ಶಿಕ್ಷಕಿ ಮೇಲೆ ಲೈಂಗಿಕ ಕಿರುಕುಳ ಆರೋಪ: ಕೆಪಿಸಿಸಿ ಕಾರ್ಯದರ್ಶಿ ವಿರುದ್ಧ ದೂರು

By Sathish Kumar KH  |  First Published Nov 28, 2024, 7:53 PM IST

ಕೆಪಿಸಿಸಿ ಕಾರ್ಯದರ್ಶಿ ಬಿ. ಗುರಪ್ಪ ನಾಯ್ಡು ವಿರುದ್ಧ ಶಿಕ್ಷಕಿಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಹೊರಿಸಿ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಿಜಿಎಸ್ ಬ್ಲೂಮ್ ಫೀಲ್ಡ್ ಶಾಲೆಯ ಅಧ್ಯಕ್ಷರೂ ಆಗಿರುವ ನಾಯ್ಡು, ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕಿಯ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ,  ವಿಡಿಯೋ ಮಾಡಿ ಬೆದರಿಕೆ ಹಾಕುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.


ಬೆಂಗಳೂರು (ನ.28): ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಾರ್ಯದರ್ಶಿಯಾಗಿರುವ ಬಿ. ಗುರಪ್ಪ ನಾಯ್ಡು ವಿರುದ್ಧ ಶಿಕ್ಷಕಿಯೊಬ್ಬರು ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಚನ್ನಮ್ನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೆಂಗಳೂರು ನಗರ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾಗಿರುವ ತ್ಯಾಗರಾಜನಗರದ ಬಿಜಿಎಸ್ ಬ್ಲೂಮ್ ಫೀಲ್ಡ್ ಶಾಲೆಯಲ್ಲಿ ಈ ಘಟನೆ ನಡೆದಿದೆ. ಕೆಪಿಸಿಸಿ ಕಾರ್ಯದರ್ಶಿ ಗುರಪ್ಪ ನಾಯ್ಡು ಬಿಜಿಎಸ್ ಬ್ಲೂಮ್‌ ಫೀಲ್ಡ್ ಶಾಲೆಯ ಅಧ್ಯಕ್ಷರೂ ಆಗಿದ್ದಾರೆ. ಇದೇ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕಿ ತನಗೆ ಗುರಪ್ಪ ನಾಯ್ಡು ಲೈಂಗಿಕ ಕಿರುಕುಳ ನೀಡಿದ್ದರ ಬಗ್ಗೆ ಹಾಗೂ ಇತರೆ ಶಿಕ್ಷಕಿಯರ ಮೇಲೆ ಬಲವಂತವಾಗಿ ಅತ್ಯಾಚಾರ ಮಾಡಿ ಅದರ ವಿಡಿಯೋ ಇಟ್ಟುಕೊಂಡು ಬೆದರಿಕೆ ಹಾಕುತ್ತಿರುವ ಬಗ್ಗೆ ದೂರಿನಲ್ಲಿ ತಿಳಿಸಿದ್ದಾರೆ.  ಸಿಬ್ಬಂದಿಯನ್ನು ತನ್ನ ಕಾಮತೃಷೆ ತೀರಿಸಿಕೊಳ್ಳಲು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಶಾಲೆಯಲ್ಲಿ ಶಿಕ್ಷಕರು ಸೇರಿದಂತೆ ಎಲ್ಲ ಸಿಬ್ಬಂದಿ ವರ್ಗದಲ್ಲಿ ಶೇ.75ಕ್ಕಿಂತ ಹೆಚ್ಚು ಮಹಿಳೆಯರನ್ನೇ ನೇಮಕ ಮಾಡಿಕೊಂಡಿದ್ದಾರೆ. ಇದರಲ್ಲಿ ಕೆಲವರ ಮೇಲೆ ತಮ್ಮ ಕಾಮುಕ ದೃಷ್ಟಿಯನ್ನು ಬೀರಿ, ಅವರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಶಿಕ್ಷಕಿ ಆರೋಪ ಮಾಡಿದ್ದಾರೆ.

Latest Videos

undefined

ಇನ್ನು ದೂರು ಕೊಟ್ಟಿರುವ ಶಿಕ್ಷಕಿ ಗುರುಪ್ಪನಾಯ್ಡು ಅವರ ಬಿಜಿಎಸ್ ಬ್ಲೂಮ್ ಫೀಲ್ಡ್ ಶಾಲೆಯಲ್ಲಿ 2021ರಿಂದ 2023ರ ಶೈಕ್ಷಣಿಕ ಅವಧಿಯಲ್ಲಿ ಸೇವೆ ಮಾಡಿದ್ದಾರೆ. ಈ ವೇಳೆ ಶಿಕ್ಷಕಿಯನ್ನು ತನ್ನ ಚೇಂಬರ್‌ಗೆ ಕರೆದು ಅಶ್ಲೀಲವಾಗಿ ದೇಹ ಮುಟ್ಟುತ್ತಾ ಕಿರುಕುಳ ನೀಡುತ್ತಿದ್ದರು. ಇಲ್ಲಿ ಕೆಲಸ ಮಾಡುವ ಬಹುತೇಕ ಶಿಕ್ಷಕಿಯರು ಬಡತನ ಮತ್ತು ಮಧ್ಯಮ ವರ್ಗದವರಾಗಿದ್ದು, ಕೆಲವರ ಮಕ್ಕಳು ಕೂಡ ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಿಕ್ಷಕಿಯರ ಬಡತನವನ್ನೇ ಬಂಡವಾಳ ಮಾಡಿಕೊಂಡು ಲೈಂಗಿಕ ಕಿರುಕುಳ ಕೊಡುತ್ತಿದ್ದರು. ಕೆಲವು ಬಾರಿ ಬೆದರಿಕೆ ಹಾಕಿ ಬಳಸಿಕೊಂಡರೆ, ಇನ್ನು ಕೆಲವರ ಮೇಲೆ ಬಲವಂತವಾಗಿ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಮಾಜಿ ಶಾಸಕ ಉಮಾಪತಿಗೆ ಜೈಲು ಶಿಕ್ಷೆ

ಶಿಕ್ಷಕಿಯರ ಖಾಸಗಿ ವಿಡಿಯೋಗಳನ್ನು ಹಾಗೂ ಫೋಟೋಗಳನ್ನು ತೆಗೆದು ಇಟ್ಟುಕೊಂಡು ಪುನಃ ಅವುಗಳನ್ನು ತೋರಿಸಿ ಕಿರುಕುಳ ನೀಡುತ್ತಿದ್ದರು. ಇದಕ್ಕೆ ವಿರೋಧಿಸಿದರೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ನಿಮ್ಮ ಹಾಗೂ ನಿಮ್ಮ ಕುಟುಂಬ ಮಾನ ಮರ್ಯಾದೆ ಹರಾಜು ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದರು. ಒಂದು ವೇಳೆ ಪೊಲೀಸ್ ಠಾಣೆಗೆ ದೂರು ನೀಡಿದರೆ ನಿಮ್ಮನ್ನು ಜೀವಂತವಾಗಿ ಉಳಿಸುವುದಿಲ್ಲ ಎಂದು ಜೀವ ಬೆದರಿಕೆ ಹಾಕುತ್ತಿದ್ದರು ಎಂದು ಶಿಕ್ಷಕಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ನಾನು ಕೆಲಸ ಮಾಡುವ ಅವಧಿಯಲ್ಲಿ ನನ್ನನ್ನು ಆಗಾಗ ತಮ್ಮ ಚೇಂಬರ್‌ಗೆ ಕರೆಸಿಕೊಂಡು ಸುಖಾ ಸುಮ್ಮನೆ ಲೈಂಗಿಕವಾಗಿ ಬಳಸಿಕೊಳ್ಳುವುದಕ್ಕೆ ನನ್ನ ಮೇಲೆ ಒತ್ತಡ ಹಾಕುತ್ತಿದ್ದರು. ನಾನು ಒಪ್ಪಿಕೊಳ್ಳದೇ ಹೊರಗೆ ಹೋಗುತ್ತಿದ್ದನು. 2023ರಲ್ಲಿ ನನ್ನನ್ನು ಚೇಂಬರ್‌ಗೆ ಕರೆಸಿಕೊಂಡು ನಾನು ಹೇಳಿದ್ದಕ್ಕೆ ಯಾವಾಗ ರೆಡಿ ಆಗುತ್ತೀಯಾ? ಎಂದು ಕೇಳಿದ್ದರು. ಆಗ ನಾನು ಅಂತವಳಲ್ಲ, ಮರ್ಯಾದಸ್ಥ ಕುಟುಂಬದಿಂದ ಬದವಳು ಎಂದು ಹೇಳಿದರೂ ಕೇಳದದೇ ಬಲವಂತವಾಗಿ ಕೈ ಹಿಡಿದು ಎಳೆದಾಡಿದ್ದಾರೆ. ಹೀಗೆಲ್ಲಾ ವರತಿಸಬೇಡಿ ಎಂದಿದ್ದಕ್ಕೆ ಕೋಪಗೊಂಡು ಎಲ್ಲರೂ ನನ್ನೊಂದಿಗೆ ಸಹಕರಿಸಿಕೊಂಡು ಹೋಗುತ್ತಿದ್ದಾರೆ. ನಿನಗೆ ಎಲ್ಲರಿಗಿಂತ ಜಾಸ್ತಿ ಪ್ರೀತಿ ತೋರಿಸಿದರೂ ಮಾತು ಕೇಳುತ್ತಿಲ್ಲ. ನೀನು ನನ್ನ ಹತ್ತಿರ ಒಂದು ಬಾರಿ ತಳ್ಳಿಸಿಕೊಂಡರೆ ಸರಿ ಹೋಗುತ್ತೀಯಾ, ಇಲ್ಲವೆಂದರೆ ಬೂಟಿನಲ್ಲಿ ಹೊಡೆಯುತ್ತೇನೆ ಎಂದು ಅವ್ಯಾಚ್ಯವಾಗಿ ನಿಂದಿಸಿದ್ದಾರಂತೆ. ಆಗ ಶಾಲೆಯಿಂದ ಅಳುತ್ತಾ ಮನೆಗೆ ಬಂದ ಮಹಿಳೆ ಈವರೆಗೆ ಶಾಲೆಗೆ ಹೋಗಿಲ್ಲವಂತೆ. ಇದೀಗ ಮನಸ್ಸು ತಡೆಯಲಾಗದೇ ಗುರಪ್ಪ ನಾಯ್ಡು ವಿರುದ್ಧ ದೂರು ನೀಡಿದ್ದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ದೆಹಲಿಯಿಂದ ಸ್ಪಾ ಕೆಲಸಕ್ಕೆ ಬೆಂಗಳೂರಿಗೆ ಬಂದು ನೇಣಿಗೆ ಶರಣಾದ ಯುವತಿ; ಅಂಥದ್ದೇನಾಯ್ತು?

click me!