ಹೆಂಡತಿಯ ಮೇಲೆ ಹಲ್ಲೆ ಮಾಡಿದ ನಂತರ ಅವಳಿ ಮಕ್ಕಳನ್ನು ನೆಲಕ್ಕೆ ಬಡಿದು ಕೊಂಡಿದ್ದಾನೆ. ಮಂಚದಿಂದ ಬಿದ್ದು ಗಾಯಗಳಾಗಿವೆ ಎಂದು ಆಸ್ಪತ್ರೆಗೆ ಕರೆತಂದಾಗ ಮಕ್ಕಳು ಸಾವು ಕಂಡಿರುವುದು ಗೊತ್ತಾಗಿದೆ.
ಜೈಪುರ (ಮಾ.30): ಉತ್ತರಾಧಿಕಾರಿಯಾಗಿ ಗಂಡು ಮಗು ಬೇಕು ಎನ್ನುವ ಕಾರಣಕ್ಕಾಗಿ, ಹುಟ್ಟಿ ಐದು ತಿಂಗಳಷ್ಟೇ ಆಗಿದ್ದ ಅವಳಿ ಹೆಣ್ಣು ಮಕ್ಕಳನ್ನು ನೆಲಕ್ಕೆ ಬಡಿದು ಕೊಂದ ತಂದೆಯನ್ನು ಬಂಧಿಸಲಾಗಿದೆ. ರಾಜಸ್ಥಾನದ ಸಿಕಾರ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಮಕ್ಕಳನ್ನು ನೆಲಕ್ಕೆ ಹೊಡೆದು ಕೊಂದ ನಂತರ ಮನೆಯಿಂದ 2 ಕಿಲೋಮೀಟರ್ ದೂರದಲ್ಲಿರುವ ಖಾಲಿ ಜಾಗದಲ್ಲಿ ಇಬ್ಬರೂ ಮಕ್ಕಳ ಶವವನ್ನು ಹೂತು ಹಾಕಿದ್ದ. ಕಳೆದ ಶುಕ್ರವಾರ ಪೊಲೀಸರು ಈ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಅಶೋಕ್ ಯಾದವ್ ಬಂಧಿತ ಆರೋಪಿ. ಗಂಡು ಮಗು ಬೇಕೆಂಬ ಹಠದಿಂದ ಆತ ಪತ್ನಿ ಅನಿತಾ ಜೊತೆ ಸದಾ ಜಗಳವಾಡುತ್ತಿದ್ದ. ಗುರುವಾರ ಪತ್ನಿಯೊಂದಿಗೆ ಜಗಳವಾಡಿದ ನಂತರ ಈ ಕೃತ್ಯ ಎಸಗಿದ್ದಾನೆ. ಕೊಲೆಯಾದ 5 ತಿಂಗಳ ಅವಳಿ ಶಿಶುಗಳಲ್ಲದೆ, ದಂಪತಿಗೆ ಐದು ವರ್ಷದ ಹೆಣ್ಣು ಮಗಳಿದ್ದಾಳೆ. ಅನಿತಾ ಸಂಬಂಧಿಯೊಬ್ಬರು ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ನೀಮ್ ಕಾ ಥಾನಾ ನಗರದ ಕಲೆಕ್ಟರೇಟ್ ಬಳಿಯ ಖಾಲಿ ಜಾಗದಲ್ಲಿ ಈತ ಶಿಶುಗಳನ್ನು ಹೂತು ಹಾಕಿದ್ದನು.
'ಇದು ನನ್ನ ಮರುಜನ್ಮʼ-ತಿಂಗಳುಗಳ ಬಳಿಕ ಮತ್ತೆ ಬಂದ ಯೂಟ್ಯೂಬರ್ ರಣವೀರ್ ಅಲಹಾಬಾದಿಯಾ! ಇಷ್ಟು ದಿನ ಏನಾಯ್ತು?
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿ ಸ್ಥಳವನ್ನು ಸೀಲ್ ಮಾಡಿದ್ದಾರೆ. ಶನಿವಾರ ಯುವಕನೇ ಹೆಣ್ಣು ಮಕ್ಕಳನ್ನು ಹೂತು ಹಾಕಿದ್ದ ಜಾಗವನ್ನು ಪೊಲೀಸರಿಗೆ ತೋರಿಸಿದ್ದಾನೆ. 2024 ನವೆಂಬರ್ 4 ರಂದು ದಂಪತಿಗೆ ಅವಳಿ ಮಕ್ಕಳು ಜನಿಸಿದರು. ಅಶೋಕ್ ಮತ್ತು ಆತನ ಮನೆಯವರಿಗೆ ಹೆಣ್ಣು ಮಕ್ಕಳ ಬಗ್ಗೆ ಆಸಕ್ತಿ ಇರಲಿಲ್ಲ ಎಂದು ಅನಿತಾ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ. ಹೆಂಡತಿಯ ಮೇಲೆ ಹಲ್ಲೆ ಮಾಡಿದ ನಂತರ ಅವಳಿ ಮಕ್ಕಳನ್ನು ನೆಲಕ್ಕೆ ಬಡಿದು ಕೊಂಡಿದ್ದಾನೆ. ಮಂಚದಿಂದ ಬಿದ್ದು ಗಾಯಗಳಾಗಿವೆ ಎಂದು ಆಸ್ಪತ್ರೆಗೆ ಕರೆತಂದಾಗ ಮಕ್ಕಳು ಸಾವು ಕಂಡಿರುವುದು ಗೊತ್ತಾಗಿದೆ. ಇದರ ಬೆನ್ನಲ್ಲೇ ಅನಿತಾ ಸಂಬಂಧಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ.
ʼಕೆಟ್ಟ ಕಣ್ಣು ಯಾವಾಗಲೂ ನೋಡ್ತಿರತ್ತೆ, ಆದರೆ ನನ್ನ ಟಚ್ ಮಾಡೋಕಾಗೋದಿಲ್ಲʼ: ನಟಿ ಪವಿತ್ರಾ ಗೌಡ ಮಾರ್ಮಿಕ ಹೇಳಿಕೆ!