
ಬೆಂಗಳೂರು (ನ.22): ನನ್ನ ಗಂಡ ಬೇರೊಬ್ಬ ಯುವತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆಂದು ಕೋಪಗೊಂಡ ಹೆಂಡತಿ ತನ್ನಿಬ್ಬರು ಪುಟ್ಟ ಮಕ್ಕಳನ್ನು ಕತ್ತು ಹಿಸುಕಿ ಕೊಲೆ ಮಾಡಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಜಾರ್ಖಂಡ್‌ನಿಂದ ದುಡಿಮೆಗಾಗಿ ಬೆಂಗಳೂರಿಗೆ ಬಂದು ಸುಬ್ರಹ್ಮಣ್ಯಪುರದಲ್ಲಿ ವಾಸವಾಗಿದ್ದ ಸುನೀಲ್ ಸಾಹೋ ಮತ್ತು ಮಮತಾ ಸಾಹೋ ದಂಪತಿಗೆ ಶಂಭು ಸಹೋ ಮತ್ತು ಶಿಯಾ ಸಾಹೋ ಎಂಬ ಇಬ್ಬರು ಮಕ್ಕಳಿದ್ದರು. ಸಣ್ಣದೊಂದು ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದ ದಂಪತಿಯ ನಡುವೆ ಎಲ್ಲವೂ ಸರಿಯಾಗಿತ್ತು ಎನ್ನುವಾಗ ಗಂಡನಿಗೆ ಅನೈತಿಕ ಸಂಬಂಧದ ಎಳೆಯೊಂದು ಆರಂಭವಾಗಿತ್ತು. ಗಂಡ ಬೇರೊಂದು ಯುವತಿಯೊಂದಿಗೆ ಮಾತನಾಡುತ್ತಿರುವುದನ್ನು ಕೇಳಿಸಿಕೊಂಡ ಹೆಂಡತಿ ಜಗಳ ಮಾಡಲು ಆರಂಭಿಸಿದ್ದಾರೆ. ಅವಳನ್ನು ಬಿಟ್ಟುಬಿಡು ಎಂದು ಕೇಳಿದ್ದಾಳೆ. ಇದೇ ಕಾರಣಕ್ಕೆ ಇಬ್ಬರ ನಡುವೆಯೂ ಆಗಾಗ ಜಗಳ ನಡೆಯುತ್ತಲೇ ಇತ್ತು. ನಿನ್ನೆಯೂ ಇದೇ ವಿಚಾರಕ್ಕೆ ಜಗಳ ಆರಂಭವಾಗಿದ್ದು, ಹೆಂಡತಿಯ ಕಿರಿಕಿರಿ ತಾಳಲಾರದೇ ಗಂಡ ಆಟೋ ತೆಗೆದುಕೊಂಡು ಹೋಗಿದ್ದನು.
ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಗಂಡ ಜಗಳ ಮಾಡಿಕೊಂಡು ಹೊರಗೆ ಹೋಗಿದ್ದ ವೇಳೆ, ಮನೆಯ ಬಾಗಿಲು ಲಾಕ್ ಮಾಡಿಕೊಂಡು ತನ್ನ ಇಬ್ಬರು ಶಂಭು ಮತ್ತು ಶಿಯಾ ಸಾಹೋ ಮಕ್ಕಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ನಂತರ ತಾನೂ ಚಾಕುವಿನಿಂದ ಕುತ್ತಿಗೆಗೆ ಕೊಯ್ದುಕೊಂಡಿದ್ದಾಳೆ. ಸಾವಿನ ದವಡೆಯಲ್ಲಿ ಪ್ರಾಣಸಂಕಟದಿಂದ ಒದ್ದಾಡುತ್ತಿದ್ದಾಗ ತನ್ನ ತಪ್ಪಿನ ಅರಿವಾಗಿ ಗಂಡನಿಗೆ ಸೆಲ್ಫಿ ಫೋಟೋ ತೆಗೆದು ಗಂಡನಿಗೆ ಕಳಿಸಿದ್ದಾಳೆ. ನಂತರ, 'ಗಲತ್ ಹೋಗಯಾ.. ಮಾಫ್ ಕರೋ' ಎಂದು ಮೆಸೇಜ್ ಹಾಕಿದ್ದಳು.
ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರನ ಹನಿಟ್ರ್ಯಾಪ್ ಮಾಡಿದ ತಬಸುಮ್ ಗ್ಯಾಂಗ್: 2.5 ಕೋಟಿ ವಸೂಲಿ!
ಹೆಂಡತಿ ಮಾಡಿದ ಮೆಸೇಜ್ ನೋಡಿದ ಆಟೋ ಚಾಲಕ ಗಂಡ ಕೂಡಲೇ ಮನೆಗೆ ಬಮದು ಬಾಗಿಲನ್ನು ಒಡೆದು ಒಳಗೆ ಹೋಗಿ ಹೆಂತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ. ನಂತರ ಸುಬ್ರಹ್ಮಣ್ಯಪುರ ಠಾಣೆಗೆ ಮಾಹಿತಿ ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಸುಬ್ರಮಣ್ಯಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜಾರ್ಖಂಡ್ ಮೂಲದ ದಂಪತಿ ಮುಂಬೈನಲ್ಲಿ ಆಟೋ ಓಡಿಸಿಕೊಂಡು ವಾಸವಾಗಿದ್ದರು. ಕಳೆದ 8 ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದರು. ಗಂಡ ಫೋನಿನಲ್ಲಿ ಯಾವುದೋ ಯುವತಿಯೊಂದಿಗೆ ಮಾತನಾಡಿದ್ದಕ್ಕಾಗಿ ಜಗಳ ಮಾಡಿ ಮಕ್ಕಳನ್ನು ಕೊಲೆ ಮಾಡಿ, ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ತಿಳಿದುಬಂದಿದೆ. ಇದೀಗ ಹೆಂಡತಿ ಮಮತಾ ಸಾಹೋ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಇದನ್ನೂ ಓದಿ: ಹಾಸನ: ವರದಕ್ಷಿಣೆಗಾಗಿ ಗರ್ಭಿಣಿಯನ್ನೇ ಕೊಂದ ಪಾಪಿ ಪತಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ