನರೇಶ್‌ ಭೇಂಗ್ರಾ ಎನ್ನುವ ವ್ಯಕ್ತಿಯನ್ನು ಬಂಧಿಸಿದ್ದಾರೆ. ಲಿವ್‌ ಇನ್ ಸಂಗಾತಿಯ ಕೊಂದು ಆಕೆಯ ದೇಹವನ್ನು 40 ಪೀಸ್‌ ಮಾಡಿದ 15 ದಿನಗಳ ಬಳಿಕ ಇದು ಗೊತ್ತಾಗಿದೆ. ನವೆಂಬರ್‌ 24 ರಂದು ಜರಾಯಿಗರ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬರುವ ಜೋರ್ದಾಗ್‌ ಗ್ರಾಮದಲ್ಲಿ ಬೀದಿ ನಾಯಿಯೊಂದು ಮಾನವನ ದೇಹದ ಪೀಸ್‌ಅನ್ನು ಕಚ್ಚಿಕೊಂಡು ಓಡುತ್ತಿರುವಾಗ ಕೊಲೆಯ ಕೇಸ್‌ ಗೊತ್ತಾಗಿದೆ.

ಭೇಂಗ್ರಾ, ತನ್ನದೇ ಜಿಲ್ಲೆಯ 24 ವರ್ಷದ ಯುವತಿಯೊಂದಿಗೆ ಲಿವ್‌ ಇನ್‌ ರಿಲೇಷನ್‌ಷಿಪ್‌ನಲ್ಲಿದ್ದ. ಇಬ್ಬರೂ ಕೂಡ ಕೆಲ ವರ್ಷಗಳ ಕಾಲ ತಮಿಳುನಾಡಿನಲ್ಲಿ ಒಟ್ಟಿಗೆ ವಾಸವಿದ್ದರು. ಕೆಲ ತಿಂಗಳ ಹಿಂದೆ ಈತ ಜಾರ್ಖಂಡ್‌ಗೆ ವಾಪಾಸಾಗಿದ್ದ. ಈ ವೇಳೆ ಲಿವ್‌ ಇನ್‌ ಸಂಗಾತಿಗೆ ತಿಳಿಯದೇ ಮತ್ತೊಂದು ಮದುವೆಯಾಗಿದ್ದಾನೆ. ಬಳಿಕ ಪತ್ನಿಗೂ ತಿಳಿಸದೇ ತಮಿಳುನಾಡಿಗೆ ವಾಪಾಸಗಿ ಲಿವ್‌ ಇನ್ ಸಂಗಾತಿಯ ಜೊತೆ ಸಂಸಾರ ಮಾಡುತ್ತಿದ್ದ.

Tap to resize

Latest Videos

ನವೆಂಬರ್‌ 8 ರಂದು ಈ ಘಟನೆ ನಡೆದಿದೆ. ಇಬ್ಬರೂ ಲಿವ್‌ ಇನ್‌ ಸಂಗಾತಿ ಜೊತೆ ಜಾರ್ಖಂಡ್‌ನ ಕುಂತಿ ಜಿಲ್ಲೆಗೆ ವಾಪಾಸಾಗಿದ್ದ. ಜಾರ್ಖಂಡ್‌ನಲ್ಲಿ ಈಗಾಗಲೇ ಇನ್ನೊಂದು ವಿವಾಹವಾಗಿದ್ದ ಆಕೆಯನ್ನು ಮನೆಗೆ ಕರೆದುಕೊಂಡು ಹೋಗುವ ಇರಾದೆ ಹೊಂದಿರಲಿಲ್ಲ. ಅದರ ಬದಲು, ಆಕೆಯನ್ನು ಜೋರ್ದಾಗ್‌ ಗ್ರಾಮದಲ್ಲಿ ತನ್ನ ಮನೆಯ ಬಳಿಯೇ ಇದ್ದ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗು ಆಕೆಯನ್ನು ಸಾಯಿಸಿ, ದೇಹವನ್ನು 40 ಪೀಸ್‌ ಮಾಡಿ ಎಸೆದಿದ್ದಾನೆ. ಈ ವ್ಯಕ್ತಿಯನ್ನೀಗ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Chitradurga: 20 ವರ್ಷದ ಯುವತಿಗೆ 40ರ ಅಂಕಲ್‌ ಜೊತೆ ಲವ್‌-ಮದುವೆ; ಅಳಿಯನ ಜೀವ ತೆಗೆದ ಪೋಷಕರು!

ತಮಿಳುನಾಡಿನಲ್ಲಿ ಚಿಕನ್‌ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆತ, ಕೋಳಿಯನ್ನು ಕಟ್‌ ಮಾಡುವುದರಲ್ಲಿ ಪರಿಣಿತಿ ಪಡೆದಿದ್ದ ಎಂದು ಪ್ರಕರಣದ ತನಿಖಾಧಿಕಾರಿ ಇನ್ಸ್‌ಪೆಕ್ಟರ್‌ ಅಶೋಕ್‌ ಸಿಂಗ್‌ ಹೇಳಿದ್ದಾರೆ.

Mangaluru: ಲವ್‌, ಸೆಕ್ಸ್‌, ದೋಖಾ ಕೇಸ್‌; ಅಪ್ರಾಪ್ತ ಯುವತಿ ಸಾವು

ಯುವತಿಯ ಮೃತದೇಹವನ್ನು 40 ರಿಂದ 50 ಪೀಸ್‌ ಮಾಡಿ ಕತ್ತರಿಸಿದ್ದನ್ನು ವ್ಯಕ್ತಿ ಒಪ್ಪಿಕೊಂಡಿದ್ದಾನೆ. ದೇಹವನ್ನು ಕತ್ತರಿಸಿ ಅದನ್ನು, ಕಾಡು ಪ್ರಾಣಿಗಳಿಗೆ ನೀಡುವ ಉದ್ದೇಶ ತನ್ನಲ್ಲಿತ್ತು ಎಂದಿದ್ದಾನೆ. ನವೆಂಬರ್‌ 24 ರಂದು ಬೀದಿ ನಾಯಿಯೊಂದು ಮಾನವನ ಕೈ ಪೀಸ್‌ಅನ್ನು ಕಚ್ಚಿಕೊಂಡು ಹೋಗುವಾಗ ಘಟನೆ ಗೊತ್ತಾಗಿದ್ದು, ಅದೇ ದಿನ ದೇಹದ ಹಲವು ಭಾಗಗಳನ್ನು ವಶಕ್ಕೆ ಪಡೆದುಕೊಂಡಿದ್ದೇವೆ' ಎಂದು ತಿಳಿಸಿದ್ದಾರೆ.

ಲಿವ್‌ ಇನ್‌ ಸಂಗಾತಿಗೆ ನರೇಶ್‌ ಭೇಂಗ್ರಾ ಇನ್ನೊಂದು ಮದುವೆಯಾಗಿರುವುದು ಗೊತ್ತಿರಲಿಲ್ಲ. ತಮ್ಮ ಊರು ಕುಂತಿಗೆ ವಾಪಾಸಾಗಿ ಅಲ್ಲಿಯೇ ಬದುಕೋಣ ಎಂದು ಒತ್ತಡ ಹೇರುತ್ತಿದ್ದಳು. ರಾಂಚಿಗೆ ತಲುಪಿದ ಬಳಿಕ, ಟ್ರೇನ್‌ ಹತ್ತು ಅವರು ನರೇಶ್‌ ಭೇಂಗ್ರಾ ಗ್ರಾಮಕ್ಕೆ ಬಂದಿದ್ದರು. ಆತನ ಯೋಜನೆಯ ಪ್ರಕಾರ, ಲಿವ್‌ ಇನ್‌ ಸಂಗಾತಿಯನ್ನು ಕುಂತಿಗೆ ಆಟೋರಿಕ್ಷಾದಲ್ಲಿ ಕರೆದುಕೊಂಡು ಹೋಗಿದ್ದಾನೆ. ಮನೆಯ ಹೊರಗಡೆ ಆಕೆಯನ್ನು ಆಟೋದಲ್ಲಿಯೇ ನಿಲ್ಲಿಸಿ, ವಾಪಾಸ್‌ ಬರುತ್ತೇನೆ ಎಂದಿದ್ದಾರೆ. ಮನೆಗ ಹೋದ ಆತ ಹರಿತ ಆಯುಧಗಳೊಂದಿಗೆ ಮರಳಿದ್ದಾನೆ. ದುಪ್ಪಟ್ಟಾವನ್ನು ಆಕೆಯ ಕುತ್ತಿಗೆಗೆ ಸುತ್ತಿ ಸಾಯಿಸುವ ಮುನ್ನ ರೇಪ್‌ ಕೂಡ ಮಾಡಿದ್ದಾನೆ. ಬಳಿಕ ಆಕೆಯ ದೇಹವನ್ನು 40-50 ಪೀಸ್‌ ಮಾಡಿ ಅರಣ್ಯದಲ್ಲಿ ಎಸೆದು ವಾಪಾಸ್‌ ಬಂದಿದ್ದಾನೆ. ಬಳಿಕ ತನ್ನ ಪತ್ನಿಯ ಜೊತೆಗೆ ವಾಸವಾಗಿದ್ದ.

'ಪುನೀತ್‌ ಸಮಾಧಿ ಮೇಲೆ ಆಣೆ ಮಾಡಿ..' ನಟಿ ದೀಪಿಕಾ ದಾಸ್‌ ತಾಯಿಗೆ ಬೆದರಿಸಿದ ಕಿಡಿಗೇಡಿ!

ಮೃತದೇಹದ ಅಂಗಾಂಗಗಳು ಪತ್ತೆಯಾಗಿದ್ದು, ಕೊಲೆಯಾದ ಮಹಿಳೆಯ ಆಧಾರ್ ಕಾರ್ಡ್ ಸೇರಿದಂತೆ ಸಾಮಾನುಗಳಿದ್ದ ಬ್ಯಾಗ್ ಕೂಡ ಕಾಡಿನಲ್ಲಿ ಪತ್ತೆಯಾಗಿದೆ. ಮಹಿಳೆಯ ತಾಯಿಯನ್ನು ಸ್ಥಳಕ್ಕೆ ಕರೆಸಿದಾಗ ಅವರು ತಮ್ಮ ಮಗಳ ವಸ್ತುಗಳನ್ನು ಗುರುತಿಸಿದ್ದಾರೆ. ಈ ಘಟನೆಯು ಸ್ಥಳೀಯ ಜನರ ಆಘಾತಕ್ಕೆ ಕಾರಣವಾಗಿದೆ. 2022 ರ ಶ್ರದ್ಧಾ ವಾಕರ್ ಕೊಲೆ ಪ್ರಕರಣ, ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಮಹಾಲಕ್ಷ್ಮೀ ಪ್ರಕರಣ ಇನ್ನೂ ಹಸಿಯಾಗಿರುವಾಗಲೇ ಅದೇ ರೀತಿಯ ಘಟನೆ ನಡೆದಿದೆ.
 

click me!