ಜಾತಿ ನಿಂದನೆ: ಹಾಕಿ ಸೋಲಿನ ನಂತರ ವಂದನಾ ಕುಟುಂಬಕ್ಕೆ ಕೊಲೆ ಬೆದರಿಕೆ

By Suvarna News  |  First Published Aug 5, 2021, 5:32 PM IST
  • ಹಾಕಿ ಪಟು ವಂದನಾ ಕಟಾರಿಯಾಗೆ ಜಾತಿ ನಿಂದನೆ
  • ಒಲಿಂಪಿಕ್ಸ್‌ನಲ್ಲಿ ಸೋತ ನಂತರ ವಂದನಾ ಕುಟುಂಬಕ್ಕೆ ಜೀವ ಬೆದರಿಕೆ

ಟೋಕಿಯೋದಲ್ಲಿ ಭಾರತೀಯ ಅಥ್ಲೀಟ್‌ಗಳ ಆಟವನ್ನು ನೋಡಿ ಭಾರತೀಯರು ಮೆಚ್ಚುಗೆ ವ್ಯಕ್ತಪಡಿಸಿ ಪ್ರೋತ್ಸಾಹಿಸುತ್ತಿದ್ದರೆ, ಮತ್ತೊಂದೆಡೆ ಹಾಕಿ ಸ್ಟಾರ್ ವಂದನಾ ಕಟಾರಿಯಾ ಕುಟುಂಬಕ್ಕೆ ಮೇಲ್ಜಾತಿಯ ಯುವಕರು ಕಿರುಕುಳ ಕೊಡುತ್ತಿದ್ದಾರೆ. ಉತ್ತರಾಖಂಡ್‌ನ ಹರಿದ್ವಾರದಲ್ಲಿ ವಂದನಾ ಮನೆಯವರ ವಿರುದ್ಧ ಮೇಲ್ಜಾತಿಯ ಯುವಕರು ಜಾತಿ ನಿಂದನೆ ಮಾಡಿದ್ದಾರೆ. ಮಹಿಳಾ ಹಾಕಿ ತಂಡ ಸೆಮಿಫೈನಲ್ ಒಲಿಂಪಿಕ್ಸ್‌ನಲ್ಲಿ ಸೋತ ನಂತರ  ಮೇಲ್ಜಾತಿ ಯುವಕರು ರೋಶ್ನಾಬಾದ್‌ನಲ್ಲಿರುವ ವಂದನಾ ಅವರ ಮನೆ ಮುಂದೆ ಬಂದು ಜಾತಿ ನಿಂದನೆ ಮಾಡುತ್ತಿದ್ದಾರೆ.

ಪಂದ್ಯ ಮುಗಿದ ತಕ್ಷಣ, ಮೇಲ್ಜಾತಿಯ ಇಬ್ಬರು ಪುರುಷರು ಆಕೆಯ ಮನೆಯ ಬಳಿ ಜಮಾಯಿಸಿದ್ದಾರೆ. ಆಕೆಯ ಕುಟುಂಬದ ವಿರುದ್ಧ ಜಾತಿವಾದಿ ಮಾತುಗಳನ್ನು ಕೂಗಿದರು ಎಂದು ವರದಿಯಾಗಿದೆ. ಅವರು ಕುಟುಂಬವನ್ನು ಪಟಾಕಿ ಸಿಡಿಸುವ ಮೂಲಕ ಗೇಲಿ ಮಾಡಿದ್ದಾರೆ. ವಂದನಾ ಅವರ ಮನೆಯ ಹೊರಗೆ ಡ್ಯಾನ್ಸ್ ಮಾಡಿ ತಮಾಷೆ ಮಾಡಿದ್ದಾರೆ.

Latest Videos

undefined

ಟೋಕಿಯೋ ಒಲಿಂಪಿಕ್ಸ್ ಕುರಿತ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಭಾರತವು ಹಲವಾರು ದಲಿತ ಆಟಗಾರರನ್ನು ಹೊಂದಿದ್ದರಿಂದ ಫೈನಲ್‌ನಲ್ಲಿ ಸೋತಿದೆ ಎಂದು ಕೂಗಿ ತಮಾಷೆ ಮಾಡಿದ್ದಾರೆ. ಘಟನೆಯಿಂದ ತೀವ್ರ ಅಸಮಾಧಾನಗೊಂಡಿದ್ದ ವಂದನಾ ಕಟಾರಿಯಾ ಕುಟುಂಬವು ಸ್ಥಳೀಯ ಪೊಲೀಸರಿಗೆ ವಿಷಯ ತಿಳಿಸಿದ್ದು, ನಂತರ ಇಬ್ಬರು ಆರೋಪಿಗಳಲ್ಲಿ ಒಬ್ಬರನ್ನು ಬಂಧಿಸಲಾಗಿದೆ. ಇಡೀ ಘಟನೆಯನ್ನು ಪೊಲೀಸರಿಗೆ ವಿವರಿಸಿದ ಕಟಾರಿಯಾ ಅವರ ಕುಟುಂಬವು ಭಾರತೀಯ ಮಹಿಳಾ ಹಾಕಿ ತಂಡದ ಹೋರಾಟದ ಮನೋಭಾವದ ಬಗ್ಗೆ ತುಂಬಾ ಹೆಮ್ಮೆಪಡುತ್ತದೆ ಎಂದು ಹೇಳಿದ್ದಾರೆ.

ವಂದನಾಳ ಸಹೋದರ ಶೇಖರ್ ಪಂದ್ಯ ಮುಗಿದ ತಕ್ಷಣ ಅವರ ಕುಟುಂಬಕ್ಕೆ ಹೇಗೆ ಕಿರುಕುಳ ನೀಡಲಾಯಿತು ಮತ್ತು ಮೇಲ್ಜಾತಿಯ ಜನರು ಹೇಗೆ ಗೇಲಿ ಮಾಡಿದರು ಎಂದು ಬಹಿರಂಗಪಡಿಸಿದ್ದಾರೆ. ಅವರ ಕುಟುಂಬವು ಹೊರಬಂದಾಗ ಅವರು ಹೊಗಳಲಿಲ್ಲ. ಬದಲಾಗಿ ಅವರ ಬಗ್ಗೆ ಜಾತೀಯತೆಯ ಟೀಕೆಗಳನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ. ಕಟಾರಿಯಾ ಕುಟುಂಬದಿಂದ ಪೊಲೀಸರು ದೂರು ಸ್ವೀಕರಿಸಿದ್ದಾರೆ. ಅವರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ದೃಢಪಡಿಸಿದ್ದಾಋಎ.

click me!